ಸೆಮಿಫೈನಲ್‌ಗೇರಿದ ಮೈಸೂರು: ಗುಲ್ಬರ್ಗಾ ಹಾದಿಯೂ ಸುಗಮ

mys
Published on

ಬೆಂಗಳೂರು: ಆರಂಭಿಕ ಆರ್. ಸಮರ್ಥ್ (62* ರನ್, 50 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಬಲದಿಂದ ಮೈಸೂರು ವಾರಿಯರ್ಸ್‌ ತಂಡ ಎರಡನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ತನ್ನ 10ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ಎದುರು 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಕರುಣ್ ನಾಯರ್ ಪಡೆ 2ನೇ ತಂಡವಾಗಿ ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿದೆ. ಸೋಲಿನ ನಡುವೆ ಉತ್ತಮ ರನ್‌ರೇಟ್‌ನಿಂದಾಗಿ ಗುಲ್ಬರ್ಗಾ ಸೆಮೀಸ್ ಹಾದಿಯೂ ಸುಗಮವೆನಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಲ್ಬರ್ಗಾ 7 ವಿಕೆಟ್‌ಗೆ 153 ರನ್‌ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಮೈಸೂರು 18 ಓವರ್‌ಗಳಲ್ಲಿ 2 ವಿಕೆಟ್‌ಗೆ 154 ರನ್‌ಗಳಿಸಿ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿತು.

ಗುಲ್ಬರ್ಗಾ ಮಿಸ್ಟಿಕ್ಸ್: 7 ವಿಕೆಟ್‌ಗೆ 153 (ಎಲ್‌ಆರ್ ಚೇತನ್ 34, ಎ. ಪ್ರಜ್ವಲ್ 11, ಮ್ಯಾಕ್ನೀಲ್ 15, ಕೆವಿ ಅನೀಶ್ 19, ಎಸ್. ಶರತ್ 26, ಡಿ. ಅವಿನಾಶ್ 19*, ಜೆ. ಸುಚಿತ್ 28ಕ್ಕೆ3, ಕುಶಾಲ್ 17ಕ್ಕೆ 2).

ಮೈಸೂರು ವಾರಿಯರ್ಸ್‌: 18 ಓವರ್‌ಗಳಲ್ಲಿ 2 ವಿಕೆಟ್‌ಗೆ 2 ವಿಕೆಟ್‌ಗೆ 154 (ಎಸ್‌ಯು ಕಾರ್ತಿಕ್ 20, ಆರ್. ಸಮರ್ಥ್ 62*, ಕರುಣ್ 23, ಲಂಕೇಶ್ 39*, ಹಾರ್ದಿಕ್ ರಾಜ್ 30ಕ್ಕೆ 2). ಪಂದ್ಯಶ್ರೇಷ್ಠ: ಆರ್. ಸಮರ್ಥ್.

ನಾಳೆಯ ಪಂದ್ಯಗಳು

ಮಂಗಳೂರು ಡ್ರ್ಯಾಗನ್ಸ್- ಗುಲ್ಬರ್ಗಾ ಮಿಸ್ಟಿಕ್ಸ್

ಆರಂಭ: ಮಧ್ಯಾಹ್ನ 1

ಶಿವಮೊಗ್ಗ ಲಯನ್ಸ್-ಬೆಂಗಳೂರು ಬ್ಯಾಸ್ಟರ್ಸ್‌

ಆರಂಭ: ಸಂಜೆ 5.30

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net