ನೀರಜ್​ ಚೋಪ್ರಾ ಡಯಟ್​ ಪ್ಲ್ಯಾನ್​ ಎಷ್ಟು ಸಿಂಪಲ್​ ಗೊತ್ತಾ; ಪ್ರತಿಯೊಬ್ಬರು ಫಾಲೋ ಮಾಡವಷ್ಟು ಸರಳ

Untitled-design-2024-08-14T174434.508
Published on

ನವದೆಹಲಿ: ನೀರಜ್ ಚೋಪ್ರಾ ಯಾರಿಗೆ ಗೊತ್ತಿಲ್ಲ ಹೇಳಿ... ಪ್ರತಿಯೊಬ್ಬರಿಗೂ ಚಿರಪರಿಚಿತ ಈ ಭಾರತದ ಚಿನ್ನದ ಹುಡುಗ. ನೀರಜ್​ ಟೋಕಿಯೋ 2020ರ ಒಲಿಂಪಿಕ್ಸ್​​ ಮೂಲಕ ಒಲಂಪಿಕ್ಸ್​​ಗೆ ಪದಾರ್ಪಣೆ ಮಾಡಿದರು. ಈ ಒಲಂಪಿಕ್ಸ್​​ನಲ್ಲಿ ಚಿನ್ನದ ಪದಕ ಪಡೆಯುv ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ​ ನೀರಜ್​ ಅವರ ದಿನಚರಿಯನ್ನು, ಆಹಾರಕ್ರಮ ಹಾಗೂ ಫಿಟ್​ನೆಸ್​ ಬಗ್ಗೆ ತಿಳಿಯಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ.

ಒಬ್ಬ ಅಥ್ಲೀಟ್​ಗೆ ಫಿಟ್​ನೆಸ್​ ಬಹಳ ಮುಖ್ಯ. ಏಕೆಂದರೆ ಟೋನ್ಡ್​ ಸ್ನಾಯುಗಳು ಮಾತ್ರವಲ್ಲದೆ ಸ್ನಾಯುಗಳಲ್ಲಿ ಅವರ ಕ್ರೀಡೆಗೆ ಬೇಕಾದ ಶಕ್ತಿ ಇರಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಕ್ರೀಡಾಪಟುಗಳು ತಮ್ಮ ಅಭ್ಯಾಸದೊಂದಿಗೆ ಆಹಾರಪದ್ಧತಿಯ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ. ಎಷ್ಟೇ ಇಷ್ಟವಾದ ತಿಂಡಿಯಿದ್ದರೂ ತಿನ್ನುವುದನ್ನು ಕಂಟ್ರೋಲ್​ ಮಾಡುತ್ತಿರುತ್ತಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನೀರಜ್​ ಚೋಪ್ರಾ ತಮ್ಮ ಆಹಾರ ಕ್ರಮದ ಬಗ್ಗೆ ಹೇಳಿದ್ದಾರೆ. ಬೆಳಗ್ಗೆ ಉಪಹಾರದಲ್ಲಿ ಹಣ್ಣುಗಳು, ಮೊಸರು, ಓಟ್ಸ್​​, 3-4 ಮೊಟ್ಟೆಯ ಬಿಳಿಭಾಗ, 2 ಬ್ರೆಡ್​ ಪೀಸ್. ಅದಲ್ಲದೆ ಜ್ಯೂಸ್​​ ಅಥವಾ ಎಳನೀರು, ಡ್ರೈಫ್ರೂಟ್ಸ್​​ ಸೇವಿಸುತ್ತೇನೆ ಎಂದಿದ್ದಾರೆ. ಮಧ್ಯಾಹ್ನದ ಊಟಕ್ಕೆ ಮೊಸರು, ರೈಸ್​​, ದಾಲ್​, ತರಕಾರಿ, ಗ್ರಿಲ್ಡ್​ ಚಿಕನ್​ ಮತ್ತು ಸಲಾಡ್​​ ಅವರ ಆದ್ಯತೆ ಆಗಿದೆಯಂತೆ, ಸಂಜೆ ಸಮಯದಲ್ಲಿ ಬಾಳೆಹಣ್ಣು, ಡ್ರೈಫ್ರೂಟ್ಸ್​​, ತಾಜಾ ಹಣ್ಣಿನ ಜ್ಯೂಸ್​​ ಇದ್ದರೆ, ರಾತ್ರಿ ಊಟಕ್ಕೆ ಕಾರ್ಬೋಹೈಡ್ರೇಟ್​ ಒಳಗೊಂಡಿರುವ ಆಹಾರವನ್ನು ತಪ್ಪಿಸುವುದಾಗಿ ತಿಳಿಸಿದ್ದಾರೆ. ತರಕಾರಿಗಳು, ಸಲಾಡ್​ಗಳು, ಪ್ರೋಟೀನ್​ ಇರುವ ಆಹಾರವನ್ನು ಸೇವಿಸುವಾಗಿ ಹೇಳಿದ್ದಾರೆ. ಮಲಗುವ ಮುನ್ನ ಹಾಲು, ಖರ್ಜೂರ ನನ್ನ ಆಹಾರ ಕ್ರಮದಲ್ಲಿ ಇರುತ್ತದೆ ಎಂದು ಹೇಳಿದರು.

ನೀರಜ್ ಅವರು ಕ್ರೀಡಾಪಟುಗಳು ದೇಹದಲ್ಲಿ ಸ್ವಲ್ಪ ಹೆಚ್ಚು ಕೊಬ್ಬನ್ನು ಕಾಪಾಡಿಕೊಳ್ಳಲು ಸಲಹೆ ನೀಡುತ್ತಾರೆ. ಏಕೆಂದರೆ ಇದು ಅವರಿಗೆ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಸೀಮಿತವಾಗಿ ಉಳಿಯುವುದರಿಂದ ಈ ಕೊಬ್ಬು ಆರೋಗ್ಯಕರವಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ. ಎಲ್ಲರಂತೆ ನೀರಜ್​ ಚೋಪ್ರಾ ಅವರಿಗೂ ದೇಸಿ ಆಹಾರವನ್ನು ಇಷ್ಟಪಡುತ್ತಾರೆ. ಗುಲಾಬ್​ ಜಾಮೂನ್​ ಜತೆಗೆ ಚುರ್ಮಾ, ಖೀರ್​​, ಗೋಲ್ಗಪ್ಪಾ, ಐಸ್​ಕ್ರೀಂ ಎಂದರೆ ಅವರಿಗೆ ಇಷ್ಟವಂತೆ.

ಸಂದರ್ಶನದಲ್ಲಿ ಇನ್ನೊಂದು ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನೀರಜ್​ ಚೋಪ್ರಾ ಅವರು 2016ರವರೆಗೆ ಸಸ್ಯಾಹಾರಿಯಾಗಿದ್ದರಂತೆ, ಆದರೆ ಅಮೆರಿಕದ ಪೋರ್ಟ್​ಲ್ಯಾಂಡ್​ನಲ್ಲಿನ ತರಬೇತಿ ಶಿಬಿರಕ್ಕೆ ಹೋದ ಬಳಿಕ ಅಲ್ಲಿ ಸಸ್ಯಾಹಾರಿ ಆಹಾರದಲ್ಲಿ ಅಗತ್ಯವಾದ ಪೋಷಕಾಂಶಗಳು ಪಡೆಯುವುದು ಕಷ್ಟವಾದ್ದರಿಂದ ಮಾಂಸಹಾರವನ್ನು ಆರಂಭಿಸಿದರಂತೆ. ಸದ್ಯ ಸಾಲ್ಮನ್​ ಮೀನು ಅವರ ಆಹಾರಕ್ಕೆ ಸೇರ್ಪಡೆಯಾಗಿದೆ.

ಇತ್ತೀಚೆಗೆ ನಡೆದ ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ನೀರಜ್​ ಚೋಪ್ರಾ ಅವರು ಪುರಷರ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ ಜಾವೆಲಿನ್​ ಅನ್ನು 89.45ಮೀ ದೂರಕ್ಕೆ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ಪಡೆದುಕೊಂಡರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net