ಮುರಳಿ ವಿಜಯ್ ಜತೆ ಪೆರ್ರಿ ಡಿನ್ನರ್ ಡೇಟ್!

page 10 6
Published on

ನವದೆಹಲಿ: ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಮುರಳಿ ವಿಜಯ್ ಇತ್ತೀಚೆಗೆ ವಿಶೇಷ ಅಭಿಲಾಷೆ ಯೊಂದನ್ನು ವ್ಯಕ್ತಪಡಿಸಿದ್ದರು. ಅದುವೇ, ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಜತೆಗೆ ಡಿನ್ನರ್ ಡೇಟ್​ನಲ್ಲಿ ಪಾಲ್ಗೊಳ್ಳುವುದು. ಕ್ರೀಡಾ ನಿರೂಪಕಿ ರಿಧಿಮಾ ಪಾಠಕ್ ಜತೆಗಿನ ಇನ್​ಸ್ಟಾಗ್ರಾಂ ಲೈವ್ ಮಾತುಕತೆಯ ವೇಳೆ ಪೆರ್ರಿ, ಮುರಳಿ ವಿಜಯ್ ಜತೆಗೆ ಡಿನ್ನರ್ ಡೇಟ್​ಗೆ ಹೋಗಲು ಒಪ್ಪಿಕೊಂಡಿದ್ದಾರೆ. ಜತೆಗೊಂದು ಷರತ್ತು ಕೂಡ ವಿಧಿಸಿದ್ದಾರೆ. \

ಅದೇನೆಂದರೆ, ಡಿನ್ನರ್​ನ ಬಿಲ್ ಅನ್ನು ವಿಜಯ್ ಅವರೇ ಪಾವತಿಸಬೇಕೆಂಬುದು! ವಿಜಯ್ ವ್ಯಕ್ತಪಡಿಸಿದ ಆಸೆಯಿಂದ ತಮಗೆ ಗೌರವ ಸಿಕ್ಕಂತಾಗಿದೆ ಎಂದೂ ಹೇಳಿದ್ದಾರೆ.

ವಿಜಯ್ಗೆ ಇತ್ತೀಚೆಗೆ ಡಿನ್ನರ್​ಗೆ ಜತೆಯಾಗಿ ಹೋಗಲು ಇಷ್ಟ ಪಡುವ ಇಬ್ಬರು ಕ್ರಿಕೆಟಿಗರ ಹೆಸರು ಕೇಳಿದಾಗ, ಮಾಜಿ ಆರಂಭಿಕ ಜತೆಗಾರ ಶಿಖರ್ ಧವನ್ ಜತೆಗೆ ಎಲ್ಲಿಸ್ ಪೆರ್ರಿ ಹೆಸರು ಹೇಳಿದ್ದರು. ಪೆರ್ರಿ ಸುಂದರಿಯಾಗಿರುವುದರಿಂದ ಆಕೆಯ ಜತೆಗೆ ಡಿನ್ನರ್ ಡೇಟ್​ಗೆ ಹೋಗುವೆ ಎಂದಿದ್ದರು. ಇನ್ನು ಧವನ್ ಜತೆಗೆ ಊಟಕ್ಕೆ ಕುಳಿತಾಗ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರೆ, ನಾನು ತಮಿಳಿನಲ್ಲಿ ಮಾತನಾಡುತ್ತಿರುತ್ತೇನೆ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net