

ಮೆಲ್ಬೋರ್ನ್: ವಿಶ್ವ ನಂ.1 ಆಟಗಾರ ಸ್ಪೇನ್ನ ರಾಫೆಲ್ ನಡಾಲ್ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪ್ರಥಮ ಸುತ್ತಿನಲ್ಲಿ ಬೊಲಿವಿಯಾದ ಹುಗೋ ಡೆಲ್ಲಿಯನ್ರನ್ನು ಎದುರಿಸಲಿದ್ದಾರೆ. 2009ರಲ್ಲಿ ಒಮ್ಮೆ ಮಾತ್ರವೇ ಈ ಪ್ರಶಸ್ತಿ ಗೆದ್ದಿರುವ ನಡಾಲ್, 4ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ನಿಕ್ ರ್ಕಿಗಿಯೋಸ್ರ ಕಠಿಣ ಸವಾಲನ್ನು ಎದುರಿಸಲಿದ್ದಾರೆ. ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್, ಜಾನ್ ಲೀನಾರ್ಡ್ ಸ್ಟ್ರಫ್ರನ್ನು ಮೊದಲ ಸುತ್ತಿನಲ್ಲಿ ಎದುರಿಸುವ ಮೂಲಕ ದಾಖಲೆಯ 8ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯ ಅಭಿಯಾನ ಆರಂಭಿಸಲಿದ್ದಾರೆ. 38 ವರ್ಷದ ಫೆಡರರ್, ಅಮೆರಿಕದ ಸ್ಟೀವ್ ಜಾನ್ಸನ್ ವಿರುದ್ಧ ಆಡುವ ಮೂಲಕ 7ನೇ ಪ್ರಶಸ್ತಿಯ ಅಭಿಯಾನ ಆರಂಭಿ ಸಲಿದ್ದಾರೆ. ಸೆಮಿಫೈನಲ್ನಲ್ಲಿ ಜೋಕೋರನ್ನು ಎದುರಿಸುವ ಸವಾಲು ಇವರ ಮುಂದಿದೆ.
ಸೆರೇನಾಗೆ ಒಸಾಕ 8ರ ಘಟ್ಟದ ಎದುರಾಳಿ: ಮಾರ್ಗರೇಟ್ ಕೋರ್ಟ್ರ 24 ಗ್ರಾಂಡ್ ಸ್ಲಾಂ ಜಯದ ದಾಖಲೆ ಸರಿಗಟ್ಟುವ ಹಂಬಲದಲ್ಲಿರುವ ಸೆರೇನಾ ವಿಲಿಯಮ್್ಸ, ಹಾಲಿ ಚಾಂಪಿಯನ್ ಜಪಾನ್ನ ನವೋಮಿ ಒಸಾಕರನ್ನು 8ರ ಘಟ್ಟದ ಎದುರಿಸುವ ಸವಾಲು ಪಡೆದುಕೊಂಡಿದ್ದಾರೆ. ವಿಶ್ವ ನಂ.1 ಆಶ್ಲೆಗ್ ಬಾರ್ಟಿ ಮೊದಲ ಸುತ್ತಿನಲ್ಲಿ ಉಕ್ರೇನ್ನ ಲೇಸಿಯಾ ಸುರೆಂಕೋರನ್ನು ಎದುರಿಸಲಿದ್ದಾರೆ.
ಪ್ರಧಾನ ಸುತ್ತಿನ ಸನಿಹ ಪ್ರಜ್ಞೇಶ್: ಭಾರತದ ಪ್ರಜ್ಞೇಶ್ ಗುಣೇಶ್ವರನ್ ಅರ್ಹತಾ ಸುತ್ತಿನಲ್ಲಿ 3ನೇ ಹಾಗೂ ಅಂತಿಮ ಸುತ್ತಿಗೇರಿದ್ದು, ಪ್ರಧಾನ ಸುತ್ತಿನಲ್ಲಿ ಆಡುವ ಸನಿಹ ತಲುಪಿದ್ದಾರೆ.