

ಹ್ಯಾಮಿಲ್ಟ್ಟ್: ಅನುಭವಿಗಳಾದ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶ ಗಿಟ್ಟಿಸಿಕೊಂಡ ಯುವ ಬ್ಯಾಟ್ಸ್ಮನ್ ಪೃಥ್ವಿ ಷಾ (20 ರನ್, 21 ಎಸೆತ, 3 ಬೌಂಡರಿ) ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ (32 ರನ್, 31 ಎಸೆತ, 6 ಬೌಂಡರಿ) ಆರಂಭಿಕ ಹಂತದ ಒತ್ತಡ ನಿಭಾಯಿಸಿತು.
ಹೊಸ ಜೋಡಿ ಪದಾರ್ಪಣೆಯ ಪಂದ್ಯದಲ್ಲಿ ಮೊದಲ ವಿಕೆಟ್ಗೆ 48 ಎಸೆತಗಳಲ್ಲಿ 50 ರನ್ ಪೇರಿಸಿ ಗಮನಸೆಳೆಯಿತು. ಆದರೆ, ಕೇವಲ 4 ರನ್ಗಳ ಅಂತರದಲ್ಲಿ ಆರಂಭಿಕರು ಪೆವಿಲಿಯನ್ಗೆ ಮರಳಿದರು. ಇವರಿಬ್ಬರು ಭಾರತ ಪರ ಏಕದಿನ ಪಂದ್ಯ ಆಡಿದ 230, 231ನೇ ಆಟಗಾರರೆನಿಸಿದರು.