ತಪ್ಪು ಹುಡುಕಿದ ಬೆನ್ನಲ್ಲೇ ಫೋಟೋ ಡಿಲೀಟ್ ಮಾಡಿದ ರೋಹಿತ್​ ಶರ್ಮ​! ಹಂಚಿಕೊಂಡ ಫೋಟೋದಲ್ಲಿ ಅಂತಹದ್ದೇನಿತ್ತು ?

ವಿಜಯವಾಣಿ - 2024-08-01T153640.061
Published on

ನವದೆಹಲಿ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಕೈಗೊಂಡಿದ್ದ ಟೀಮ್ ಇಂಡಿಯಾ, ಜು.30ರಂದು ನಡೆದ ಮೂರನೇ ಪಂದ್ಯದಲ್ಲಿ ಸೂಪರ್​ ಓವರ್​ನಲ್ಲಿ ರೋಚಕ ಜಯ ಸಾಧಿಸಿತು. ಲಂಕಾ ಪಡೆಯನ್ನು 3-0 ಅಂತರದಿಂದ ಕ್ಲೀನ್​ ಸ್ವೀಪ್ ಮಾಡಿದ ಭಾರತ, ಟಿ20 ಸರಣಿ ವಶಪಡಿಸಿಕೊಂಡಿತು. ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಶುಕ್ರವಾರದಿಂದ (ಆ.02) ಶ್ರೀಲಂಕಾ ವಿರುದ್ಧದ ಏಕದಿನ ಸಿರೀಸ್​ ಗೆಲ್ಲಲು ಎದುರುನೋಡುತ್ತಿದೆ. ಒಂದೆಡೆ ಒಡಿಐ ಸರಣಿ ಗೆಲ್ಲಲು ಭಾರತ ತಂಡ ಸಜ್ಜಾದರೆ, ಮತ್ತೊಂದೆಡೆ ಈ ತಂಡದಲ್ಲಿ ಕ್ರಿಕೆಟ್ ದಿಗ್ಗಜರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಆಡುತ್ತಿರುವುದು ವಿಶೇಷ.

ಏಕದಿನ ಸರಣಿಯ ಮೊದಲ ಪಂದ್ಯದ ಹಿನ್ನಲೆ ತಾವು ನೆಟ್ಸ್​ನಲ್ಲಿ ನಡೆಸಿದ ಅಭ್ಯಾಸದ ಫೋಟೋವೊಂದನ್ನು ಕ್ಯಾಪ್ಟನ್ ರೋಹಿತ್ ಶರ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಸಲಿಗೆ ಇದೇ ಫೋಟೋವನ್ನು ಮೊದಲು ಬಿಸಿಸಿಐ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿತ್ತು. ಇಲ್ಲಿ ರೋಹಿತ್​ರನ್ನು ಗಮನಿಸಿದ ನೆಟ್ಟಿಗರು, ಅವರು ಪೋಸ್ಟ್​ ಮಾಡಿದ ಫೋಟೋ ಕಂಡು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಶರ್ಮ ಹಾಕಿದ ಛಾಯಚಿತ್ರವೇ ಬೇರೆ ತೋರುತ್ತಿದೆ ಮತ್ತು ಬಿಸಿಸಿಐ ಪೋಸ್ಟ್​ ಮಾಡಿರುವ ಫೋಟೋವೇ ಮತ್ತೊಂದು ಹೇಳುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ. ಎರಡನ್ನು ಹೋಲಿಸಿ ಟ್ರೋಲ್ ಮಾಡಿದ ನೆಟ್ಟಿಗರು, ರೋಹಿತ್ ತಮ್ಮ ಫೋಟೋನ ಎಡಿಟ್​ ಮಾಡಿ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ಹೊಟ್ಟೆ ಮರೆಮಾಚುವ ಸಲುವಾಗಿ ರೋಹಿತ್ ಫೋಟೋವನ್ನು ಎಡಿಟ್ ಮಾಡಿ ಹಂಚಿಕೊಂಡಿದ್ದಾರೆ ಎಂದು ನೆಟ್ಟಿಗರು ವ್ಯಾಪಕ ಟ್ರೋಲ್​ ಮಾಡುತ್ತಿದ್ದಂತೆ ರೋಹಿತ್ ತಮ್ಮ ಇನ್​​ಸ್ಟಾಗ್ರಾಮ್​ನಿಂದ ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಫೋಟೋ ಡಿಲೀಟ್ ಮಾಡುವಷ್ಟು ಎಡಿಟಿಂಗ್ ಮಾಡಿದ್ರಾ ಕ್ಯಾಪ್ಟನ್​? ಎಂದು ಪ್ರಶ್ನಿಸುವಂತೆ ಮಾಡಿದೆ. ಒಟ್ಟಾರೆ ಟಿ20 ಸರಣಿ ಗೆದ್ದ ರೀತಿಯಲ್ಲಿ ಏಕದಿನ ಸರಣಿಯನ್ನು ಕೂಡ ಕ್ಲೀನ್ ಸ್ವೀಪ್ ಮುಖಾಂತರವೇ ಗೆಲ್ಲಲಿ ಎಂದು ಕ್ರಿಕೆಟ್ ಪ್ರಿಯರು ಆಶಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net