ಆಸ್ಟ್ರೇಲಿಯನ್​ ಓಪನ್​ 2ನೇ ಸುತ್ತಿನಲ್ಲಿ ಸುಮಿತ್​ ನಗಾಲ್​ಗೆ ನಿರಾಸೆ

nagal web
Published on

ಮೆಲ್ಬೋರ್ನ್​: ವರ್ಷದ ಮೊದಲ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿ ಆಸ್ಟ್ರೆಲಿಯನ್​ ಓಪನ್​ನಲ್ಲಿ ಭಾರತದ ತಾರೆ ಸುಮಿತ್​ ನಗಾಲ್​ ಅವರ ಕನಸಿನ ಓಟ ಎರಡನೇ ಸುತ್ತಿನಲ್ಲಿ ಕೊನೆಗೊಂಡಿದೆ. ಅರ್ಹತಾ ಸುತ್ತಿನಿಂದ ಮೇಲೇರಿ ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಶ್ರೇಯಾಂಕಿತ ಆಟಗಾರನನ್ನು ಸೋಲಿಸುವ ಮೂಲಕ ದಾಖಲೆ ಬರೆದಿದ್ದ ಸುಮಿತ್​ ನಗಾಲ್​, ವೈಲ್ಡ್​ಕಾರ್ಡ್​ ಪ್ರವೇಶ ಪಡೆದಿರುವ ಚೀನಾದ ಯುವ ಆಟಗಾರ ಜುನ್​ಚೆಂಗ್​ ಶಾಂಗ್​ ವಿರುದ್ಧ 2ನೇ ಸುತ್ತಿನಲ್ಲಿ ಮುಗ್ಗರಿಸಿದರು.

26 ವರ್ಷದ ಸುಮಿತ್​ ನಗಾಲ್​ ಗುರುವಾರ ನಡೆದ ಎರಡು ಗಂಟೆ 50 ನಿಮಿಷಗಳ ಕಾದಾಟದಲ್ಲಿ 18 ವರ್ಷದ ಶಾಂಗ್​ ಎದುರು 6&2, 3&6, 5&7, 4&6ರಿಂದ ಸೋಲು ಕಂಡರು. ಇದರ ನಡುವೆ ಅವರು 98 ಲಕ್ಷ ರೂ. ಬಹುಮಾನ ಒಲಿಸಿಕೊಂಡರು. ವಿಶ್ವ ನಂ. 137 ನಗಾಲ್​ ತನಗಿಂತ ಕೆಳ ಶ್ರೇಯಾಂಕಿತನ ಎದುರು ಮೊದಲ ಸೆಟ್​ ಗೆದ್ದು ಬೀಗಿದರೂ, ನಂತರದಲ್ಲಿ ಲಯ ತಪ್ಪಿದರು. ಶಾಂಗ್​ ಬಲಿಷ್ಠ ಸರ್ವ್​ನಿಂದ ಪಂದ್ಯದಲ್ಲಿ ಮೇಲುಗೈ ಸಾಧಿಸುತ್ತ ಸಾಗಿದರು.

ಬೋಪಣ್ಣ ಶುಭಾರಂಭ: ಪುರುಷರ ಡಬಲ್ಸ್​ ವಿಭಾಗದಲ್ಲಿ 2ನೇ ಶ್ರೇಯಾಂಕಿತ ರೋಹನ್​ ಬೋಪಣ್ಣ ಮತ್ತು ಆಸ್ಟ್ರೆಲಿಯಾದ ಮ್ಯಾಥ್ಯೂ ಎಬ್ಡೆನ್​ ಜೋಡಿ ಶುಭಾರಂಭ ಕಂಡಿತು. ಕನ್ನಡಿಗ ಬೋಪಣ್ಣ ಮತ್ತು ಎಬ್ಡೆನ್​ 7&6, 4&6, 7&6ರಿಂದ ಆಸ್ಟ್ರೆಲಿಯಾದ ಡಕ್ವರ್ತ್​&ಪೋಲ್ಮನ್ಸ್​ ವಿರುದ್ಧ ಗೆಲುವು ಸಾಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net