ಮುಂಬೈನಲ್ಲಿ ಇಂದು ಭಾರತ-ಇಂಗ್ಲೆಂಡ್ 5ನೇ ಟಿ20: ಶತಕದ ಸನಿಹ ಎಡಗೈ ವೇಗಿ ಅರ್ಷದೀಪ್ ಸಿಂಗ್

New Project
Published on

ಮುಂಬೈ: ತವರಿನಲ್ಲಿ ಗೆಲುವಿನ ಓಟವನ್ನು ಸತತ 17ನೇ ಸರಣಿಗೆ ವಿಸ್ತರಿಸಿರುವ ಭಾರತ ತಂಡ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲೂ ಜಯದ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಸೂರ್ಯಕುಮಾರ್ ಬಳಗ ಸರಣಿ ಗೆಲುವಿನ ಅಂತರವನ್ನು 4-1ಕ್ಕೆ ವಿಸ್ತರಿಸುವ ಹಂಬಲದಲ್ಲಿದ್ದರೆ, ಇಂಗ್ಲೆಂಡ್ ಸರಣಿ ಸೋಲಿನ ಅಂತರ ತಗ್ಗಿಸಲು ಹೋರಾಡಲಿದೆ.

ಭಾರತ ಸರಣಿ ಜಯಿಸುವಲ್ಲಿ ಯಶಸ್ವಿಯಾದರೂ, ಸೂರ್ಯಕುಮಾರ್ ಸಹಿತ ಇತರ ಬ್ಯಾಟರ್‌ಗಳ ಅಸ್ಥಿರ ನಿರ್ವಹಣೆ ತಂಡಕ್ಕೆ ಹಿನ್ನಡೆ ಎನಿಸಿದೆ. ಹಾಲಿ ಸರಣಿಯಲ್ಲಿ ಸಂಪೂರ್ಣವಾಗಿ ವೈಲ್ಯ ಕಂಡಿರುವ ಆರಂಭಿಕ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಾರ್ಮ್ ಕಳವಳಕಾರಿ ಎನಿಸಿದೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕೇರಳ ತಂಡದ ಪರ ಆಡದೇ ಸರಣಿಗೆ ಆಗಮಿಸಿದ್ದ ಸ್ಯಾಮ್ಸನ್, ಇಂಗ್ಲೆಂಡ್ ವೇಗಿಗಳ ಎದುರು ರನ್‌ಗಳಿಸಲು ಪರದಾಡಿದ್ದಾರೆ. ಶಾರ್ಟ್‌ಬಾಲ್ ದೌರ್ಬಲ್ಯ ಹೊಂದಿರುವ ಸ್ಯಾಮ್ಸನ್ ಸರಣಿಯಲ್ಲಿ ಕೇವಲ 35 ರನ್‌ಗಳಿಸಿದ್ದಾರೆ. ಸರಣಿಯಲ್ಲಿ ಮೀಸಲು ಅಥವಾ ಹೆಚ್ಚುವರಿ ಆರಂಭಿಕ ಆಟಗಾರ ಆಯ್ಕೆ ಮಾಡದಿರುವುದು ಸ್ಯಾಮ್ಸನ್‌ಗೆ ಪ್ಲಸ್ ಪಾಯಿಂಟ್ ಎನಿಸಿದೆ.

ಸರಣಿಯಲ್ಲಿ ಎರಡು ಬಾರಿ ಡಕೌಟ್ ಆಗಿರುವ ಸೂರ್ಯ ಉಳಿದ 2 ಪಂದ್ಯಗಳಲ್ಲಿ 12,14 ರನ್ ಮಾತ್ರ ಗಳಿಸಿದ್ದಾರೆ. ತವರಿನ ಅಂಗಣದಲ್ಲಿ ಾರ್ಮ್‌ಗೆ ಮರಳುವ ನಿರೀಕ್ಷೆಯಿದೆ. ಹಿಂದಿನ ಪಂದ್ಯದಲ್ಲಿ ಬ್ಯಾಟರ್‌ಗಳ ವೈಲ್ಯವನ್ನು ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ತುಂಬಿದ್ದಾರೆ. ಭಾರಿ ನಿರೀಕ್ಷೆಯೊಂದಿಗೆ ಬ್ರೆಂಡನ್ ಮೆಕ್ಕಲಂ ಮಾರ್ಗದರ್ಶನದಲ್ಲಿ ಸರಣಿಗೆ ಆಗಮಿಸಿದ ಇಂಗ್ಲೆಂಡ್ ತಂಡ ನಿರಾಸೆ ಕಂಡಿದೆ. ಸ್ಪಿನ್ನರ್‌ಗಳ ಎದುರಿನ ದೌರ್ಬಲ್ಯ ಮತ್ತೆ ಸಾಬೀತಾಗಿದೆ. ಅಂತಿಮ ಪಂದ್ಯದ ಗೆಲುವಿನೊಂದಿಗೆ ಏಕದಿನ ಸರಣಿಗೂ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ವಿಶ್ವಾಸದಲ್ಲಿದೆ. ಭಾರತದ ಸ್ಪಿನ್ ಅಸದ ಎದುರಿಗೆ ಇಂಗ್ಲೆಂಡ್ ವೇಗಿಗಳನ್ನು ಹೆಚ್ಚಾಗಿ ಸರಣಿ ಬಳಸಿಕೊಂಡಿದೆ. ಭಾರತದಲ್ಲಿ ಮೊದಲ ಬಾರಿ ಆಡುತ್ತಿರುವ ಜೇಕಬ್ ಬೆಥೆಲ್, ಜೇಮಿ ಸ್ಮಿತ್ ಅವರಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಮೂಡಿಬಂದಿಲ್ಲ.

ಶಮಿಗೆ ಮತ್ತೆ ಅವಕಾಶ?

ಕಾರ್ಯದೊತ್ತಡ ನಿರ್ವಹಣೆಯ ಭಾಗವಾಗಿ ಸರಣಿಯಲ್ಲಿ ಪಂದ್ಯದ ಆಡುವ 11ರ ಬಳಗದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳ ಸ್ಥಾನ ಸಂಗೀತ ಕುರ್ಚಿಯಂತಾಗಿದೆ. ಮೊದಲ 2 ಪಂದ್ಯಗಳಲ್ಲಿ ಆಡಿದ್ದ ಅರ್ಷದೀಪ್‌ಗೆ 3ನೇ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಮತ್ತೆ ಹಿಂದಿನ ಪಂದ್ಯದಲ್ಲಿ ಆಡಿಸಲಾಗಿತ್ತು. ಸರಿ ಸುಮಾರು ಒಂದೂವರೆ ವರ್ಷದ ಬಳಿಕ 3ನೇ ಪಂದ್ಯದಲ್ಲಿ ಕಣಕ್ಕಿಳಿದ ಮೊಹಮದ್ ಶಮಿಯನ್ನು ಒಂದೇ ಪಂದ್ಯಕ್ಕೆ ಸೀಮಿತಗೊಳಿಸಲಾಯಿತು. ಜತೆಗೆ ಆಡಿದ ಪಂದ್ಯದಲ್ಲೂ ಸಂಪೂರ್ಣ 4 ಓವರ್ ಕೋಟಾ ಬೌಲಿಂಗ್ ನಡೆಸಿಲ್ಲ. ಈಗಾಗಲೆ ಸರಣಿ ಗೆದ್ದಿರುವ ಭಾರತ ಅರ್ಷದೀಪ್ ಬದಲಿಗೆ ಶಮಿಗೆ ಮತ್ತೆ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ. ಸರಣಿ ಸ್ಪಿನ್ನರ್‌ಗಳನ್ನು ಹೆಚ್ಚಾಗಿ ಪ್ರಯೋಗಿಸಿರುವ ಕೋಚ್ ಗೌತಮ್ ಗಂಭೀರ್ ಕಾರ್ಯತಂತ್ರ ಲಿಸಿದೆ.

ಟೀಮ್‌ನ್ಯೂಸ್

ಭಾರತ: ಗೆಲುವಿನ ಕಾಂಬಿನೇಷನ್‌ನಲ್ಲಿ ಬದಲಾವಣೆ ಸಾಧ್ಯತೆಗಳು ಕಡಿಮೆ. ವೈಲ್ಯದ ನಡುವೆಯೂ ಸ್ಯಾಮ್ಸನ್ ಮತ್ತೊಂದು ಅವಕಾಶ ಪಡೆಯಲಿದ್ದಾರೆ. ಈಗಾಗಲೆ ಸರಣಿ ಜಯಿಸಿರುವುದರಿಂದ ಬೆಂಚ್‌ನಲ್ಲಿರುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿ ತಂಡದ ಭಾಗವಾಗಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ರಾಂತಿ ಪಡೆದರೆ ರಮಣ್‌ದೀಪ್ ಸಿಂಗ್ ಸ್ಥಾನ ಪಡೆಯಲಿದ್ದಾರೆ. ಮೊಹಮದ್ ಶಮಿ ಮತ್ತೆ ಆಡುವ ನಿರೀಕ್ಷೆ ಇದೆ.

ಇಂಗ್ಲೆಂಡ್: ಆರಂಭಿಕ ಫಿಲ್ ಸಾಲ್ಟ್ ಕಳಪೆ ಾರ್ಮ್ ಜತೆಗೆ ಬೆಥೆಲ್, ಜೇಮ್ಮಿ ಸ್ಮಿತ್ ವೈಲ್ಯ ತಂಡಕ್ಕೆ ದೊಡ್ಡ ಹಿನ್ನಡೆ ಎನಿಸಿದೆ. ಬೆಂಚ್ ಸಾಮರ್ಥ್ಯ ಪರೀಕ್ಷಿಸಲು ಯುವ ಸ್ಪಿನ್ನರ್ ರೆಹನ್ ಅಹ್ಮದ್ ಸ್ಥಾನ ನೀಡಿದರೂ ಅಚ್ಚರಿ ಇಲ್ಲ. ಹಿಂದಿನ ಪಂದ್ಯದಲ್ಲಿ ಗಮನಸೆಳೆದ ವೇಗಿ ಸಕಿಬ್ ಮಹಮೂದ್ ಮುಂದುವರಿಯಲ್ಲಿದ್ದಾರೆ.

ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್

3. ಹಾರ್ದಿಕ್ ಪಾಂಡ್ಯ(94) ಮೂರು ವಿಕೆಟ್ ಕಬಳಿಸಿದರೆ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಯಜುವೇಂದ್ರ ಚಹಾಲ್ (96) ಅವರನ್ನು ಹಿಂದಿಕ್ಕಿ 2ನೇ ಸ್ಥಾನದಲ್ಲಿದ್ದಾರೆ.

1. ಎಡಗೈ ವೇಗಿ ಅರ್ಷದೀಪ್ ಸಿಂಗ್ (99) ಇನ್ನೊಂದು ವಿಕೆಟ್ ಪಡೆದರೆ ಟಿ20ಯಲ್ಲಿ 100 ವಿಕೆಟ್ ಪೂರೈಸಿದ ಭಾರತದ ಮೊದಲ ಬೌಲರ್ ಎನಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net