ಮುಂಬೈ ಕ್ರಿಕೆಟ್​ ತಾರೆಯರಿಗೆ ಜಮ್ಮು-ಕಾಶ್ಮೀರ ಎದುರು ಮುಖಭಂಗ!

web mum
Published on

ಮುಂಬೈ: ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ, ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​, ಶ್ರೇಯಸ್​ ಅಯ್ಯರ್​ ಸಹಿತ ಸ್ಟಾರ್​ ಆಟಗಾರರ ಬಲ ಹೊಂದಿದ್ದ ನಡುವೆಯೂ ಹಾಲಿ ಮತ್ತು 42 ಬಾರಿಯ ರಣಜಿ ಚಾಂಪಿಯನ್​ ಮುಂಬೈ ತಂಡ ಜಮ್ಮು-ಕಾಶ್ಮೀರ ವಿರುದ್ಧದ ಲೀಗ್​ ಪಂದ್ಯದಲ್ಲಿ 5 ವಿಕೆಟ್​ಗಳಿಂದ ಪರಾಭವಗೊಂಡಿದೆ. ಇದರಿಂದ ಎ ಗುಂಪಿನಿಂದ ನಾಕೌಟ್​ ಹಂತಕ್ಕೇರುವ ಮುಂಬೈ ತಂಡದ ಆಸೆಗೆ ಹೊಡೆತ ಬಿದ್ದಿದೆ.

ಶಾರ್ದೂಲ್​ ಠಾಕೂರ್​ (119) ಶತಕದ ನಡುವೆ 2ನೇ ಇನಿಂಗ್ಸ್​ನಲ್ಲಿ 290 ರನ್​ಗಳಿಗೆ ಆಲೌಟ್​ ಆದ ಮುಂಬೈ, ಜಮ್ಮು-ಕಾಶ್ಮೀರಕ್ಕೆ 205 ರನ್​ ಗುರಿ ನೀಡಿತು. ಪ್ರತಿಯಾಗಿ ಸಂಟಿತ ಬ್ಯಾಟಿಂಗ್​ನಿಂದ ಜಮ್ಮು-ಕಾಶ್ಮೀರ 49 ಓವರ್​ಗಳಲ್ಲಿ 5 ವಿಕೆಟ್​ಗೆ 207 ರನ್​ ಗಳಿಸಿ ಜಯಿಸಿತು. ಸ್ಪಿನ್ನರ್​ ಶಮ್ಸ್​ ಮುಲಾನಿ (54ಕ್ಕೆ 4) ಹೊರತಾಗಿ ಮುಂಬೈನ ಇತರ ಬೌಲರ್​ಗಳು ಪರಿಣಾಮಕಾರಿ ಎನಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net