

ಹಾಂಗ್ರೆೌ: ಬ್ಯಾಟರ್ ಕುಶಾಲ್ ಮಲ್ಲ (137* ರನ್, 50 ಎಸೆತ, 8 ಬೌಂಡರಿ, 12 ಸಿಕ್ಸರ್) ವೇಗದ ಶತಕ ಹಾಗೂ ದಿಪೇಂದ್ರ ಸಿಂಗ್ ಐರಿ (52* ರನ್, 10 ಎಸೆತ, 8 ಸಿಕ್ಸರ್) ಅತಿ ವೇಗದ ಅರ್ಧಶತಕ ನೆರವಿನಿಂದ ನೇಪಾಳ ತಂಡ ಏಷ್ಯಾಡ್ನ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಪರ್ಧೆಯಲ್ಲಿ ಹಲವು ನೂತನ ವಿಶ್ವದಾಖಲೆ ರಚಿಸಿದೆ. ಬುಧವಾರ ಆರಂಭಗೊಂಡ ಪುರುಷರ ಕ್ರಿಕೆಟ್ ಸ್ಪರ್ಧೆಯಲ್ಲಿ ಮಂಗೋಲಿಯಾ ಎದುರು ಮೊದಲು ಬ್ಯಾಟಿಂಗ್ ನಡೆಸಿದ ನೇಪಾಳ 3 ವಿಕೆಟ್ಗೆ 314 ರನ್ ಪೇರಿಸಿತು. ಇದು ಚುಟುಕು ಕ್ರಿಕೆಟ್ನಲ್ಲಿ ದಾಖಲಾದ ತಂಡವೊಂದರ ಗರಿಷ್ಠ ಮೊತ್ತ ಎನಿಸಿದರೆ, ಕುಶಾಲ್ ಮಲ್ಲ 34 ಎಸೆತಗಳಲ್ಲಿ ಅತಿವೇಗದ ಶತಕ ಸಿಡಿಸಿ ಭಾರತದ ರೋಹಿತ್ ಶರ್ಮ ಮತ್ತು ದಣ ಆಫ್ರಿಕಾದ ಡೇವಿಡ್ ಮಿಲ್ಲರ್ (35 ಎಸೆತ) ದಾಖಲೆ ಮುರಿದರು. ದೀಪೇಂದ್ರ ಸಿಂಗ್ ಕೇವಲ 9 ಎಸೆತಗಳಲ್ಲಿ (6,6,6,6,6,6,2,6,6) ಅರ್ಧಶತಕಗಳಿಸಿ, ಯುವರಾಜ್ ಸಿಂಗ್ (12) ಅವರ 16 ವರ್ಷ ಹಿಂದಿನ ದಾಖಲೆ ಪುಡಿಗಟ್ಟಿದರು. ಕುಶಾಲ್&ದೀಪೇಂದ್ರ 193 ರನ್ ಕಲೆಹಾಕಿದ್ದು, 3ನೇ ವಿಕೆಟ್ಗೆ ಅತಿದೊಡ್ಡ ಜತೆಯಾಟ ಎನಿಸಿತು. ಪ್ರತಿಯಾಗಿ ಮಂಗೋಲಿಯಾ 13.1 ಓವರ್ಗಳಲ್ಲಿ 41 ರನ್ಗಳಿಗೆ ಸರ್ವಪತನ ಕಂಡು 273 ರನ್ಗಳಿಂದ ಹೀನಾಯ ಸೋಲು ಕಂಡಿತು. 2019ರಲ್ಲಿ ಐರ್ಲೆಂಡ್ ಎದುರು ಅ್ಘಾನಿಸ್ತಾನ 278 ರನ್ಗಳಿಸಿದ್ದು ಟಿ20 ಕ್ರಿಕೆಟ್ನಲ್ಲಿ ಹಿಂದಿನ ಗರಿಷ್ಠ ಮೊತ್ತ. ನೇಪಾಳ ಇನಿಂಗ್ಸ್ನ 26 ಸಿಕ್ಸರ್ ಕೂಡ ವಿಶ್ವದಾಖಲೆಯಾಗಿದೆ.
26.ನೇಪಾಳ ತಂಡ ಟಿ20 ಕ್ರಿಕೆಟ್ ಇನಿಂಗ್ಸ್ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡ ಎನಿಸಿತು. ಅ್ಘಾನಿಸ್ತಾನ ಹಾಗೂ ಐರ್ಲೆಂಡ್ ತಲಾ 22 ಸಿಕ್ಸರ್ ಸಿಡಿಸಿದ್ದು ಹಿಂದಿನ ದಾಖಲೆ.