25 ಲಕ್ಷ ಜನಸಂಖ್ಯೆಯ ದೇಶ ನಮೀಬಿಯದಿಂದ ಟಿ20 ವಿಶ್ವಕಪ್‌ನಲ್ಲಿ ವಿಶೇಷ ಸಾಧನೆ

namibia web
Published on

ದುಬೈ: ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬ ಮಾತಿಗೆ ಈಗ ನಮೀಬಿಯ ಕ್ರಿಕೆಟ್ ತಂಡ ಸಾಕ್ಷಿಯಾಗಿ ನಿಂತಿದೆ. ಆಡಿದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲೇ ಪ್ರಧಾನ ಸುತ್ತಿಗೆ ಪ್ರವೇಶಿಸಿ ಅಚ್ಚರಿ ಮೂಡಿಸಿರುವ ನೈರುತ್ಯ ಆಫ್ರಿಕಾದ ದೇಶ ನಮೀಬಿಯದ ಜನಸಂಖ್ಯೆ ಕೇವಲ 25 ಲಕ್ಷ.

ಇಡೀ ದೇಶದಲ್ಲಿ ಇರುವ ಕ್ರಿಕೆಟ್ ಪಿಚ್ ಕೇವಲ 9! ಐಸಿಸಿ ರ‌್ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿದೆ. ಇದರ ಹೊರತಾಗಿಯೂ ಮೊದಲ ಸುತ್ತಿನ ಅಂತಿಮ ಪಂದ್ಯದಲ್ಲಿ ಐರ್ಲೆಂಡ್‌ಗೆ ಆಘಾತ ನೀಡುವ ಮೂಲಕ ನಮೀಬಿಯ ತಂಡ ವಿಶ್ವ ಅಗ್ರ 12 ತಂಡಗಳ ಸೂಪರ್-12ರ ಘಟ್ಟದಲ್ಲಿ ಸ್ಥಾನ ಸಂಪಾದಿಸಿದೆ.

ಈ ಹಿಂದೆ 2003ರ ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದರೂ, ನಮೀಬಿಯಗೆ ಟಿ20 ಕ್ರಿಕೆಟ್‌ನಲ್ಲಿ 2 ವರ್ಷಗಳ ಹಿಂದಷ್ಟೇ ಐಸಿಸಿ ಮಾನ್ಯತೆ ಸಿಕ್ಕಿದ್ದು. ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್‌ನಂಥ ಬಲಿಷ್ಠ ತಂಡಗಳನ್ನು ಎದುರಿಸುವುದು ನಮ್ಮ ತಂಡಕ್ಕೆ ಶ್ರೇಷ್ಠ ಅನುಭವ ನೀಡಲಿದೆ. ಟಿವಿಯಲ್ಲಿ ನೋಡುತ್ತಿದ್ದ ಸ್ಟಾರ್ ಆಟಗಾರರನ್ನು ಈಗ ನಮ್ಮ ಆಟಗಾರರು ಮೈದಾನದಲ್ಲೂ ಎದುರಿಸಬಹುದಾಗಿದೆ ಎಂದು ಕೋಚ್ ಪಿಯರ್ ಡಿ ಬ್ರುಯ್ನ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net