

ಬೆಂಗಳೂರು: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಮಂಕಾದ ಆರ್‌ಸಿಬಿ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) 2ನೇ ಆವೃತ್ತಿಯ ತನ್ನ 4ನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಪರಾಭವಗೊಂಡಿದೆ. ಟೂರ್ನಿಯಲ್ಲಿ 3ನೇ ಗೆಲುವು ಸಾಧಿಸಿದ ಮುಂಬೈ ಜಯದ ಹಳಿಗೆ ಮರಳಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಸ್ಮತಿ ಮಂದನಾ ಪಡೆ ಸತತ 2ನೇ ಸೋಲಿನೊಂದಿಗೆ 4ನೇ ಸ್ಥಾನಕ್ಕೆ ಕುಸಿದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈನ ಹಂಗಾಮಿ ನಾಯಕಿ ನ್ಯಾಟ್ ಸೀವರ್ ಬ್ರಂಟ್ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ನಿರಂತರ ವಿಕೆಟ್ ಕಳೆದುಕೊಂಡರೂ, ಆಲ್ರೌಂಡರ್ ಎಲ್ಲಿಸ್ ಪೆರ‌್ರಿ (44 ರನ್, 38 ಎಸೆತ, 5 ಬೌಂಡರಿ) ಹಾಗೂ ಜಾರ್ಜಿಯಾ ವಾರೆಹ್ಯಾಂ(27) ಜತೆಯಾಟದ ಬಲದಿಂದ 6 ವಿಕೆಟ್‌ಗೆ 131 ರನ್ ಕಲೆಹಾಕಿತು. ಪ್ರತಿಯಾಗಿ ಯಸ್ತಿಕಾ ಭಾಟಿಯಾ (31) ಒದಗಿಸಿದ ಬಿರುಸಿನ ಆರಂಭ ಹಾಗೂ ಆಲ್ರೌಂಡರ್ ನ್ಯಾಟ್ ಸೀವರ್ ಬ್ರಂಟ್ (27) ಹಾಗೂ ಅಮೇಲಿಯಾ ಕೆರ್ (40*) ಜೋಡಿ 3ನೇ ವಿಕೆಟ್‌ಗೆ ಪೇರಿಸಿದ 35 ಎಸೆತದಲ್ಲಿ 49 ರನ್‌ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ 15.1 ಓವರ್‌ಗಳಲ್ಲಿ 3 ವಿಕೆಟ್‌ಗೆ 133 ರನ್‌ಗಳಿಸಿ ಜಯದ ಸಂಭ್ರಮ ಕಂಡಿತು.
ಆರ್‌ಸಿಬಿ: 6 ವಿಕೆಟ್‌ಗೆ 131 (ಸ್ಮತಿ 9, ಸೋಫಿ ಡಿವೈನ್ 9, ಎಸ್. ಮೇಘನಾ 11, ಎಲ್ಲಿಸ್ ಪೆರ‌್ರಿ 44*, ರಿಚಾ 7, ಮೂಲಿನೆಕ್ಸ್ 12, ವಾರೆಹ್ಯಾಂ 27, ಶ್ರೇಯಾಂಕಾ 7* ಇಸ್ಸಿ ವಾಂಗ್ 20ಕ್ಕೆ 1, ಸೀವರ್ ಬ್ರಂಟ್ 27ಕ್ಕೆ 2, ಪೂಜಾ 14ಕ್ಕೆ 2). ಮುಂಬೈ ಇಂಡಿಯನ್ಸ್: 15.1 ಓವರ್‌ಗಳಲ್ಲಿ 3 ವಿಕೆಟ್‌ಗೆ 133 (ಯಸ್ತಿಕಾ 31, ಮ್ಯಾಥ್ಯೂಸ್ 26, ಸೀವರ್ ಬ್ರಂಟ್ 27, ಅಮೆಲಿಯಾ 40*, ಪೂಜಾ 8* , ಡಿವೈನ್ 16ಕ್ಕೆ 1, ಶ್ರೇಯಾಂಕಾ 15ಕ್ಕೆ 1, ವಾರೆಹ್ಯಾಂ 18ಕ್ಕೆ 1).