ಆಗಸ್ಟ್​ 15ರಂದೇ ಧೋನಿ ನಿವೃತ್ತಿ ಘೋಷಣೆ ಮಾಡಿದ್ಯಾಕೆ? ಇಲ್ಲಿದೆ ನೋಡಿ ನಿಜವಾದ ಕಾರಣ

Dhoni
Published on

ಭಾರತ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ಎಂ.ಎಸ್​.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ನಿನ್ನೆ ಅಂದರೆ ಆಗಸ್ಟ್​ 15ರಂದು ಘೋಷಿಸಿದ್ದಾರೆ.

ಕಳೆದ ಒಂದೂವರೆ ತಿಂಗಳಿಂದಲೂ ಧೋನಿ ನಿವೃತ್ತಿ ಬಗ್ಗೆ ಮಾತು ಕೇಳಿಬರುತ್ತಿದ್ದರೂ ಅವರು ಅಧಿಕೃತವಾಗಿ ಹೇಳಿರಲಿಲ್ಲ.

ಅಷ್ಟೆಲ್ಲ ದಿನಗಳಿಂದ ಕಾದು, ಆಗಸ್ಟ್​ 15ರಂದೇ ಯಾಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂಬ ಕುತೂಹಲವೂ ಹಲವರಲ್ಲಿ ಮೂಡಿದೆ. ಈ ಬಗ್ಗೆ ಧೋನಿಯವರ ಮ್ಯಾನೇಜರ್​ ಮಿಹಿರ್ ದಿವಾಕರ್​ ಸ್ಪಷ್ಟನೆ ನೀಡಿದ್ದಾರೆ.

ಮಹೇಂದ್ರ ಸಿಂಗ್​ ಧೋನಿಯವರು ಓರ್ವ ನಿಜವಾದ ದೇಶಭಕ್ತ. ನಮ್ಮ ದೇಶದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಸ್ವಾತಂತ್ರ್ಯ ಬಂದ ದಿನದಷ್ಟು ಮಹತ್ವದ ದಿನ ಇನ್ನೊಂದಿಲ್ಲ ಎಂಬುದು ಅವರ ಭಾವನೆ. ಅದೇ ಕಾರಣಕ್ಕೆ ಆಗಸ್ಟ್​ 15ರಂದು ತಮ್ಮ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸುಮಾರು ದಿನಗಳಿಂದಲೂ ಧೋನಿಯವರ ನಿವೃತ್ತಿ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ಆದರೆ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ. ಸದ್ಯ ಅವರ ಆಧ್ಯತೆ ಐಪಿಎಲ್​ಗೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net