

ದುಬೈ: ಭಾರತ ಮಹಿಳಾ ತಂಡದ ಮಾಜಿ ಸ್ಪಿನ್ನರ್ ನೀತು ಡೇವಿಡ್ ಅವರನ್ನು ಐಸಿಸಿ ಹಾಲ್ ಆಫ್ ಫೇಮ್ಗೆ ಸೇರ್ಪಡೆ ಮಾಡಲಾಗಿದೆ. ಇದರೊಂದಿಗೆ ಈ ಗೌರವಕ್ಕೆ ಪಾತ್ರರಾದ ಭಾರತದ 2ನೇ ಮಹಿಳಾ ಕ್ರಿಕೆಟರ್ ಎನಿಸಿದ್ದಾರೆ. ಐಸಿಸಿ ಬುಧವಾರ ಹಾಲ್ ಆ್ ೇಮ್‌ಗೆ ಹಾಲಿ ವರ್ಷ ಸೇರ್ಪಡೆಗೊಂಡ ಮೂವರು ಆಟಗಾರರ ಹೆಸರು ಬಹಿರಂಗಪಡಿಸಿದ್ದು, ಇಂಗ್ಲೆಂಡ್‌ನ ಅಲಸ್ಟೈರ್ ಕುಕ್, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಈ ಗೌರವಕ್ಕೆ ಪಾತ್ರರಾದ ಇನ್ನಿಬ್ಬರು ಆಟಗಾರರಾಗಿದ್ದಾರೆ.
ಪ್ರಸ್ತುತ ಭಾರತ ಮಹಿಳಾ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥೆ ಆಗಿರುವ 47 ವರ್ಷದ ನೀತು ಡೇವಿಡ್, 100ಕ್ಕೂ ಅಧಿಕ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2005ರ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸುವ ಮೂಲಕ ಭಾರತ ತಂಡ ಚೊಚ್ಚಲ ಬಾರಿಗೆ ಫೈನಲ್‌ಗೇರುವಲ್ಲಿ ನೀತು ಪ್ರಮುಖ ಪಾತ್ರವಹಿಸಿದ್ದರು. ಜತೆಗೆ ಭಾರತದ ಪರ 100 ವಿಕೆಟ್ ಸಾಧನೆ ಮಾಡಿದ ಮೊದಲ ಆಟಗಾರ್ತಿಯೂ ಆಗಿದ್ದಾರೆ. ಉತ್ತರ ಪ್ರದೇಶದ ನೀತು ಡೇವಿಡ್ 17ನೇ ವಯಸ್ಸಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತದ ಪರ 10 ಟೆಸ್ಟ್ ಪಂದ್ಯಗಳಲ್ಲಿ 41 ವಿಕೆಟ್ ಪಡೆದಿರುವ ಅವರು, 97 ಏಕದಿನದಲ್ಲಿ 141 ವಿಕೆಟ್ ಕಬಳಿಸಿದ್ದಾರೆ. ಡಯಾನಾ ಎಡುಲ್ಜಿ ಐಸಿಸಿ ಹಾಲ್ ಆ್ ೇಮ್‌ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್.
2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಬಳಿಕವೂ 2013ರವರೆಗೆ ದೇಶೀಯ ಟೂರ್ನಿಯಲ್ಲಿ ಮುಂದುವರಿದ ನೀತು, ರೈಲ್ವೇಸ್ ತಂಡ 2012-13ರ ಸೀನಿಯರ್ ಮಹಿಳಾ ಟಿ20 ಚಾಂಪಿಯನ್ ಆಗಲು ನೆರವಾದರು. ಜತೆಗೆ ಏಕದಿನದಲ್ಲಿ 2ನೇ ಗರಿಷ್ಠ ವಿಕೆಟ್ ಸಾಧಕಿ ಎನಿಸಿದ್ದಾರೆ. 1995ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ 53 ರನ್‌ಗಳಿಗೆ 8 ವಿಕೆಟ್ ಪಡೆದಿರುವುದು, ಇದುವರೆಗೆ ಇನಿಂಗ್ಸ್‌ವೊಂದರ ಅತ್ಯುತ್ತಮ ಸ್ಪೆಲ್ ಆಗಿದೆ.
ಕುಕ್, ಎಬಿಡಿಗೂ ಗೌರವ: ಇಂಗ್ಲೆಂಡ್ ಪರ 250ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಮಾಜಿ ನಾಯಕ ಅಲಸ್ಟೈರ್ ಕುಕ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿರುವ ಆಂಗ್ಲ ಬ್ಯಾಟರ್ ಎನಿಸಿದ್ದಾರೆ. ಜತೆಗೆ 2013,2015ರ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕುಕ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಆತಿಥೇಯ ಭಾರತ ವಿರುದ್ಧ 28 ವರ್ಷಗಳ ಬಳಿಕ ಇಂಗ್ಲೆಂಡ್ ಟೆಸ್ಟ್ ಸರಣಿ ಜಯಿಸುವಲ್ಲಿಯೂ ಕುಕ್ ಪ್ರಮುಖ ಪಾತ್ರವಹಿಸಿದ್ದರು. ಮಿ.360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ 14 ವರ್ಷಗಳ ವೃತ್ತಿಜೀವನದ ಸಾಧನೆಗೆ ಹಾಲ್ ಆ್ ೇಮ್ ಗೌರವಕ್ಕೆ ಪಾತ್ರರಾಗಿದ್ದು, ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸುದೀರ್ಘ ಪತ್ರದ ಮೂಲಕ ಆರ್‌ಸಿಬಿ ತಂಡದಲ್ಲಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ, ಶತಕ, 150 ರನ್‌ಗಳಿಸಿದ ದಾಖಲೆ ಹೊಂದಿರುವ ಸ್ಫೋಟಕ ಬ್ಯಾಟರ್ ಎಬಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.
ಐಸಿಸಿ ಆಫ್ ಫೇಮ್ಗೆ ಎಬಿ ಡಿವಿಲಿಯರ್ಸ್ ಅತ್ಯಂತ ಅರ್ಹ ಸೇರ್ಪಡೆಯಾಗಿದ್ದಾರೆ. ನನ್ನೊಂದಿಗೆ ಆಡಿದ ಆಟಗಾರರ ಪೈಕಿ ಎಬಿಡಿ ಅತ್ಯಂತ ಪ್ರತಿಭಾನ್ವಿತರು. ಕ್ರಿಕೆಟ್ ಆಟದ ಮೇಲೆ ಅವರು ಬೀರಿರುವ ಪ್ರಭಾವ ಅಪಾರವಾದುದು. ಸಾಮರ್ಥ್ಯದ ಮೇಲೆ ಅವರು ಇಟ್ಟ ನಂಬಿಕೆಯೂ ಅಗಾಧವಾದುದು. | ವಿರಾಟ್ ಕೊಹ್ಲಿ