ಕೊಟ್ಟಿರುವ 45 ಕೋಟಿ ರೂ. ಹಣದಲ್ಲಿ ಈ ಇಬ್ಬರನ್ನು ಖರೀದಿಸಿ! ಹರಾಜಿನಲ್ಲಿ ಮುಂಬೈ ಇಂಡಿಯನ್ಸ್​ಗೆ ಸವಾಲು

ವಿಜಯವಾಣಿ - 2024-11-08T115534.582
Published on

ನವದೆಹಲಿ: ಇತ್ತೀಚೆಗಷ್ಟೇ ಐಪಿಎಲ್​ ರಿಟೆನ್ಶನ್ ಪ್ರಕ್ರಿಯೆ ಮುಗಿದಿದ್ದು, ಫ್ರಾಂಚೈಸಿಗಳಿಂದ ಸ್ಟಾರ್​ ಆಟಗಾರರೇ ಹೊರಬಿದ್ದಿದ್ದಾರೆ. ಪಂಜಾಬ್​ ಕಿಂಗ್ಸ್​ನಿಂದ ಶಿಖರ್ ಧವನ್​, ಲಖನೌ ಸೂಪರ್ ಜೈಂಟ್ಸ್​ನ​ ಕೆ.ಎಲ್. ರಾಹುಲ್​, ಡೆಲ್ಲಿ ಕ್ಯಾಪಿಟಲ್ಸ್​ನ ರಿಷಭ್ ಪಂತ್​, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಫಾಫ್ ಡು ಪ್ಲೆಸಿಸ್​ ಮತ್ತು ಕೋಲ್ಕತ ನೈಟ್​ ರೈಡರ್ಸ್​ನಿಂದ ಶ್ರೇಯಸ್ ಅಯ್ಯರ್​ ಇದೀಗ ಐಪಿಎಲ್​ ಹರಾಜಿಗೆ ನೇರವಾಗಿ ಕಾಲಿಟ್ಟ ಸ್ಟಾರ್​ ಆಟಗಾರರು. ಪ್ರಮುಖವಾಗಿ ಈ ಐವರೂ ಕೂಡ ಆಯಾ ಫ್ರಾಂಚೈಸಿಗಳಿಗೆ ಕ್ಯಾಪ್ಟನ್ ಆಗಿ ಮಿಂಚಿದವರು. ದುರಾದೃಷ್ಟವಶಾತ್​ ಇವರಿಗೆ ತಂಡದಲ್ಲಿ ಉಳಿದುಕೊಳ್ಳುವ ಅವಕಾಶ ಸಿಗಲಿಲ್ಲ ಎಂಬ ಸಂಗತಿ ಕ್ರಿಕೆಟ್ ಪ್ರಿಯರಲ್ಲಿ ಭಾರೀ ಆಶ್ಚರ್ಯ ಮೂಡಿಸಿತು. ಸದ್ಯ ಇವರೆಲ್ಲರ ಜತೆ ಆರ್​ಸಿಬಿಯ ಗ್ಲೆನ್ ಮ್ಯಾಕ್ಸ್​ವೆಲ್​, ಕೆಕೆಆರ್​ನ ಮಿಚೆಲ್​ ಸ್ಟಾರ್ಕ್​ ಹೀಗೆ ಕೆಲವು ಆಲ್​ರೌಂಡ್​ ಆಟಗಾರರನ್ನು ಖರೀದಿಸಲು ಪ್ರಾಂಚೈಸಿಗಳು (Mumbai Indians) ಸಜ್ಜಾಗಿವೆ.

CSK ಅಥವಾ LSG

ಈ ಸಾಲಿನಲ್ಲಿ ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಮುಂಬೈ ಇಂಡಿಯನ್ಸ್ ಕೂಡ ಮುಂಚೂಣಿಯಲ್ಲಿದ್ದು, ತಮ್ಮ ತಂಡಕ್ಕೆ ಬಲಿಷ್ಠ ಹಾಗೂ ಉತ್ತಮ ಆಲ್​ರೌಂಡರ್​ನ ಕರೆತರಲು ದೊಡ್ಡ ಯೋಜನೆ ಹಾಕಿಕೊಂಡಿದೆ. ಪ್ರಸ್ತುತ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್ ಇವರೆಡು ತಂಡಗಳು ಮಾತ್ರ ವದಂತಿಗಳನ್ನು ವದಂತಿಗಳಾಗಿಯೇ ಉಳಿಸಿವೆ. ಇದಕ್ಕೆ ಬಲವಾದ ಸಾಕ್ಷಿ, ಈ ಹಿಂದೆ ರೋಹಿತ್​ ತಮ್ಮ ಫ್ರಾಂಚೈಸಿ ಬಿಟ್ಟು ಸಿಎಸ್​ಕೆ ಅಥವಾ ಎಲ್​ಎಸ್​ಜಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಈ ಎಲ್ಲವೂ ತಲೆಕೆಳಗಾಗಿದ್ದು, ತಂಡವನ್ನು ಐದು ಬಾರಿ ಚಾಂಪಿಯನ್​ ಮಾಡಿದ ನಾಯಕನನ್ನು ತಾವು ಬಿಟ್ಟುಕೊಡುವುದಿಲ್ಲ ಎಂಬುದನ್ನು ಎಂಐ ಗಟ್ಟಿಯಾಗಿ ಸಾರಿದೆ.

ಆ ಇಬ್ಬರು ಇವರೇ

ಇದೇ ನವೆಂಬರ್​ 24 ಮತ್ತು 25ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಇಬ್ಬರು ಭಾರತೀಯ ಆಟಗಾರರನ್ನು ಖರೀದಿಸಲು ಮುಂದಾಗಿರುವ ಮುಂಬೈ ಇಂಡಿಯನ್ಸ್ (MI), ಅತೀ ಕಡಿಮೆ ಬಜೆಟ್​ನಲ್ಲಿ ತಮ್ಮ ಬಿಡ್ಡಿಂಗ್ ಮುಗಿಸಲು ಚಿಂತಿಸಿದೆ. ಈಗಾಗಲೇ ಜಸ್ಪ್ರೀತ್ ಬುಮ್ರಾ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮರನ್ನು ಉಳಿಸಿಕೊಂಡಿರುವ ಎಂಐ, ಮೆಗಾ ಹರಾಜಿನಲ್ಲಿ 45 ಕೋಟಿ ರೂ. ಮೊತ್ತದಲ್ಲಿ ಐಪಿಎಲ್​ನ ಅತೀ ಹೆಚ್ಚು ವಿಕೆಟ್ ಕಬಳಿಸುವ ಲೆಗ್ ಸ್ಪಿನ್ ಬೌಲರ್​ ಯಜುವೇಂದ್ರ ಚಹಲ್ ಮತ್ತು ವಾಷ್ಟಿಂಗನ್ ಸುಂದರ್​ರನ್ನು ಖರೀದಿಸಲು ಲೆಕ್ಕಾಚಾರ ಹಾಕಿಕೊಂಡಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net