ಮುಂಬಾಗೆ ಸೋಲುಣಿಸಿದ ಜೈಪುರ: ಅರ್ಜುನ್ ದೇಸ್ವಾಲ್ ಅಬ್ಬರದ ಆಟ

New-Project-11
Published on

ಮುಂಬೈ: ಸ್ಟಾರ್ ರೈಡರ್ ಅರ್ಜುನ್ ದೇಸ್ವಾಲ್ (17) ನಡೆಸಿದ 15 ಯಶಸ್ವಿ ರೈಡಿಂಗ್‌ಗಳ ಬಲದಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ 58ನೇ ಪಂದ್ಯದಲ್ಲಿಯು ಮುಂಬಾ ವಿರುದ್ಧ 41-31ಅಂಕಗಳಿಂದ ಭರ್ಜರಿ ಜಯ ದಾಖಲಿಸಿದೆ.

ಎನ್‌ಎಸ್‌ಸಿಎನಲ್ಲಿ ಶನಿವಾರ ನಡೆದ ಮೊದಲ ಹಣಾಹಣಿಯಲ್ಲಿ ಅರ್ಜುನ್, ಪ್ರಸಕ್ತ ಆವೃತ್ತಿಯಲ್ಲಿ 100 ಅಂಕ ಗಳಿಸಿದ ಗೌರವಕ್ಕೆ ಭಾಜನರಾದರು. ಜತೆಗೆ ಜೈಪುರ ತಂಡದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಇವರಿಗೆ ವಿ. ಅಜಿತ್(6 ಅಂಕ) ಮತ್ತು ಅಂಕುಶ್ (5 ಅಂಕ) ಉತ್ತಮ ಸಾಥ್ ನೀಡಿದರು. 6ನೇ ಜಯ ದಾಖಲಿಸಿದ ಜೈಪುರ, ಸದ್ಯ 38 ಅಂಕಗಳನ್ನು ಕಲೆಹಾಕಿದರೆ, ಮುಂಬಾ, 31 ಅಂಕಗಳನ್ನು ಹೊಂದಿದೆ. ಮುಂಬಾ ಪರ ಏಕಾಂಗಿ ಹೋರಾಟ ನಡೆಸಿದ ಗುಮಾನ್ ಸಿಂಗ್ 13 ಅಂಕಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಪ್ರಥಮಾರ್ಧದ ಮುನ್ನಡೆಯಿಂದ ಮತ್ತಷ್ಟು ಆಕ್ರಮಣಕಾರಿ ಆಟವಾಡಿದ ಜೈಪುರ ಆಟಗಾರರು, ಎಲ್ಲ ವಿಭಾಗದಲ್ಲೂ ನಿಯಮಿತವಾಗಿ ಅಂಕ ಕಲೆಹಾಕಿದರು. ದೇಸ್ವಾಲ್ ಸಾಹಸದಿಂದ 28ನೇ ನಿಮಿಷದಲಿ ಆತಿಥೇಯ ತಂಡವನ್ನು ಎರಡನೇ ಬಾರಿ ಆಲೌಟ್ ಮಾಡಿದ ಪ್ಯಾಂಥರ್ಸ್ ಮುನ್ನಡೆಯನ್ನು 10 ಅಂಕಗಳಿಗೆ ವಿಸ್ತರಿಸಿತು. ಪಂದ್ಯ ಮುಗಿಯಲು ಹತ್ತು ನಿಮಿಷಗಳು ಬಾಕಿ ಇರುವಾಗ 34-20ರಲ್ಲಿಹಿಡಿತ ಸಾಧಿಸಿದ ಜೈಪುರ, ರಕ್ಷಣಾತ್ಮಕ ಆಟಕ್ಕೆ ಆದ್ಯತೆ ನೀಡಿತು.

ಜೈಪುರ ಪಿಂಕ್ ಪ್ಯಾಂಥರ್ಸ್ ಪಂದ್ಯದ ಮೊದಲಾರ್ಧಕ್ಕೆ ಯು ಮುಂಬಾ ವಿರುದ್ಧ 22-13 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತು.

ಅಂಕುಶ್ ಮತ್ತು ಅಜಿತ್ ಕುಮಾರ್ ಅವರನ್ನು ಔಟ್ ಮಾಡುವ ಮೂಲಕ ಗುಮಾನ್ ಸಿಂಗ್ ಮುಂಬಾ ತಂಡದ ಭರ್ಜರಿ ಆರಂಭಕ್ಕೆ ಕಾರಣರಾದರು. ಆದರೆ ಇದೇ ಅಬ್ಬರವನ್ನು ಕಾಯ್ದುಕೊಳ್ಳಲು ಆತಿಥೇಯ ಮುಂಬಾ ತಂಡಕ್ಕೆ ಸಾಧ್ಯವಾಗಲಿಲ್ಲ. ಪಂದ್ಯದ 8 ನಿಮಿಷ ಕಳೆಯುವುದರೊಳಗೆ ಮುಂಬಾ ತಂಡವನ್ನು ಆಲೌಟ್ ಮಾಡಿದ ಜೈಪುರ ಆರಂಭದಲ್ಲೆ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು.

ನಾಳೆಯ ಪಂದ್ಯಗಳು

ಪುಣೇರಿ ಪಲ್ಟನ್ ಮತ್ತು ತಮಿಳ್ ತಲೈವಾಸ್

ಬೆಂಗಾಲ್ ವಾರಿಯರ್ಸ್ ಮತ್ತು ಹರಿಯಾಣ ಸ್ಟಿಲರ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net