ಆತನಿಗಿಂತ ನಮ್ಮ ನಸೀಮ್​ ಉತ್ತಮ ಬೌಲರ್​​; Jasprit Bumrah ಕುರಿತು Pak ಕ್ರಿಕೆಟಿಗನ ಶಾಕಿಂಗ್​ ಹೇಳಿಕೆ

Jasprit Bumrah
Published on

ನವದೆಹಲಿ: ಸದಾ ಒಂದಿಲ್ಲೊಂದು ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುವ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ (Pakistan) ಮಾಜಿ ಹಾಗೂ ಹಾಲಿ ಆಟಗಾರರು ತೀವ್ರ ಟೀಕೆಗೆ ಗುರಿಯಾಗುತ್ತಾರೆ. ಮುಖ್ಯವಾಗಿ ಭಾರತದ (India) ಬಗ್ಗೆ ಹೆಚ್ಚು ಮಾತನಾಡುವ ಈ ಆಟಗಾರರು ಒಂದಿಲ್ಲೊಂದು ಕಾರಣಕ್ಕೆ ಟೀಮ್​ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಪಾಕಿಸ್ತಾನ ಕ್ರಿಕೆಟ್​ ತಂಡದ ಪರ 1 ಏಕದಿನ ಹಾಗೂ 4 ಟಿ20 ಪಂದ್ಯವನ್ನಾಡಿರುವ ಆಟಗಾರನೋರ್ವ ಜಸ್ಪ್ರೀತ್​ ಬುಮ್ರಾ (Jasprit Bumrah) ಕುರಿತು ಹೇಳಿಕೆಯನ್ನು ನೀಡಿದ್ದು, ಭಾರತೀಯರ (Indians) ಕೆಂಗಣ್ಣಿಗೆ ಗುರಿಯಾಗಿದೆ.

ಪಾಕಿಸ್ತಾನದ ಪರ 1 ಏಕದಿನ ಹಾಗೂ 4 ಟಿ20 ಪಂದ್ಯವನ್ನಾಡಿರುವ ಇಹ್ಸಾನುಲ್ಲಾ (Ihsanullah) ಟೀಮ್​ ಇಂಡಿಯಾದ (Team India) ಸ್ಟಾರ್​ ವೇಗಿ ಜಸ್ಪ್ರೀತ್​ ಬುಮ್ರಾ (Jasprit Bumrah) ಕುರಿತು ನೀಡಿರುವ ಹೇಳಿಕೆ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಈತನ ಹೇಳಿಕೆಯನ್ನು ಭಾರತೀಯರು ವ್ಯಾಪಕವಾಗಿ ಖಂಡಿಸಿದ್ದಾರೆ. ಈತನ ಕ್ಷುಲಕ ಹೇಳಿಕೆ ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದು, ನೆಟ್ಟಿಗರು ಬುಮ್ರಾ (jasprit Bumrah) ಮಾಡಿರುವ ದಾಖಲೆಗಳನ್ನು ಉಲ್ಲೇಖಿಸಿ ಕಮೆಂಟ್​ ಮಾಡುತ್ತಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಇಹ್ಸಾನುಲ್ಲಾ, ನನ್ನ ಪ್ರಕಾರ ಜಸ್ಪ್ರೀತ್​ ಬುಮ್ರಾಗಿಂದ (Jasprit Bumrah) ಪಾಕಿಸ್ತಾನದ ವೇಗಿ ನಸೀಮ್​ ಷಾ (Naseem Shah) ಉತ್ತಮ ಎಂದು ಭಾವಿಸುತ್ತೇನೆ. ಅದು ಹೇಗೆ ಎಂದು ಸಂದರ್ಶಕರು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸಿದ ಇಹ್ಸಾನುಲ್ಲಾ (Ihsanullah) ನಸೀಮ್​ ಷಾ (Naseem Shah) 2022ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಬುಮ್ರಾಗಿಂತ ಉತ್ತಮ ಪ್ರದರ್ಶನ ನೀಡಿದರು. ಇದಕ್ಕಿಂತ ಇನ್ನೇನು ಬೇಕು. ಆತ ಬುಮ್ರಾಗಿಂತ (Jasprit Bumrah) ಉತ್ತಮ ಬೌಲರ್​ ಎಂಬುದನ್ನು ಸಾಬೀತು ಮಾಡಲು ಎಂದು ಹೇಳಿದ್ದಾರೆ.

ಇತ್ತ ಇಹ್ಸಾನುಲ್ಲಾ (Ihsanullah) ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕ್ರೀಡಾಭಿಮಾನಿಗಳು ಆತನನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಯಾವ ಆಧಾರದ ಮೇಲೆ ಈ ರೀತಿಯ ಹೇಳಿಕೆಗಳನ್ನು ಕೊಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಚಾಂಪಿಯನ್ಸ್​ ಟ್ರೋಫಿಯಲ್ಲಿ (Champions Trophy) ಭಾರತ ಭಾಗಿಯಾಗಬೇಕಾ ಬೇಡವಾ ಎಂದು ನಿರ್ಧರಿಸುತ್ತಿರುವ ನಡುವೆಯೇ ಈ ಹೇಳಿಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net