

Nathan Lyon: ಭಾರತ-ಇಂಗ್ಲೆಂಡ್ ನಡುವೆ ನಡೆದ ನಾಲ್ಕನೇ ಟೆಸ್ಟ್ನ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ತೋರಿದ ವರ್ತನೆಯ ವಿರುದ್ಧ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ನಾಥನ್ ಲಿಯಾನ್ ಕಿಡಿಕಾರಿದ್ದಾರೆ.
ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಇಬ್ಬರ ವಿಕೆಟ್ ಕಬಳಿಸಿ, ಶತಕವನ್ನು ಸಿಡಿಸಲು ಬಿಡಬಾರದಿತ್ತು ಎಂದು ಪಂದ್ಯ ಮಗಿಯುವ ಮುನ್ನವೇ ಬ್ಯಾಟರ್ಗಳ ಜತೆ ಹ್ಯಾಂಡ್ ಶೇಕ್ಗೆ ಮುಂದಾದ ಸ್ಟೋಕ್ಸ್ ವರ್ತನೆಗೆ ಲಿಯಾನ್ ಖಾರವಾಗಿ ಉತ್ತರಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಿರ್ಮಿಸಲಾಗುತ್ತಿರುವ ಪಿಚ್‌ಗಳ ಸ್ವರೂಪದ ಬಗ್ಗೆ ಹೇಳಿರುವ ಲಿಯಾನ್, ಉತ್ತಮ ಪಂದ್ಯ ನಡೆಯಬೇಕೆಂದರೆ, ಸಮತೋಲನ ಮತ್ತು ಅತ್ಯುತ್ತಮ ಪಿಚ್ಗಳನ್ನು ತಯಾರು ಮಾಡುವುದು ನಿರ್ಣಾಯಕವಾಗಿರುತ್ತದೆ ಎಂದಿದ್ದಾರೆ. ಬ್ಯಾಟ್ ಮತ್ತು ಚೆಂಡಿನ ನಡುವೆ ಯಾವಾಗಲೂ ಉತ್ತಮ ಸ್ಪರ್ಧೆ ಇದ್ದು, ಅಭಿಮಾನಿಗಳು ಕೂಡ ಇದನ್ನೇ ನೋಡಲು ಬಯಸುತ್ತಾರೆ ಎಂದು ಲಿಯಾನ್ ಹೇಳಿದರು.
ಇಂಗ್ಲೆಂಡ್ ಪ್ರಸ್ತುತ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ 2-1 ಮುನ್ನಡೆಯಲ್ಲಿದೆ. ಭಾರತ ಕೊನೆಯ ಪಂದ್ಯವನ್ನು ಗೆದ್ದು, ಸರಣಿಯಲ್ಲಿ ಸಮಬಲ ಸಾಧಿಸುತ್ತದೆಯೇ ಎಂದು ಕಾದು ನೋಡಬೇಕಾಗಿದೆ.(ಏಜೆನ್ಸೀಸ್)