ಸಿಎಸ್​ಕೆ ತಂಡದ ಮುಂದಿನ 2 ಪಂದ್ಯಗಳಿಗೆ ಸ್ಟಾರ್​ ವೇಗಿ ಅಲಭ್ಯ

New-Project-3
Published on

ನವದೆಹಲಿ:ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸೋಲುಂಡಿರುವ ಹಾಲಿ ಚಾಂಪಿಯನ್​ ಸಿಎಸ್​ಕೆಗೆ ಮತ್ತೊಂದು ಹಿನ್ನಡೆ ಎದುರಾಗಿದೆ. ವೇಗಿ ಮುಸ್ತಾಫಿಜುರ್​ ರೆಹಮಾನ್​ ಸಿಎಸ್​ಕೆ ಪರ ಮುಂದಿನ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯವಹಿಸಲಿರುವ ಮುಂಬರುವ ಟಿ20 ವಿಶ್ವಕಪ್​ಗಾಗಿ ವೀಸಾ ಪ್ರಕ್ರಿಯೆ ಪೂರ್ಣಗೊಳಿಸಲು ಮುಸ್ತಾಫಿಜುರ್​ ತವರು ಬಾಂಗ್ಲಾದೇಶಕ್ಕೆ ಮರಳಿದ್ದಾರೆ. ಪ್ರಸ್ತುತ ಸಿಎಸ್​ಕೆ ತಂಡ ಹೈದರಾಬಾದ್​ನಲ್ಲಿದ್ದು, ಶುಕ್ರವಾರ ಆತಿಥೇಯ ಸನರೈಸರ್ಸ್​ ಹೈದರಾಬಾದ್​ ವಿರುದ್ಧ ಆಡಲಿದೆ. 28 ವರ್ಷದ ಮುಸ್ತಾಫಿಜುರ್​ ಹಾಲಿ ಟೂರ್ನಿಯಲ್ಲಿ ಗರಿಷ್ಠ 7 ವಿಕೆಟ್​ ಪಡೆದಿರುವ ಬೌಲರ್​ ಎನಿಸಿದ್ದಾರೆ. 202ರ ಐಪಿಎಲ್​ ಹರಾಜಿನಲ್ಲಿ ಸೇಲಾದ ಬಾಂಗ್ಲಾದೇಶದ ಏಕೈಕ ಆಟಗಾರ ಆಗಿದ್ದಾರೆ.ಮುಸ್ತಾಫಿಜುರ್​ ಬದಲಿಗೆ ಸಿಎಸ್​ಕೆ ಪರ ಮುಂದಿನ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್​ ಮಹೀಶ್​ ತೀಣ ಅಥವಾ ಆಲ್ರೌಂಡರ್​ ಮೊಯಿನ್​ ಅಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಹೊರಬಿದ್ದ ಮಾವಿ: ಆರ್​ಸಿಬಿ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಏರಿಕೆ ಕಂಡಿರುವ ಲಖನೌ ಸೂಪರ್​ ಜೈಂಟ್ಸ್​ ತಂಡಕ್ಕೆ ಆಘಾತ ಎದುರಾಗಿದ್ದು, ಗಾಯಾಳು ಶಿವಂ ಮಾವಿ ಐಪಿಎಲ್​&17ರ ಆವೃತ್ತಿಯಿಂಲೆ ಹೊರಬಿದ್ದಿದ್ದಾರೆ. ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್​ ಮಾಡುವ ಮೂಲಕ ್ರಾಂಚೈಸಿ ಮಾಹಿತಿ ನೀಡಿದೆ. 2023ರ ಆಗಸ್ಟ್​ನಲ್ಲಿ ಕೊನೆಯದಾಗಿ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ್ದ ಮಾವಿ, ಕಳೆದ ವರ್ಷ ನಡೆದ ಐಪಿಎಲ್​ನಲ್ಲಿ ಹರಾಜಿನಲ್ಲಿ < 6.4 ಕೋಟಿಗೆ ಲಖನೌ ತಂಡ ಸೇರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net