

ನೋಯ್ಡಾ: ರೈಡರ್ ನವೀನ್ ಕುಮಾರ್ ಅವರ ಸೂಪರ್ ಟೆನ್ ಸಾಹಸದ ಫಲವಾಗಿ ದಬಾಂಗ್ ಡೆಲ್ಲಿ ಎದುರು ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ 87ನೇ ಹಣಾಹಣಿಯಲ್ಲಿ ತಮಿಳ್ ತಲೈವಾಸ್ ತಂಡವನ್ನು 11 ಅಂಕಗಳಿಂದ ಪರಾಭವಗೊಳಿಸಿತು. ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದ ಮೊದಲ ಅವಧಿಯಲ್ಲಿ ತಲೈವಾಸ್ ತಂಡದಿಂದ ದಿಟ್ಟ ಹೋರಾಟವನ್ನು ಎದುರಿಸಿದ ಹೊರತಾಗಿಯೂ ದ್ವಿತೀಯಾರ್ಧದಲ್ಲಿಅಬ್ಬರಿಸುವ ಮೂಲಕ 32-21 ಅಂಕಗಳಿಂದ ತಮಿಳ್ ತಂಡವನ್ನು ಮಣಿಸುವಲ್ಲಿಯಶಸ್ವಿಯಾಯಿತು.
ಹಿಂದಿನ ಪಂದ್ಯದಲ್ಲಿ ಪಟನಾ ಪೈರೇಟ್ಸ್ ವಿರುದ್ಧ 39-39 ಅಂಕಗಳಿಂದ ಡ್ರಾ ಸಾಧಿಸಿದ್ದ ದಿಲ್ಲಿ, ತಲೈವಾಸ್ ವಿರುದ್ಧ ಗೆಲುವಿನ ಲಯಕ್ಕೆ ಮರಳಿ, 7ನೇ ಜಯದೊಂದಿಗೆ ಒಟ್ಟಾರೆ 48 ಅಂಕಗಳನ್ನು ಕಲೆಹಾಕಿತು. ಅತ್ತ ದ್ವಿತೀಯಾರ್ಧದಲ್ಲಿನೀರಸ ಪ್ರದರ್ಶನ ನೀಡಿದ ತಲೈವಾಸ್ 9ನೇ ಸೋಲಿಗೆ ಗುರಿಯಾಯಿತು.
ದಬಾಂಗ್ ದಿಲ್ಲಿ ತಂಡದ ಪರ ಅಬ್ಬರಿಸಿದ ನವೀನ್ ಕುಮಾರ್ 11 ಅಂಕಗಳನ್ನು ಗಳಿಸಿ ತಂಡದ ಜಯದಲ್ಲಿ ನಿರ್ಣಾಯಕ ಪಾತ್ರವಹಿಸಿದರೆ, ನಾಯಕ ಅಶು ಮಲಿಕ್ 5 ಹಾಗೂ ಡಿಫೆಂಡರ್ ಯೋಗೇಶ್ 4 ಅಂಕ ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು. ತಮಿಳ್ ತಲೈವಾಸ್ ತಂಡದ ಪರ ಏಕಾಂಗಿ ಹೋರಾಟ ಮಾಡಿದ ಮೋಯಿನ್ 8 ಅಂಕಗಳನ್ನು ಗಳಿಸಿದರೆ, ರಂಜೀತ್ ಮತ್ತು ಆಮಿರ್ ತಲಾ 3 ಅಂಕ ಗಳಿಸಲಷ್ಟೇ ಶಕ್ತರಾದರು.
ಪಂದ್ಯ ಮುಕ್ತಾಯವಾಗಲು ಹತ್ತು ನಿಮಿಷಗಳ ಆಟ ಬಾಕಿ ಇದ್ದಾಗ ತಲೈವಾಸ್ ತಂಡ 2 (15-17) ಅಂಕಗಳ ಹಿನ್ನಡೆಯನ್ನು ತಗ್ಗಿಸುವ ಜತೆಗೆ ಎದುರಾಳಿ ಮೇಲೆ ಒತ್ತಡ ಹೇರಲು ಪ್ರಯತ್ನ ನಡೆಸಿತು. ಆದರೆ ಸ್ಟಾರ್ ರೇಡರ್ ನವೀನ್ ಕುಮಾರ್ ಸೂಪರ್ ಅಬ್ಬರಕ್ಕೆ ಕಂಗೆಟ್ಟಿತು. ನವೀನ್ ಅವರ ಮಿಂಚಿನ ದಾಳಿಯಿಂದಾಗಿ ಡೆಲ್ಲಿ 34ನೇ ನಿಮಿಷದಲ್ಲಿ ತಲೈವಾಸ್ ಆಟಗಾರರನ್ನು ಮೊದಲ ಬಾರಿ ಆಲೌಟ್ ಮಾಡಿತು. ಇದು ತಂಡದ ಮುನ್ನಡೆಯನ್ನು 25-17ಕ್ಕೆ ವಿಸ್ತರಿಸಿತು. ಐದು ನಿಮಿಷಗಳಿರುವಾಗ 26-17ರಲ್ಲಿಅಂತರ ಕಾಯ್ದುಕೊಳ್ಳುವಲ್ಲಿಯಶಸ್ವಿಯಾದ ದಬಾಂಗ್ ದಿಲ್ಲಿಆಟಗಾರರು, ಎಚ್ಚರಿಕೆ ಆಟಕ್ಕೆ ಮೊರೆ ಹೋದರು. ಪರಿಣಾಮ ರೇಡಿಂಗ್ ಮತ್ತು ಟ್ಯಾಕಲ್‌ನಲ್ಲಿಅಂಕ ಗಳಿಸಲು ತಲೈವಾಸ್ ತಿಣುಕಾಡಬೇಕಾಯಿತು.
ಮೊದಲಾರ್ಧ ಸಮಬಲಗೊಂಡ ಕಾರಣ ಉಭಯ ತಂಡಗಳು ಮುನ್ನಡೆ ಪಡೆಯುವ ಕಾರ್ಯತಂತ್ರಗಳೊಂದಿಗೆ ದ್ವಿತೀಯಾರ್ಧ ಆರಂಭಿಸಿದವು. ಆದರೆ 20ರಿಂದ 30 ನಿಮಿಷಗಳ ಆಟದಲ್ಲಿ ತಲೈವಾಸ್ ಕೇವಲ 3 ಅಂಕ ಗಳಿಸಲು ಶಕ್ತವಾದರೆ, ದಬಾಂಗ್ 5 ಅಂಕಗಳನ್ನು ಗಳಿಸಿತು. 25ನೇ ನಿಮಿಷಕ್ಕೆ ಉಭಯ ತಂಡಗಳು 13-13ರಲ್ಲಿ ಸಮಬಲದ ಪೈಪೋಟಿ ನೀಡಿದವು. ಡು ಆರ್ ಡೈನಲ್ಲಿ ಯಶ ಕಂಡು ಡೆಲ್ಲಿ 30 ನಿಮಿಷಗಳ ಆಟ ಮುಕ್ತಾಯಕ್ಕೆ 17-15ರಲ್ಲಿಅಂತರ ಕಾಯ್ದುಕೊಂಡಿತು. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದ ಮೊದಲ 20 ನಿಮಿಷಗಳ ಆಟದಲ್ಲಿ ತಮಿಳ್ ತಲೈವಾಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು 12-12 ಅಂಕಗಳಿಂದ ಸಮಬಲದ ಹೋರಾಟ ನೀಡಿದವು.
ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ರಕ್ಷ ಣಾತ್ಮಕ ಆಟಕ್ಕೆ ಆದ್ಯತೆ ನೀಡಿದವು. ಹೀಗಾಗಿ ಎರಡೂ ತಂಡಗಳ ರೇಡರ್‌ಗಳು ದಾಳಿಯಲ್ಲಿನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದವು. ತಲೈವಾಸ್ ತಂಡ ರೇಡಿಂಗ್‌ನಲ್ಲಿ6 ಅಂಕಗಳನ್ನು ಗಳಿಸಿದರೆ, ಟ್ಯಾಕಲ್‌ನಲ್ಲಿ5 ಅಂಕಗಳ ಜತೆಗೆ ಒಂದು ಬೋನಸ್ ಅಂಕ ಗಿಟ್ಟಿಸಿತು. ಅತ್ತ ದಬಾಂಗ್ ದಿಲ್ಲಿತಂಡ ರೇಡಿಂಗ್ ಮತ್ತು ಟ್ಯಾಕಲ್‌ನಲ್ಲಿಕ್ರಮವಾಗಿ 7 ಮತ್ತು 5 ಅಂಕಗಳನ್ನು ಗೆದ್ದು ಪ್ರಬಲ ಪೈಪೋಟಿ ನೀಡಿತು. ತಲೈವಾಸ್ ಪರ ಮೋಯಿನ್ ಹಾಗೂ ದಿಲ್ಲಿಪರ ನವೀನ್ ಕುಮಾರ್ ತಲಾ 6 ಅಂಕಗಳಿಸಿದರು.