ಹುಬ್ಬಳ್ಳಿ ಟೈಗರ್ಸ್​​ ಗೆಲುವಿನ ಓಟಕ್ಕೆ ಮೈಸೂರು ವಾರಿಯರ್ಸ್​ ಬ್ರೇಕ್​

maha web
Published on

ಬೆಂಗಳೂರು: ಮನೀಷ್​ ಪಾಂಡೆ ಸಾರಥ್ಯದ ಹುಬ್ಬಳ್ಳಿ ಟೈಗರ್ಸ್​ ತಂಡದ ಸತತ 5 ಗೆಲುವಿನ ಓಟಕ್ಕೆ ಮೈಸೂರು ವಾರಿಯರ್ಸ್​ ತಂಡ ಬ್ರೇಕ್​ ಹಾಕಿದೆ. ಎರಡನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಯಲ್ಲಿ ನಡೆದ ಭಾನುವಾರದ ಮೊದಲ ಪಂದ್ಯದಲ್ಲಿ ಲವನೀತ್​ ಸಿಸೋಡಿಯಾ (105 ರನ್​, 62 ಎಸೆತ, 7 ಬೌಂಡರಿ, 7 ಸಿಕ್ಸರ್​) ಶತಕದಬ್ಬರದ ನಡುವೆಯೂ ಹುಬ್ಬಳ್ಳಿ ಟೈಗರ್ಸ್​ ತಂಡ ಮೈಸೂರು ವಾರಿಯರ್ಸ್​ ವಿರುದ್ಧ 6 ವಿಕೆಟ್​ಗಳಿಂದ ಶರಣಾಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಹುಬ್ಬಳ್ಳಿ ತಂಡ 7 ವಿಕೆಟ್​ಗೆ 185 ರನ್​ ಪೇರಿಸಿತು. ಪ್ರತಿಯಾಗಿ ಮೈಸೂರು ತಂಡ ಆರ್​. ಸಮರ್ಥ್​ (73 ರನ್​, 42 ಎಸೆತ, 6 ಬೌಂಡರಿ, 3 ಸಿಕ್ಸರ್​) ಬಿರುಸಿನಾಟದಿಂದ 18.5 ಓವರ್​ಗಳಲ್ಲಿ 4 ವಿಕೆಟ್​ಗೆ 188 ರನ್​ ಗಳಿಸಿ ಸತತ 4ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿತು.

ಹುಬ್ಬಳ್ಳಿ ಟೈಗರ್ಸ್​: 7 ವಿಕೆಟ್​ಗೆ 185 (ಸಿಸೋಡಿಯಾ 105, ತಾಹ 6, ಮನೀಷ್​ ಪಾಂಡೆ 33, ಪ್ರವಿಣ್​ ದುಬೆ 16, ಸಿಎ ಕಾರ್ತಿಕ್​ 50ಕ್ಕೆ 4), ಮೈಸೂರು ವಾರಿಯರ್ಸ್​: 18.5 ಓವರ್​ಗಳಲ್ಲಿ 4 ವಿಕೆಟ್​ಗೆ 188 (ಸಮಥ್​ 73, ಸಿಎ ಕಾರ್ತಿಕ್​ 29, ಕರುಣ್​ 41, ರತ್​ 22*, ಪ್ರವಿಣ್​ ದುಬೆ 38ಕ್ಕೆ 3). ಪಂದ್ಯಶ್ರೇಷ್ಠ: ಆರ್​. ಸಮರ್ಥ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net