ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್​ಷಿಪ್​ಗೆ ಗಡುವು ನಿಗದಿ; ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನಿರ್ಧಾರ

Taekwondo Federation of India
Published on

ಬೆಂಗಳೂರು: ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್​ಷಿಪ್​ ನಡೆಸಲು ಗಡುವು ಹಾಕಿಕೊಳ್ಳಲಾಗಿದ್ದು, ಈ ಕುರಿತು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇಶಾರಿ ಕೆ. ಗಣೇಶ್ ಅಧ್ಯಕ್ಷತೆಯಲ್ಲಿ ಟೇಕ್ವಾಂಡೋ ಫೆಡರೇಷನ್ ಆಫ್ ಇಂಡಿಯಾದ ಕಾರ್ಯಕಾರಿ ಮಂಡಳಿ ಸಭೆ ನಡೆದಿದ್ದು, ಇದರಲ್ಲಿ ಮುಂದಿನ ಚಾಂಪಿಯನ್​ಷಿಪ್​ ಬಗ್ಗೆ ನಿರ್ಧಾರ ತಳೆಯಲಾಯಿತು.

ನ್ಯಾಷನಲ್ ಸಬ್ ಜೂನಿಯರ್, ನ್ಯಾಷನಲ್ ಕೆಡೆಟ್ ಚಾಂಪಿಯನ್​​ಷಿಪ್​, ನ್ಯಾಷನಲ್ ಸೀನಿಯರ್ ಚಾಂಪಿಯನ್​ಷಿಪ್​ ನಡೆಸುವ ಜವಾಬ್ದಾರಿಯನ್ನು ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಪುದುಚೇರಿಯ ಅಸೋಸಿಯೇಷನ್​ಗಳಿಗೆ ನೀಡಲಾಯಿತು. ಅಲ್ಲದೆ 2023ರ ಮಾ. 31ರ ಒಳಗೆ ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್​ಷಿಪ್​ ನಡೆಸಲು ಗಡುವು ಹಾಕಿಕೊಳ್ಳಲಾಗಿದೆ.

ಹರಿಯಾಣ ಅಸೋಸಿಯೇಷನ್ ಮುಂದಿನ ಫೆಡರೇಷನ್ ಕಪ್ ಆಯೋಜಿಸುವ ಕುರಿತು ತೀರ್ಮಾನವನ್ನೂ ಇದೇ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ. ಸೆಕ್ರೆಟರಿ ಜನರಲ್ ಮಂಗೇಶ್ಕರ್, ಮುಖ್ಯ ಆಡಳಿತಾಧಿಕಾರಿ ಟಿ.ಪ್ರವೀಣ್ ಕುಮಾರ್, ರಾಷ್ಟ್ರೀಯ ತಂಡದ ಕೋಚ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಬಿ.ಎಮ್. ಕೃಷ್ಣಮೂರ್ತಿ ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net