ಮೈಸೂರು ವಾರಿಯರ್ಸ್‌ಗೆ ಲಂಕೇಶ್ ಗೆಲುವಿನ ಇಂಪ್ಯಾಕ್ಟ್: ರೋಹನ್ ಪಾಟೀಲ್ ಆಟ ವ್ಯರ್ಥ

mys
Published on

ಬೆಂಗಳೂರು: ಇಂಪ್ಯಾಕ್ಟ್ ಪ್ಲೇಯರ್ ಲಂಕೇಶ್ (68* ರನ್, 45 ಎಸೆತ, 4 ಬೌಂಡರಿ, 6 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಬಲದಿಂದ ಮೈಸೂರು ವಾರಿಯರ್ಸ್‌ ತಂಡ ದಿನದ 2ನೇ ಪಂದ್ಯದಲ್ಲಿ ಮಂಗಳೂರು ಡ್ಯ್ರಾಗನ್ಸ್ ಎದುರು 7 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿತು. ಇದರೊಂದಿಗೆ ಕರುಣ್ ನಾಯರ್ ಪಡೆ 2ನೇ ಸ್ಥಾನ ಭದ್ರ ಪಡಿಸಿಕೊಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ತಂಡ ರೋಹನ್ ಪಾಟೀಲ್ (52 ರನ್, 42 ಎಸೆತ, 2 ಬೌಂಡರಿ, 3 ಸಿಕ್ಸರ್) ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 140 ರನ್ ಕಲೆಹಾಕಿತು. ಪ್ರತಿಯಾಗಿ ಲಂಕೇಶ್ ಬಿರುಸಿನ ಬ್ಯಾಟಿಂಗ್‌ನಿಂದ ಮೈಸೂರು ವಾರಿಯರ್ಸ್‌ ತಂಡ 16.3 ಓವರ್‌ಗಳಲ್ಲಿ 3 ವಿಕೆಟ್‌ಗೆ 141 ರನ್ ಪೇರಿಸಿ ಗೆಲುವಿನ ಸಂಭ್ರಮ ಕಂಡಿತು.

ಮಂಗಳೂ ಡ್ಯ್ರಾಗನ್ಸ್: 8 ವಿಕೆಟ್‌ಗೆ 140 (ಕೆ. ಸಿದ್ದಾರ್ಥ್ 0, ರೋಹನ್ ಪಾಟೀಲ್ 52, ಬಿಆರ್ ಶರತ್ 11, ಕೆ. ಗೌತಮ್ 15, ಅನಿರುದ್ಧ ಜೋಷಿ 13, ಅನೀಶ್ವರ್ 11, ಮೊನೀಷ್ ರೆಡ್ಡಿ 42ಕ್ಕೆ 3, ಜೆ. ಸುಚಿತ್ 24ಕ್ಕೆ 2).

ಮೈಸೂರು ವಾರಿಯರ್ಸ್‌: 16.3 ಓವರ್‌ಗಳಲ್ಲಿ 3 ವಿಕೆಟ್‌ಗೆ 141 (ಆರ್. ಸಮರ್ಥ್ 6, ಭರತ್ 10, ಕರುಣ್ ನಾಯರ್ 43, ಲಂಕೇಶ್ 68*, ಶೋಯೆಬ್ ಮ್ಯಾನೇಜರ್ 11*, ಜಿ. ನವೀನ್ 12ಕ್ಕೆ 1)

ನಾಳೆಯ ಪಂದ್ಯಗಳು

ಶಿವಮೊಗ್ಗ ಲಯನ್ಸ್-ಮಂಗಳೂರು ಡ್ರ್ಯಾಗನ್ಸ್

ಆರಂಭ: ಮಧ್ಯಾಹ್ನ 1

ಬೆಂಗಳೂರು ಬ್ಲಾಸ್ಟರ್ಸ್‌ - ಗುಲ್ಬರ್ಗಾ ಮಿಸ್ಟಿಕ್ಸ್

ಆರಂಭ: ಸಂಜೆ 5.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net