ಇಂದು ಮುಂಬೈಗೆ ಡೆಲ್ಲಿ ಕ್ಯಾಪಿಟಲ್ಸ್ ಚಾಲೆಂಜ್

delhi and mumbai for web
Published on

ದುಬೈ: ಈಗಾಗಲೆ ಪ್ಲೇಆಫ್ ಖಾತ್ರಿಪಡಿಸಿಕೊಂಡಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-13ರಲ್ಲಿ ಶನಿವಾರದ ಮೊದಲ ಪಂದ್ಯದಲ್ಲಿ ಎದುರಾಗಲಿವೆ. ಲೀಗ್‌ನ ಆರಂಭಿಕ ಪಂದ್ಯಗಳಲ್ಲಿ ಮಿಂಚಿನ ನಿರ್ವಹಣೆ ತೋರಿದ್ದ ಡೆಲ್ಲಿ ತಂಡ ಟೂರ್ನಿ ಸಾಗುತ್ತಿದ್ದಂತೆ ತನ್ನ ಉತ್ಸಾಹ ಕಳೆದುಕೊಂಡಂತೆ ಕಾಣುತ್ತಿದೆ. ಗುರುವಾರ ಸಿಎಸ್‌ಕೆ ತಂಡ ಕೆಕೆಆರ್ ತಂಡವನ್ನು ಮಣಿಸಿದ್ದರಿಂದ ಮುಂಬೈ ಮೊದಲ ತಂಡವಾಗಿ ಪ್ಲೇಆಫ್ ಹಂತಕ್ಕೇರಿತು. ಮತ್ತೊಂದೆಡೆ, ಕಿಂಗ್ಸ್ ಇಲೆವೆನ್ ಪಂಜಾಬ್, ಕೆಕೆಆರ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಹೀನಾಯವಾಗಿ ಸೋತಿರುವ ಡೆಲ್ಲಿ ರನ್‌ರೇಟ್ ಹಿನ್ನಡೆಯಿಂದ 3ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಮುಂಬೈ ಎದುರು ಗೆದ್ದರೆ ಡೆಲ್ಲಿ ಪ್ಲೇಆಫ್ ಖಚಿತಪಡಿಸಿಕೊಳ್ಳಲಿದೆ. ಇಲ್ಲದಿದ್ದರೆ ಆರ್‌ಸಿಬಿ ವಿರುದ್ಧದ ತನ್ನ ಕೊನೇ ಲೀಗ್ ಪಂದ್ಯದವರೆಗೆ ಕಾಯಬೇಕಾಗುತ್ತದೆ.

* ಡೆಲ್ಲಿಗೆ ಕನಿಷ್ಠ ಒಂದು ಜಯ ಅಗತ್ಯ
ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೂ ಆಡಿರುವ 12 ಪಂದ್ಯಗಳಿಂದ 14 ಅಂಕ ಸಂಪಾದಿಸಿದ್ದು, ಲೀಗ್‌ನ ಮೊದಲ ಹಂತದಲ್ಲಿ ಭರ್ಜರಿ ನಿರ್ವಹಣೆ ಮೂಲಕ ಗಮನಸೆಳೆದಿತ್ತು. ಕಡೇ ಮೂರು ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ತಂಡ, ಉಳಿದಿರುವ ಎರಡು ಪಂದ್ಯಗಳಲ್ಲಿ ಬಲಿಷ್ಠ ನಿರ್ವಹಣೆ ತೋರಬೇಕಿದೆ. ಮುಂಬೈ ಹಾಗೂ ಕಡೇ ಲೀಗ್‌ನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ. ಉಳಿದಿರುವ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಜಯ ದಾಖಲಿಸಿದರೂ ಪ್ಲೇ-ಆಫ್ ಪ್ರವೇಶ ಪಡೆಯಲಿದೆ. ಡೆಲ್ಲಿ ಉಳಿದಿರುವ 2 ಪಂದ್ಯ ಸೋತರೆ, ಪಂಜಾಬ್, ಕೆಕೆಆರ್, ಸನ್‌ರೈಸರ್ಸ್‌ ತಂಡಗಳ ಲಿತಾಂಶದ ಮೇಲೆ ಪ್ಲೇ-ಆಫ್ ಭವಿಷ್ಯ ಅಡಗಿದೆ.

ಟೀಮ್ ನ್ಯೂಸ್
ಡೆಲ್ಲಿ ಕ್ಯಾಪಿಟಲ್ಸ್: ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಲರಾಗುತ್ತಿರುವ ಅಜಿಂಕ್ಯ ರಹಾನೆ ಬದಲಿಗೆ ಪೃಥ್ವಿ ಷಾ ಹನ್ನೊಂದರ ಬಳಗಕ್ಕೆ ಮರಳಬಹುದು. ಕಳೆದ ಪಂದ್ಯದಲ್ಲಿ ದುಬಾರಿಯಾದ ತುಷಾರ್ ದೇಶಪಾಂಡೆ ಬದಲಿಗೆ ಮೋಹಿತ್ ಶರ್ಮ ಅವಕಾಶ ಗಿಟ್ಟಿಸಿಕೊಳ್ಳಬಹುದು.
ಸಂಭಾವ್ಯ ತಂಡ: ಅಜಿಂಕ್ಯ ರಹಾನೆ/ಪೃಥ್ವಿ ಷಾ, ಶಿಖರ್ ಧವನ್, ರಿಷಭ್ ಪಂತ್ (ವಿಕೀ), ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯಿನಿಸ್, ಶಿಮ್ರೊನ್ ಹೆಟ್ಮೆಯರ್, ಅಕ್ಷರ್ ಪಟೇಲ್, ಕಗಿಸೊ ರಬಾಡ, ಆರ್.ಅಶ್ವಿನ್, ತುಷಾರ್ ದೇಶಪಾಂಡೆ/ಮೋಹಿತ್ ಶರ್ಮ

ಕಳೆದ ಪಂದ್ಯ: ಸನ್‌ರೈಸರ್ಸ್‌ ಎದುರು 88 ರನ್ ಸೋಲು.

ಮುಂಬೈ ಇಂಡಿಯನ್ಸ್: ಆರ್‌ಸಿಬಿ ಎದುರು ಭರ್ಜರಿ ಜಯ ದಾಖಲಿಸಿದ ವಿಶ್ವಾಸದಲ್ಲಿರುವ ಮುಂಬೈ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ. ರೋಹಿತ್ ಶರ್ಮ ಫಿಟ್ನೆಸ್ ಕುರಿತು ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ರೋಹಿತ್ ಶರ್ಮ ವಾಪಸಾದರೆ, ಸೌರಭ್ ತಿವಾರಿ ಹೊರಗುಳಿಯಲಿದ್ದಾರೆ.
ಸಂಭಾವ್ಯ ತಂಡ: ಕ್ವಿಂಟನ್ ಡಿಕಾಕ್ (ವಿಕೀ), ರೋಹಿತ್ ಶರ್ಮ/ಸೌರಭ್ ತಿವಾರಿ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್, ಜೇಮ್ಸ್ ಪ್ಯಾಟಿನ್‌ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.

ಕಳೆದ ಪಂದ್ಯ: ಆರ್‌ಸಿಬಿ ಎದುರು 5 ವಿಕೆಟ್ ಜಯ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ಮುಖಾಮುಖಿ: 25, ಮುಂಬೈ: 13, ಡೆಲ್ಲಿ : 12

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net