

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ವಿಜೇತ ನೀರಜ್ ಚೋಪ್ರಾ, ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಫುಟ್‌ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ ಸೇರಿದಂತೆ 12 ಕ್ರೀಡಾಪಟುಗಳಿಗೆ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ಭವನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಟೋಕಿಯೊ ಪ್ಯಾರಾಲಿಂಪಿಕ್ಸ್ ರಜತ ವಿಜೇತ ಕನ್ನಡಿಗ ಸುಹಾಸ್ ಯತಿರಾಜ್ ಸಹಿತ 35 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಪಡೆದುಕೊಂಡರು. 10 ಕೋಚ್‌ಗಳು ದ್ರೋಣಾಚಾರ್ಯ ಮತ್ತು ಐವರು ಮಾಜಿ ಕ್ರೀಡಾಪಟುಗಳು ಧ್ಯಾನ್‌ಚಂದ್ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದರು. ಖೇಲ್ ರತ್ನ ಪುರಸ್ಕೃತರಿಗೆ 25 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಫಲಕ, ಅರ್ಜುನ ಪ್ರಶಸ್ತಿ ಪುರಸ್ಕೃತರಿಗೆ 15 ಲಕ್ಷ ರೂಪಾಯಿ ಹಾಗೂ ಕಂಚಿನ ಫಲಕ ನೀಡಲಾಯಿತು.
* ಖೇಲ್ ರತ್ನ ಪುರಸ್ಕೃತರು: ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ಮಿಥಾಲಿ ರಾಜ್ (ಕ್ರಿಕೆಟ್), ಸುನೀಲ್ ಛೇಟ್ರಿ (ಫುಟ್‌ಬಾಲ್), ರವಿ ಕುಮಾರ್ (ಕುಸ್ತಿ), ಲವ್ಲಿನಾ ಬೋರ್ಗೊಹೈನ್ (ಬಾಕ್ಸಿಂಗ್), ಪಿಆರ್.ಶ್ರೀಜೇಶ್, ಮನ್‌ಪ್ರೀತ್ ಸಿಂಗ್ (ಇಬ್ಬರೂ ಹಾಕಿ), ಅವನಿ ಲೇಖರ (ಪ್ಯಾರಾ ಶೂಟಿಂಗ್), ಸುಮೀತ್ ಅಂಟಿಲ್ (ಪ್ಯಾರಾ ಅಥ್ಲೆಟಿಕ್ಸ್), ಪ್ರಮೋದ್ ಭಗತ್, ಕೃಷ್ಣ ನಗರ್ (ಪ್ಯಾರಾ ಬ್ಯಾಡ್ಮಿಂಟನ್), ಮನೀಷ್ ನರ್ವಾಲ್, (ಪ್ಯಾರಾ ಶೂಟಿಂಗ್),
* ಅರ್ಜುನ ಪ್ರಶಸ್ತಿ ಪುರಸ್ಕೃತರು: ಅರ್ಪಿಂದರ್ ಸಿಂಗ್ (ಅಥ್ಲೆಟಿಕ್ಸ್), ಸಿಮ್ರಾಜಿತ್ ಕೌರ್ (ಬಾಕ್ಸಿಂಗ್), ಶಿಖರ್ ಧವನ್ (ಕ್ರಿಕೆಟ್), ಭವಾನಿ ದೇವಿ (ಫೆನ್ಸಿಂಗ್), ಮೋನಿಕಾ, ವಂದನಾ ಕಟಾರಿಯಾ, ದಿಲ್‌ಪ್ರೀತ್ ಸಿಂಗ್, ಹರ್ಮಾನ್ ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬೀರೇಂದ್ರ ಲಾಕ್ರ, ಸುಮಿತ್, ನೀಲಕಂಠ ಶರ್ಮ, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಗುರ್ಜಂತ್ ಸಿಂಗ್, ಮಂದೀಪ್ ಸಿಂಗ್, ಶಂಷೀರ್ ಸಿಂಗ್, ಲಲಿತ್ ಕುಮಾರ್ ಉಪಾದ್ಯಯ, ವರುಣ್ ಕುಮಾರ್, ಸಿಮ್ರಾನ್‌ಜಿತ್ ಸಿಂಗ್ (ಎಲ್ಲರೂ ಹಾಕಿ), ಸಂದೀಪ್ ನರ್ವಾಲ್ (ಕಬಡ್ಡಿ), ಹಿಮಾನಿ ಉತ್ತಮ ಪರಬ್ (ಮಲ್ಲಕಂಬ), ಅಭಿಷೇಕ್ ವರ್ಮ (ಶೂಟಿಂಗ್), ಅಂಕಿತಾ ರೈನಾ (ಟೆನಿಸ್), ದೀಪಕ್ ಪೂನಿಯಾ (ಕುಸ್ತಿ), ಯೋಗೇಶ್ ಕತುನಿಯಾ, ನಿಶಾದ್ ಕುಮಾರ್, ಪ್ರವೀಣ್ ಕುಮಾರ್, ಶರದ್ ಕುಮಾರ್, (ಪ್ಯಾರಾಥ್ಲೀಟ್), ಸುಹಾಸ್ ಯತೀರಾಜ್ (ಪ್ಯಾರಾಬ್ಯಾಡ್ಮಿಂಟನ್), ಸಿಂಗರಾಜ್ ಆಧನಾ (ಪ್ಯಾರಾ ಶೂಟಿಂಗ್), ಭವಿನಾ ಪಟೇಲ್ (ಪ್ಯಾರಾ ಟೇಬಲ್ ಟೆನಿಸ್), ಹರ್ವೀಂದರ್ ಸಿಂಗ್ (ಪ್ಯಾರಾ ಆರ್ಚರಿ).
* ದ್ರೋಣಾಚಾರ್ಯ ಪ್ರಶಸ್ತಿ : ಟಿಪಿ ಓಸೆಫ್ (ಅಥ್ಲೆಟಿಕ್ಸ್), ಸರ್ಕಾರ್ ತಲ್ವಾರ್ (ಕ್ರಿಕೆಟ್), ಸರ್ಪಾಲ್ ಸಿಂಗ್ (ಹಾಕಿ), ಅಶನ್ ಕುಮಾರ್ (ಕಬಡ್ಡಿ), ತಪನ್ ಕುಮಾರ್ (ಈಜು), ರಾಧಾಕೃಷ್ಣನ್ ನಾಯರ್ (ಅಥ್ಲೆಟಿಕ್ಸ್), ಸಂಧ್ಯಾ ಗುರುಂಗ್ (ಬಾಕ್ಸಿಂಗ್), ಪ್ರಿತಮ್ ಸಿವಾಚ್ (ಹಾಕಿ), ಜೈ ಪ್ರಕಾಶ್ ನೌಟಿಯಾಲ್ (ಪ್ಯಾರಾ ಶೂಟಿಂಗ್), ಎಸ್.ರಮಣ (ಟೇಬಲ್ ಟೆನಿಸ್).
* ಧ್ಯಾನ್‌ಚಂದ್ ಜೀವಾಮಾನ ಸಾಧನೆ ಪ್ರಶಸ್ತಿ: ಸಜ್ಜನ್ ಸಿಂಗ್ (ಕುಸ್ತಿ), ಲೇಖಾ ಕೆಸಿ (ಬಾಕ್ಸಿಂಗ್), ಅಭಿಜಿತ್ ಕುಂಟೆ (ಚೆಸ್), ದವಿಂದರ್ ಸಿಂಗ್ (ಹಾಕಿ), ವಿಕಾಸ್ ಕುಮಾರ್ (ಕಬಡ್ಡಿ).