ಮೈಸೂರು ವಾರಿಯರ್ಸ್‌ ಎದುರು ಶಿವಮೊಗ್ಗ ಲಯನ್ಸ್‌ಗೆ ರೋಚಕ ಗೆಲುವು

shiva
Published on

ಬೆಂಗಳೂರು: ಸಂಘಟಿತ ನಿರ್ವಹಣೆ ತೋರಿದ ಶಿವಮೊಗ್ಗ ಲಯನ್ಸ್ ತಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲಿ ಮೈಸೂರು ವಾರಿಯರ್ಸ್‌ ಎದುರು 5 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಶ್ರೇಯಸ್ ಗೋಪಾಲ್ ಬಳಗ ಸತತ ಮೂರು ಸೋಲಿನ ಕೊಂಡಿ ಕಳಚಿದೆ.

ಚಿನ್ನಸ್ವಾಮಿ ಅಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಶ್ರೇಯಸ್ ಗೋಪಾಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ವಾರಿಯರ್ಸ್‌ ತಂಡ ನಾಯಕ ಕರುಣ್ ನಾಯರ್ (46) ಬಲದಿಂದ 8 ವಿಕೆಟ್‌ಗೆ 162 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ನಿಹಾಲ್ ಉಳ್ಳಾಲ್ (45) ಹಾಗೂ ಕೊನೆಯಲ್ಲಿ ಕ್ರಾಂತಿ ಕುಮಾರ್ (20*), ಎಸ್. ಶಿವರಾಜ್ (16*) ಸ್ಫೋಟಕ ಬ್ಯಾಟಿಂಗ್ ಬಲದಿಂದ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 163ಗಳಿಸಿ ಗೆಲುವಿನ ಕೇಕೆ ಹಾಕಿತು.

ಮೈಸೂರು ವಾರಿಯರ್ಸ್‌: 8 ವಿಕೆಟ್‌ಗೆ 162 ( ಆರ್. ಸಮರ್ಥ್ 17, ಸಿಎ ಕಾರ್ತಿಕ್ 14, ಕರುಣ್ ನಾಯರ್ 46, ಲಂಕೇಶ್ 25,ಮನೋಜ್ ಭಾಂಡಗೆ 20, ಜೆ. ಸುಚಿತ್ 18*, ವಿ. ಕೌಶಿಕ್ 27ಕ್ಕೆ 2, ಕ್ರಾಂತಿ ಕುಮಾರ್ 40ಕ್ಕೆ2).

ಶಿವಮೊಗ್ಗ ಲಯನ್ಸ್: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 163 (ರೋಹನ್ ಕದಂ 15, ನಿಹಾಲ್ 45, ಅಭಿನವ್ ಮನೋಹರ್ 27, ಕ್ರಾಂತಿ ಕುಮಾರ್ 20*, ಶಿವರಾಜ್ 16*, ಮೊನೀಷ್ ರೆಡ್ಡಿ 28ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net