

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ವಿಭಿನ್ನ ಕೇಶ ವಿನ್ಯಾಶ ಮಾಡಿಸಿರುವುದು ಗೊತ್ತೇ ಇದೆ. ಆದರೆ, ಕಳೆದ ಒಂದು ದಿನಗಳಿಂದ ಅವರ ಹೊಸ ಅವತಾರ ಅಭಿಮಾನಿಗಳು ಸೇರಿದಂತೆ ಕ್ರೀಡಾ ಪ್ರೇಮಿಗಳ ತಲೆಗೆ ಹುಳ ಬಿಟ್ಟಿತ್ತು. 14ನೇ ಆವೃತ್ತಿಯ ಐಪಿಎಲ್ಗು ಮುನ್ನ ಕೇಶಮುಂಡನ ಮಾಡಿಸಿಕೊಂಡಿರುವ ಸನ್ಯಾಸಿ ಅವತಾರದಲ್ಲಿ ಧೋನಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹ ವೈರಲ್ ಆಗಿತ್ತು. ಇದೀಗ ಅದೇ ಫೋಟೋ ಕುರಿತು ಸಾಕಷ್ಟು ಟ್ರೋಲ್ಗಳು ಹರಿದು ಬರುತ್ತಿದೆ.
ಅನೇಕ ಮೀಮ್ಸ್ಗಳನ್ನು ಹರಿಬಿಡುತ್ತಿರುವ ನೆಟ್ಟಿಗರು ಧೋನಿ ಹೊಸ ಅವತಾರದ ಬಗ್ಗೆ ಹಾಸ್ಯ ಚಟಾಕಿ ಹಾರಿಸುತ್ತಿದ್ದು, ಕೆಲವೊಂದು ಮೀಮ್ಸ್ಗಳ ಝಲಕ್ ಈ ಕೆಳಕಂಡಂತಿದೆ.
ಹೊಸ ಅವತಾರದ ಅಸಲಿ ಕತೆ ಏನು?
ಐಪಿಎಲ್ ಜಾಹೀರಾತಿನ ಸಣ್ಣ ಝಲಕ್ ಮಾತ್ರ ಬಿಟ್ಟುಕೊಟ್ಟಿರುವ ಸ್ಟಾರ್ ಸ್ಪೋರ್ಟ್ಸ್, ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಧೋನಿ ಮೈದಾನದಲ್ಲಿ ಪ್ರದರ್ಶಿಸುವ ಶಾಂತಚಿತ್ತದ ಪ್ರತಿಬಿಂಬ ಇದಾಗಿದೆ ಎಂದೂ ಅಭಿಮಾನಿಗಳು ವಿಶ್ಲೇಷಿಸುತ್ತಿದ್ದಾರೆ. ‘ಮಾರ್ಷಲ್ ಆರ್ಟ್ಸ್ ತರಬೇತಿ ಶಿಬಿರ’ ಎಂದೂ ಸ್ಟಾರ್ ಸ್ಪೋರ್ಟ್ಸ್ ಈ ಚಿತ್ರದ ಬಗ್ಗೆ ಸಣ್ಣ ಮಾಹಿತಿಯನ್ನೂ ಬಿಟ್ಟುಕೊಟ್ಟಿತ್ತು. ಇದರ ಬೆನ್ನಲ್ಲೇ ಐಪಿಎಲ್ ಜಾಹೀರಾತಿನ ವಿಡಿಯೋವನ್ನೂ ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದೆ.
ಧೋನಿ ಸದ್ಯ ಚೆನ್ನೈನಲ್ಲಿ ಸಿಎಸ್‌ಕೆ ತಂಡದ ತರಬೇತಿ ಶಿಬಿರದಲ್ಲಿದ್ದು, ಈ ಬಾರಿ ತಂಡವನ್ನು ಮರಳಿ ಲಯಕ್ಕೆ ತರುವ ಹಂಬಲದಲ್ಲಿದ್ದಾರೆ. 2020ರಲ್ಲಿ ಸಿಎಸ್‌ಕೆ ತಂಡ ಟೂರ್ನಿ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿತ್ತು. (ಏಜೆನ್ಸೀಸ್)