ನೀರಜ್ ಚೋಪ್ರಾ ಮುಡಿಗೆ ಮತ್ತೊಂದು ಕಿರೀಟ, ಜಾವೆಲಿನ್ ಎಸೆತದಲ್ಲಿ ಭಾರತೀಯರ ಪಾರುಪತ್ಯ

New-Project-1-2
Published on

ಹಾಂಗ್‌ರೆೌ: ಭಾರತದ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಸರ್ವಶ್ರೇಷ್ಠ ನಿರ್ವಹಣೆಯ ಸಾಧನೆ ತೋರಿದ್ದಾರೆ. ಪದಕ ಸ್ಪರ್ಧೆಯ 11ನೇ ದಿನವಾದ ಬುಧವಾರ ಭಾರತ 3 ಚಿನ್ನ, 5 ಬೆಳ್ಳಿ ಮತ್ತು 4 ಕಂಚಿನ ಪದಕ ಒಲಿಸಿಕೊಂಡಿತು. ಈ ಮೂಲಕ ಒಟ್ಟು 81 ಪದಕಗಳನ್ನು (18 ಚಿನ್ನ, 31 ಬೆಳ್ಳಿ, 32 ಕಂಚು) ಗೆದ್ದ ಸಾಧನೆ ಮಾಡಿದ ಭಾರತ, 2018ರ ಏಷ್ಯಾಡ್‌ನಲ್ಲಿ ಸರ್ವಾಧಿಕ 70 ಪದಕ, 16 ಚಿನ್ನ ಮತ್ತು 23 ಬೆಳ್ಳಿ ಗೆದ್ದಿದ್ದ ತನ್ನ ದಾಖಲೆಯನ್ನು ಮುರಿಯಿತು.

ಒಲಿಂಪಿಕ್ಸ್-ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಕೂಟದ 17ನೇ ಚಿನ್ನ ಗೆದ್ದುಕೊಡುವುದರೊಂದಿಗೆ ಭಾರತ 2018ರಲ್ಲಿ ಗರಿಷ್ಠ 16 ಚಿನ್ನ ಜಯಿಸಿದ್ದ ಸಾಧನೆಯನ್ನೂ ಸುಧಾರಿಸಿಕೊಂಡಿತು. ಬಳಿಕ ಪುರುಷರ ರಿಲೇ ತಂಡ ಕೂಟದ 18ನೇ ಚಿನ್ನ ಗೆದ್ದುಕೊಟ್ಟಿತು. ಈ ನಡುವೆ ಸ್ಕ್ವಾಷ್, ಹಾಕಿ, ಬ್ರಿಡ್ಜ್‌ನಲ್ಲಿ ಭಾರತೀಯರು ೈನಲ್‌ಗೇರಿರುವುದರಿಂದ ಈ ಬಾರಿ 100 ಪದಕ ಮತ್ತು 25 ಚಿನ್ನದ ಪದಕ ಗೆಲ್ಲುವ ತನ್ನ ಗುರಿಯತ್ತ ಭಾರತ ದಿಟ್ಟವಾಗಿಯೇ ಹೆಜ್ಜೆ ಇಟ್ಟಿದೆ.

ನೀರಜ್‌ಗೆ ಚಿನ್ನ, ಕಿಶೋರ್‌ಗೆ ಬೆಳ್ಳಿ: ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ನಿರೀಕ್ಷೆಯಂತೆಯೇ ಜಾವೆಲಿನ್ ಎಸೆತದಲ್ಲಿ ಚಿನ್ನಕ್ಕೆ ಮುತ್ತಿಟ್ಟರೆ, ಭಾರತದ ಮತ್ತೋರ್ವ ಸ್ಪರ್ಧಿ ಕಿಶೋರ್ ಜೆನಾ ಬೆಳ್ಳಿ ಪದಕ ಒಲಿಸಿಕೊಂಡರು. ಇದರೊಂದಿಗೆ ಭಾರತ ಈ ಸಲ ಮೊದಲ ಬಾರಿಗೆ ಒಂದೇ ಸ್ಪರ್ಧೆಯಲ್ಲಿ ಚಿನ್ನ-ಬೆಳ್ಳಿ ಗೆದ್ದ ಸಾಧನೆ ಮಾಡಿತು. ನೀರಜ್ 88.88 ಮೀ. ಎಸೆತದೊಂದಿಗೆ ಹಾಲಿ ಋತುವಿನ ಶ್ರೇಷ್ಠ ನಿರ್ವಹಣೆ ತೋರಿದರೆ, ಒಡಿಶಾದ ಕಿಶೋರ್ ವೈಯಕ್ತಿಕ ಶ್ರೇಷ್ಠ 87.54 ಮೀ. ಎಸೆದರು. ನೀರಜ್ ಅವರ ಮೊದಲ ಎಸೆತದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಆ ಎಸೆತವನ್ನು ಮಾಪನ ಮಾಡದೆ ಅವರಿಗೆ ಮರು ಅವಕಾಶ ನೀಡಲಾಯಿತು. ನೀರಜ್‌ರ ಮೊದಲ ಎಸೆತದ ಪರಿಶ್ರಮ ವ್ಯರ್ಥಗೊಳಿಸಿದ ಆತಿಥೇಯ ಚೀನಾ ಅಧಿಕಾರಿಗಳ ಈ ಎಡವಟ್ಟು ಭಾರಿ ಟೀಕೆಗೂ ಗುರಿಯಾಯಿತು. ಈ ನಡುವೆ 3ನೇ ಎಸೆತದ ಬಳಿಕ ಕಿಶೋರ್, ನೀರಜ್‌ರನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿದ್ದರು. ಆದರೆ 4ನೇ ಯತ್ನದಲ್ಲಿ ನೀರಜ್ ಲಯಕ್ಕೆ ಮರಳಿ ಮತ್ತೆ ಅಗ್ರಸ್ಥಾನಕ್ಕೇರಿದರು. ಇದೇ ವೇಳೆ ಕಿಶೋರ್‌ಗೆ 2024ರ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಯೂ ಒಲಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net