ಕರಾಟೆಯಲ್ಲಿ ಮಹಮ್ಮದ್ ಬಿಲಾಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ

Karate Tournament Muhammad Bilal
Published on

ಶಿವಮೊಗ್ಗ: ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ಶಿವಮೊಗ್ಗದ ಮಹಮ್ಮದ್ ಬಿಲಾಲ್ ಆಯ್ಕೆಯಾಗಿದ್ದು ಡಿ.19ರಿಂದ 24ರವರೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸುವರು ಎಂದು ಶಿವಮೊಗ್ಗ ಜಿಲ್ಲಾ ವುಶು ಸಂಸ್ಥೆ ಅಧ್ಯಕ್ಷ ಅಬ್ದುಲ್ ಗನಿ ಹೇಳಿದರು.

ನ.13ರಂದು ದಾವಣಗೆರೆಯಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ 19 ವರ್ಷದೊಳಗಿನ ಬಾಲಕ-ಬಾಲಕಿಯರ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಮುಖೀಬ್ ಅಹಮ್ಮದ್ ದರ್ವೆಶ್ ಮತ್ತು ಜುಗುನು ದಂಪತಿ ಪುತ್ರ, ಇಂಪಿರಿಯಲ್ ಪಿಯು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಮಹಮ್ಮದ್ ಬಿಲಾಲ್ ದರ್ವೆಶ್ 62 ಕೆಜಿ ವಿಭಾಗದಲ್ಲಿ ಜಿಲ್ಲೆ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್ ಮಾತನಾಡಿ, ಮಹಮದ್ ಬಿಲಾಲ್ ಕಳೆದ ವರ್ಷ ಕೂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಇದೀಗ ಎರಡನೇ ಬಾರಿ ಬಿಲಾಲ್ ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಖ್ಯಾತಿ ತಂದಿದ್ದಾರೆ ಎಂದರು.

ಇಂಪಿರಿಯಲ್ ಪಿಯು ಕಾಲೇಜಿನ ಪ್ರಾಚಾರ್ಯ ಖಲೀಂ ಉಲ್ಲಾಖಾನ್, ಅಧ್ಯಕ್ಷ ಮುಖೀಬ್ ಅಹ್ಮದ್, ಉಪಾಧ್ಯಕ್ಷ ಮಂಜಪ್ಪ, ಖಜಾಂಚಿ ಮೀನಾಕ್ಷಿ, ಮಹಮ್ಮದ್ ಮುಜಾಹೀದ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net