

ಬೆಂಗಳೂರು: ಸರ್ವಾಂಗೀಣ ನಿರ್ವಗಣೆ ತೋರಿದ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಟೂರ್ನಿಯಲ್ಲಿ ಹಾಲಿ ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಮಯಾಂಕ್ ಅಗರ್ವಾಲ್ ಬಳಗ ಸತತ 8ನೇ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ವೇಗಿಗಳಾದ ಅಭಿಲಾಷ್ ಶೆಟ್ಟಿ (19ಕ್ಕೆ 3) ಹಾಗೂ ಡಿ. ಅವಿನಾಶ್ (22ಕ್ಕೆ 3) ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿ 19.3 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ಮೊತ್ತ ಬೆನ್ನತ್ತಿದ್ದ ಗುಲ್ಬರ್ಗಾ ಮಿಸ್ಟಿಕ್ಸ್ 14.5 ಓವರ್‌ಗಳಲ್ಲಿ 5 ವಿಕೆಟ್‌ಗೆ 114 ರನ್ ಪೇರಿಸಿ, ಟೂರ್ನಿಯಲ್ಲಿ 5ನೇ ಗೆಲುವು ಕಂಡಿತು.
ಬೆಂಗಳೂರು ಬ್ಲಾಸ್ಟರ್ಸ್: 19.3 ಓವರ್‌ಗಳಲ್ಲಿ 113 (ಮಯಾಂಕ್ 15, ಡಿ. ನಿಶ್ಚಲ್ 36, ಶುಭಾಂಗ್ 8, ಸೂರಜ್ 15, ಅಮಾನ್ 18, ಅಭಿಲಾಷ್ 19ಕ್ಕೆ 3, ಅವಿನಾಶ್ 22ಕ್ಕೆ 3).
ಗುಲ್ಬರ್ಗಾ ಮಿಸ್ಟಿಕ್ಸ್: 14.5 ಓವರ್‌ಗಳಲ್ಲಿ 5 ವಿಕೆಟ್‌ಗೆ 114 (ಎಲ್‌ಆರ್ ಚೇತನ್ 17, ಮ್ಯಾಕ್ನೀಲ್ 28, ಆರ್. ಸ್ಮರಣ್ 28, ಕೆವಿ ಅನೀಶ್ 17, ಅಮಿತ್ ವರ್ಮ 11*, ರಿಷಿ 18ಕ್ಕೆ1, ತನೀಷ್ 18ಕ್ಕೆ1).
ನಾಳೆಯ ಪಂದ್ಯಗಳು
ಮೈಸೂರು ವಾರಿಯರ್ಸ್-ಬೆಂಗಳೂರು ಬ್ಲಾಸ್ಟರ್ಸ್
ಆರಂಭ: ಮಧ್ಯಾಹ್ನ 1
ಶಿವಮೊಗ್ಗ ಲಯನ್ಸ್-ಹುಬ್ಬಳ್ಳಿ ಟೈಗರ್ಸ್
ಆರಂಭ: ಸಂಜೆ 5.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.