

RCB vs MI: ಇಂದು (ಏ.07) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ, ಮೊದಲು ಬೌಲಿಂಗ್ ಆಯ್ದುಕೊಂಡು ಆರ್ಸಿಬಿಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು.
ಅಂತೆಯೇ ಮೊದಲು ಬ್ಯಾಟ್ ಮಾಡುತ್ತಿರುವ ಆರ್ಸಿಬಿಗೆ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ವಿಕೆಟ್ ಶೀಘ್ರವೇ ಪತನಗೊಂಡರೆ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಜಿತೇಶ್ ಶರ್ಮ ಮೈದಾನದ ಸುತ್ತಲ್ಲೇ ಸ್ಫೋಟಕ ಬ್ಯಾಟಿಂಗ್ ದಾಳಿ ನಡೆಸಿ, ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.ಈ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ಗೆ ಉತ್ತಮ ಆರಂಭ ಸಿಗದೆ, ಕಡೆಗೂ ಸೋಲಿನ ಸುಳಿಯಲ್ಲಿ ಸಿಲುಕಿತು.
ಮುಂಬೈ ಪರ ಆರಂಭಿಕರಾದ ರೋಹಿತ್ ಶರ್ಮ ಎಂದಿನಂತೆ ಕಳಪೆ ಪ್ರದರ್ಶನ ಇಲ್ಲಿಯೂ ಮುಂದುವರಿಸಿದರು. ಆರಂಭದಲ್ಲೇ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಅವರ ಬೆನ್ನಲ್ಲೇ ಒಬ್ಬರಂತೆ ಮತ್ತೊಬ್ಬರು ಬ್ಯಾಟರ್ಗಳು ವಿಕೆಟ್ ಒಪ್ಪಿಸಿ, ಪೆವಿಲಿಯನ್ನತ್ತ ಸಾಗಿದರು. ಈ ಮಧ್ಯೆ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಲ್ಲದೇ ಕ್ಯಾಪ್ಟನ್ ಪ್ರದರ್ಶನ ತೋರಿದರು.
ಹಾರ್ದಿಕ್ ಮತ್ತು ತಿಲಕ್ ವರ್ಮ ನೀಡಿದ ಉತ್ತಮ ಇನ್ನಿಂಗ್ಸ್ ಕಡೆಗೂ ಫಲಿಸಲಿಲ್ಲ. ಇವರಿಬ್ಬರ ಹೋರಾಟವು ಫಲಿಸಲಿಲ್ಲ ಎಂಬುದೇ ಎಂಐ ಫ್ರಾಂಚೈಸಿ ಅಭಿಮಾನಿಗಳ ಬೇಸರ. ಇನ್ನು ಈ ಪಂದ್ಯದಲ್ಲಿಯೂ ಗೆದ್ದು ಬೀಗಿದ ಆರ್ಸಿಬಿ, ಐಪಿಎಲ್ನಲ್ಲಿ ತನ್ನ ಮೂರನೇ ಗೆಲುವನ್ನು ದಾಖಲಿಸಿದೆ.
ತಿಲಕ್ ವರ್ಮ ( 56 ರನ್, 29 ಎಸೆತ)
ಹಾರ್ದಿಕ್ ಪಾಂಡ್ಯ ( 42 ರನ್, 15 ಎಸೆತ)
ಸೂರ್ಯಕುಮಾರ್ ಯಾದವ್ (28 ರನ್, 26 ಎಸೆತ)