ಗರ್ಲ್​ಫ್ರೆಂಡ್​​ ಗರ್ಭಿಣಿಯಾಗಿದ್ದಾಗ ಬೇರೆ ಹೆಣ್ಣಿನ ಸಂಗ, ತಪ್ಪೊಪ್ಪಿಕೊಂಡ ಫುಟ್​ಬಾಲ್​ ತಾರೆ ನೇಮರ್​

naymer1
Published on

ರಿಯೋ ಡಿ ಜನೈರೊ: ಗರ್ಲ್ ಫ್ರೆಂಡ್​​ ಬ್ರುನಾ ಬಿಯಾನ್​ಕಾರ್ಡಿ ಗರ್ಭಿಣಿಯಾಗಿದ್ದ ಸಮಯದಲ್ಲಿ ಬೇರೆ ಹೆಣ್ಣಿನ ಸಂಗ ಮಾಡುವ ಮೂಲಕ ಮೋಸ ಮಾಡಿರುವೆ ಎಂದು ಬ್ರೆಜಿಲ್​ ಮತ್ತು ಪ್ಯಾರಿಸ್​ ಸೇಂಟ್​ ಜಮೈರ್ನ್​ ಫುಟ್​ಬಾಲ್​ ತಂಡದ ತಾರೆ ನೇಮರ್​ ಸಾಮಾಜಿಕ ಜಾಲತಾಣದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಖಾಸಗಿ ಬದುಕಿನ ಬಗ್ಗೆ ಸುದೀರ್ ಪೋಸ್ಟ್​ ಹಾಕಿರುವ 31 ವರ್ಷದ ನೇಮರ್​, "ನಾನೊಂದು ತಪ್ಪು ಮಾಡಿರುವೆ. ನಾನು ನಿನಗೆ ಮೋಸ ಮಾಡಿರುವೆ. ಈ ತಪ್ಪಿನ ಬಗ್ಗೆ ಪ್ರತಿದಿನವೂ ಹೇಳಬಲ್ಲೆ. ಆದರೆ ಈ ತಪ್ಪನ್ನು ನಾನು ನನ್ನ ಮನೆಯ ವೈಯಕ್ತಿಕ ಬದುಕಿನಲ್ಲೇ ತಿದ್ದಿಕೊಳ್ಳುವೆ. ಬ್ರುನಾ, ನಾನು ಈಗಾಗಲೆ ಈ ಬಗ್ಗೆ ನಿನ್ನಲ್ಲಿ ಕ್ಷಮೆಯಾಚಿಸಿರುವೆ. ಇದೀಗ ಸಾರ್ವಜನಿಕವಾಗಿಯೂ ನಿನ್ನ ಕ್ಷಮೆಯಾಚಿಸಲು ಬಯಸಿರುವೆ' ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಹಲವು ಗರ್ಲ್ ಫ್ರೆಂಡ್​​​ಗಳನ್ನು ಹೊಂದಿದ್ದ ನೇಮರ್​, ಕಳೆದ ವರ್ಷ ಏಪ್ರಿಲ್​ನಿಂದ ಬ್ರುನಾ ಬಿಯಾನ್​ಕಾರ್ಡಿ ಜತೆ ಡೇಟಿಂಗ್​ನಲ್ಲಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅವರು ಕಳೆದ ಏಪ್ರಿಲ್​ನಲ್ಲಿ ಪ್ರಕಟಿಸಿದ್ದರು. ನೇಮರ್​ ಈಗಾಗಲೆ ಬಾಡಿಗೆ ತಾಯಿಯ ಮೂಲಕ 11 ವರ್ಷದ ಓರ್ವ ಪುತ್ರನನ್ನು ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net