American magazine:ಅಮೆರಿಕ ನಿಯತಕಾಲಿಕೆಯ ಜಾಗತಿಕ ಸಾಧಕರ ಪಟ್ಟಿಯಲ್ಲಿ ಭಾರತೀಯ ಅಥ್ಲೀಟ್​ಗೆ ಅಗ್ರಸ್ಥಾನ

New Project (3)
Published on

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ರಜತ ವಿಜೇತ, ಭಾರತದ ಜಾವೆಲಿನ್ ಥ್ರೊ ಪಟು ನೀರಜ್ ಚೋಪ್ರಾ, 2024ರ ವಿಶ್ವದ ಅಗ್ರ ಪುರುಷ ಜಾವೆಲಿನ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ನಿಯತಕಾಲಿಕೆಯೊಂದು ಪ್ರಕಟಿಸಿರುವ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದ ಜಾಗತಿಕ ಸಾಧಕರ ಪಟ್ಟಿಯಲ್ಲಿ ನೀರಜ್ ಈ ಸಾಧನೆ ಮಾಡಿದ್ದಾರೆ.

1948ರಲ್ಲಿ ಸ್ಥಾಪಿತವಾದ ನಿಯತಕಾಲಿಕೆಯನ್ನು ‘ದಿ ಬೈಬಲ್ ಆಫ್ ದಿ ಸ್ಪೋರ್ಟ್ಸ್’ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ವಿಶ್ವ ಮತ್ತು ಅಮೆರಿಕ ಅಥ್ಲೀಟ್ಸ್‌ಗಳ ಶ್ರೇಯಾಂಕಗಳನ್ನು ಈ ನಿಯತಕಾಲಿಕೆ ಪ್ರಕಟಿಸುತ್ತದೆ. ಜತೆಗ ನಿಯತಕಾಲಿಕವನ್ನು ಜಾಗತಿಕ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದ ಪ್ರಾಧಿಕಾರ ಎಂದೂ ಗುರುತಿಸಲಾಗಿದೆ.

ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಮ್ ಹಾಗೂ ಎರಡು ಬಾರಿ ವಿಶ್ವ ಚಾಂಪಿಯನ್ ಗ್ರೆನೆಡದ ಆಂಡರ್ಸನ್ ಪೀಟರ್ಸ್‌ ಅವರನ್ನು ಹಿಂದಿಕ್ಕಿ 27 ವರ್ಷದ 27 ವರ್ಷದ ನೀರಜ್ ಚೋಪ್ರಾ ಅಗ್ರಸ್ಥಾನ ಸಂಪಾದಿಸಿದ್ದಾರೆ. 2023ರ ರ‌್ಯಾಂಕಿಂಗ್‌ನಲ್ಲೂ ನೀರಜ್ ಮೊದಲ ಸ್ಥಾನ ಪಡೆದಿದ್ದರು. ಅರ್ಷದ್ ನದೀಮ್ ಈ ರ‌್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಕಳೆದ ವರ್ಷ ಗಾಯದ ಸಮಸ್ಯೆಯ ನಡುವೆಯೂ ಪ್ರಮುಖ ಟೂರ್ನಿಗಳಲ್ಲಿ ಭಾಗವಹಿಸಿದ್ದ ನೀರಜ್, ಪಾವೋ ನುರ್ಮಿ ಗೇಮ್ಸ್‌ನಲ್ಲಿ ಮಾತ್ರ ಪ್ರಶಸ್ತಿ ಜಯಿಸಿದ್ದರು. ದೋಹಾ, ಲೌಸನ್ನೆ ಹಾಗೂ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನಿ ಎನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net