ಜ್ಯೋತಿ ಚಿನ್ನ ಗೆದ್ದರೂ ಒಲಿಯದ ಅರ್ಹತೆ: 10 ಸೆಕೆಂಡ್‌ನಿಂದ ಒಲಿಂಪಿಕ್ಸ್ ಅರ್ಹತೆ ಮಿಸ್

New-Project-3-4
Published on

ನವದೆಹಲಿ: ನೆದರ್ಲೆಂಡ್‌ನಲ್ಲಿ ನಡೆಯುತ್ತಿರುವ ಹ್ಯಾರಿ ಸ್ಕಲ್ಟಿಂಗ್ ಗೇಮ್ಸ್‌ನ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಭಾರತದ ಜ್ಯೋತಿ ಯರ‌್ರಾಜಿ ಚಿನ್ನದ ಪದಕ ಜಯಿಸಿದ್ದಾರೆ. ಗುರುವಾರ ನಡೆದ ವಿಶ್ವ ಅಥ್ಲೆಟಿಕ್ಸೃ್ ಈವೆಂಟ್‌ನಲ್ಲಿ 12.87 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ 24 ವರ್ಷದ ಜ್ಯೋತಿ ಹಾಲಿ ಋತುವಿನ ಮೊದಲ ಹೊರಾಂಗಣ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಿದರು. ಆದರೂ ಅವರು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸುವಲ್ಲಿ ವಿಲರಾದರು.

ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಗೆ 12.77 ಸೆಕೆಂಡ್ ಮಾನದಂಡವಿದ್ದು, ಇದನ್ನು ಒಲಿಸಿಕೊಳ್ಳುವಲ್ಲಿ ಎಡವಿದ ಜ್ಯೋತಿ ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಅರ್ಹತೆ ಪಡೆಯುವ ಹಾದಿಯಲ್ಲಿದ್ದಾರೆ. ರಾಷ್ಟ್ರೀಯ ದಾಖಲೆ ಹೊಂದಿರುವ ಜ್ಯೋತಿಗೆ ಇದು ವೃತ್ತಿಜೀವನದ ನಾಲ್ಕನೇ ಅತ್ಯುತ್ತಮ ಸಾಧನೆ ಎನಿಸಿದೆ.

ವಿಶ್ವ ಅಥ್ಲೆಟಿಕ್ಸ್‌ನ ರೋಡ್ ಟು ಪ್ಯಾರಿಸ್ ಪಟ್ಟಿಯಲ್ಲಿ ಅವರು ಪ್ರಸ್ತುತ 26ನೇ ಸ್ಥಾನದಲ್ಲಿದ್ದು, ಒಲಿಂಪಿಕ್ಸ್‌ನ ಮಹಿಳೆಯರ 100 ಮೀ ಹರ್ಡಲ್ಸ್‌ನಲ್ಲಿ 40 ಓಟಗಾರ್ತಿಯರು ಸ್ಪರ್ಧಿಸಲಿದ್ದಾರೆ. ಅದರಲ್ಲಿ 25 ಓಟಗಾರ್ತಿಯರು ಅರ್ಹತಾ ಮಾನದಂಡದ ಮೂಲಕ ಮತ್ತು 15 ಮಂದಿ ವಿಶ್ವ ರ‌್ಯಾಂಕಿಂಗ್‌ನೊಂದಿಗೆ ಪ್ಯಾರಿಸ್ ಟಿಕೆಟ್ ಪಡೆಯುವ ಅವಕಾಶ ಹೊಂದಿದ್ದಾರೆ. ಕಳೆದ ವರ್ಷ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಜ್ಯೋತಿ ಯರ‌್ರಾಜಿ 12.78 ಸೆಕೆಂಡ್‌ನಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಹಾಂಗ್‌ರೆೌ ಏಷ್ಯನ್ ಗೇಮ್ಸ್‌ನಲ್ಲೂ ರಜತ ಪದಕ ಗೆದ್ದು ಬೀಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net