

ಅಬುಧಾಬಿ: 13ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಆರಂಭಗೊಂಡಿದೆ. ಈಗಾಗಲೇ ಎಲ್ಲ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಸೆ.19 ರಂದು ಉದ್ಘಾಟನಾ ಪಂದ್ಯಕ್ಕೂ ವೇದಿಕೆ ಸಜ್ಜಾಗಿದೆ. ಕಠಿಣ ಅಭ್ಯಾಸದ ನಡುವೆಯೂ ಆಟಗಾರರ ಮೋಜು ಮಸ್ತಿ ಮಾತ್ರ ಕಡಿಮೆಯಾಗಿಲ್ಲ. ಮುಂಬೈ ಇಂಡಿಯನ್ಸ್ ಆಟಗಾರರು ಅಬಿಧಾಬಿಯಲ್ಲಿರುವ ಬೀಚ್‌ನಲ್ಲಿ ಮೋಜು- ಮಸ್ತಿ ಮಾಡಿರುವ ಫೋಟೋಗಳು ವೈರಲ್ ಆಗಿವೆ. ಮುಂಬೈ ಇಂಡಿಯನ್ಸ್‌ನ ಕೆಲ ಆಟಗಾರರು ಪತ್ನಿ, ಮಕ್ಕಳ ಸಮೇತ ತೆರಳಿದ್ದು, ಅವರೊಂದಿಗೆ ಬೀಚ್‌ನಲ್ಲಿ ಆಟವಾಡುವ ಮೂಲಕ ಸಮಯ ಕಳೆದಿದ್ದಾರೆ.
ಇದನ್ನೂ ಓದಿ: ನಿವೃತ್ತಿಯಿಂದ ವಾಪಸ್ ಆಗಲು ಯುವರಾಜ್ ಸಿಂಗ್ ಚಿಂತನೆ..!
ಮಾರ್ಚ್ 29 ರಿಂದ ಆರಂಭಗೊಳ್ಳಬೇಕಿದ್ದ ಐಪಿಎಲ್ ಕರೊನಾ ವೈರಸ್ ಭೀತಿಯಿಂದಾಗಿ ಮುಂದೂಡಲ್ಪಟ್ಟಿತು. ಸೆ.19 ರಿಂದ ನ.10ರವರೆಗೆ ಟೂರ್ನಿ ನಡೆಯಲಿದ್ದು, 53 ದಿನಗಳ ಕಾಲ 60 ಪಂದ್ಯಗಳು ನಡೆಯಲಿವೆ.