

ವೆಲ್ಲಿಂಗ್ಟನ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 12 ರನ್‌ಗಳಿಂದ ಗೆಲುವು ದಾಖಲಿಸಿದ ನ್ಯೂಜಿಲೆಂಡ್ ತಂಡ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಈ ಜಯದೊಂದಿಗೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್ ತಂಡ 116 ಅಂಕದೊಂದಿಗೆ ಅಗ್ರಸ್ಥಾನಿ ಆಸ್ಟ್ರೇಲಿಯಾ ಜತೆಗೆ ಸಮಬಲ ಸಾಧಿಸಿದರೂ, ದಶಾಂಶ ಲೆಕ್ಕಾಚಾರದಲ್ಲಿ 2ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಸೋಮವಾರ 6 ವಿಕೆಟ್‌ಗೆ 244 ರನ್‌ಗಳಿಂದ 4ನೇ ದಿನದಾಟ ಮುಂದುವರಿಸಿದ ವೆಸ್ಟ್ ಇಂಡೀಸ್ ತಂಡ ಬೆಳಗ್ಗಿನ ಸುಮಾರು 14 ಓವರ್‌ಗಳಲ್ಲೇ 317 ರನ್‌ಗಳಿಗೆ 2ನೇ ಇನಿಂಗ್ಸ್ ಮುಗಿಸಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 131 ರನ್‌ಗೆ ಆಲೌಟ್ ಆಗಿ ಾಲೋಆನ್‌ಗೆ ಸಿಲುಕಿದ್ದ ವಿಂಡೀಸ್ ತಂಡ, ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ವಿಲವಾಯಿತು.
ಸತತ 2ನೇ ಇನಿಂಗ್ಸ್ ಜಯದೊಂದಿಗೆ ಕಿವೀಸ್ (ಶೇ. 62.5) ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲೂ ಇಂಗ್ಲೆಂಡ್ (ಶೇ. 60.8) ತಂಡವನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ (ಶೇ. 82.2) ಮತ್ತು ಭಾರತ (ಶೇ. 75) ಮೊದಲೆರಡು ಸ್ಥಾನದಲ್ಲಿವೆ.
ನ್ಯೂಜಿಲೆಂಡ್: 460, ವೆಸ್ಟ್ ಇಂಡೀಸ್: 131 ಮತ್ತು 79.1 ಓವರ್‌ಗಳಲ್ಲಿ 317 (ಜೇಸನ್ ಹೋಲ್ಡರ್ 61, ಜೋಶ್ವ ಡ ಸಿಲ್ವ 57, ಅಲ್ಜಾರಿ ಜೋಸೆಫ್ 24, ಟ್ರೆಂಟ್ ಬೌಲ್ಟ್ 96ಕ್ಕೆ 3, ವ್ಯಾಗ್ನರ್ 54ಕ್ಕೆ 3, ಸೌಥಿ 96ಕ್ಕೆ 2, ಜೇಮಿಸನ್ 43ಕ್ಕೆ 2). ಪಂದ್ಯಶ್ರೇಷ್ಠ: ಕೈಲ್ ಜೇಮಿಸನ್, ಸರಣಿಶ್ರೇಷ್ಠ: ಹೆನ್ರಿ ನಿಕೋಲ್ಸ್.