ರುತುರಾಜ್ ಕ್ಯಾಪ್ಟನ್ಸಿಯಲ್ಲಿ ಧೋನಿ! ಈ ಕ್ರಮಾಂಕದಲ್ಲಿ ತಂಡದ ಪರ ಬ್ಯಾಟ್ ಬೀಸಲಿದ್ದಾರೆ 'ಕ್ಯಾಪ್ಟನ್ ಕೂಲ್'​ | MS Dhoni

ವಿಜಯವಾಣಿ - 2025-01-16T174138.633
Published on

MS Dhoni: ಇದೇ ಮಾರ್ಚ್​ 21ರಿಂದ ಐಪಿಎಲ್ 2025ರ 18ನೇ ಆವೃತ್ತಿ ಆರಂಭವಾಗಲಿದ್ದು, ಮೇ 23ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಇಂಡಿಯನ್ ಪ್ರೀಮಿಯರ್​ ಲೀಗ್ ಶುರುವಿನ ಮುನ್ಸೂಚನೆ ಸಿಕ್ಕಿದ್ದೇ ತಡ ಕ್ರಿಕೆಟ್ ಪ್ರೇಮಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ತಮ್ಮ ನೆಚ್ಚಿನ ತಂಡವನ್ನು ಮೈದಾನದಲ್ಲಿ ಹುರಿದುಂಬಿಸಲು ತೀವ್ರ ಕಾತರ ವ್ಯಕ್ತಪಡಿಸುತ್ತಿರುವ ಫ್ರಾಂಚೈಸಿಯ ಅಭಿಮಾನಿಗಳಿಗೆ ಇನ್ನು ಕೆಲವೇ ತಿಂಗಳು ಮಾತ್ರ ಈ ಕಾತರ, ಕಾಯುವಿಕೆ.

ಕಮ್​ಬ್ಯಾಕ್​

ಕಳೆದ ವರ್ಷ ನವೆಂಬರ್​ನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯುವ ಹಾಗೂ ಸ್ಟಾರ್ ಆಟಗಾರರನ್ನೇ ಆಯ್ಕೆ ಮಾಡಿಕೊಂಡ 10 ಬಲಿಷ್ಠ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಉತ್ತಮ ಬಿಡ್ಡಿಂಗ್ ಮಾಡಿದ ತಂಡಗಳಾಗಿ ಹೊರಹೊಮ್ಮಿತು. ಇದು ಕ್ರಿಕೆಟ್ ಪ್ರಿಯರ ಗಮನವನ್ನು ಸೆಳೆಯಿತು. ಸದ್ಯ ಪ್ರೇಕ್ಷಕರ ಚಿತ್ತ ಈಗ ಐದು ಬಾರಿ ಐಪಿಎಲ್ ಚಾಂಪಿಯನ್ಸ್​ಗಳಾಗಿ ಮೆರೆದ ಸಿಎಸ್​ಕೆ ಮೇಲಿದೆ. ಇದಕ್ಕೆ ಕಾರಣ, ಕ್ರಿಕೆಟ್ ದಿಗ್ಗಜ, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಕಮ್​ಬ್ಯಾಕ್​.

ಯಾವ ಕ್ರಮಾಂಕ

ಡೇವಾನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಶಿವಂ ದುಬೆ, ರಾಹುಲ್ ತ್ರಿಪಾಠಿ, ಸ್ಯಾಮ್ ಕರನ್, ರಚಿನ್ ರವೀಂದ್ರ, ವಿಜಯ್ ಶಂಕರ್​, ದೀಪಕ್ ಹೂಡಾ ಸೇರಿದಂತೆ ಮುಂತಾದ ಸ್ಟಾರ್ ಆಲ್​ರೌಂಡ್​ ಆಟಗಾರರೇ ಈ ಬಾರಿ ಸಿಎಸ್​ಕೆ ತಂಡವನ್ನು ಸೇರಿದ್ದಾರೆ. ಇದೆಲ್ಲವೂ ಈಗ ಟೀಮ್​ನ ಉತ್ಸಾಹವನ್ನು ಹೆಚ್ಚಿಸಿದೆ. 6ನೇ ಬಾರಿಗೆ ಐಪಿಎಲ್ ಪಟ್ಟಕ್ಕೇರುವ ಕನಸು ಹೊತ್ತಿರುವ ಚೆನ್ನೈ ಸೂಪರ್ ಕಿಂಗ್ಸ್​ ಪಡೆಗೆ 'ಕ್ಯಾಪ್ಟನ್ ಕೂಲ್'​ ಅವರ ಎಂಟ್ರಿಯೇ ಸಖತ್ ಖುಷಿ ಕೊಟ್ಟಿದೆ. ಅಖಾಡಕ್ಕಿಳಿಯುವ ಧೋನಿಗೆ ಈಗಾಗಲೇ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕು ಎಂಬ ವಿಷಯವನ್ನು ಕೂಡ ತಿಳಿಸಲಾಗಿದೆ ಎಂದು ವರದಿಯೊಂದು ಉಲ್ಲೇಖಿಸಿದೆ.

7 ಅಥವಾ 8

ಎಂದಿನಂತೆ ಸಿಎಸ್​ಕೆ ಪರ ಓಪನಿಂಗ್​ ಆಡುವ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್​ಗೆ ಈ ಆವೃತ್ತಿಯಲ್ಲಿ ಡೇವಾನ್ ಕಾನ್ವೇ ಜತೆಯಾಗಲಿದ್ದಾರೆ. ಕಾನ್ವೇ ಮತ್ತು ಗಾಯಕ್ವಾಡ್​ ಇಬ್ಬರ ಸ್ಫೋಟಕ ಬ್ಯಾಟಿಂಗ್ ಆರಂಭಿಕ ಹಂತದಲ್ಲೇ ಸಿಎಸ್​ಕೆಗೆ ಹೆಚ್ಚುವರಿ ರನ್​ ತಂದುಕೊಡುವ ನಿರೀಕ್ಷೆಯಿವೆ. ಇದೇ ನಂಬಿಕೆಯಿಂದ ಇವರಿಬ್ಬರ ಜೋಡಿಯನ್ನೇ ಓಪನಿಂಗ್ ಬ್ಯಾಟರ್ಸ್​ ಆಗಿ ಕಣಕ್ಕಿಳಿಸಲು ಮ್ಯಾನೇಜ್​ಮೆಂಟ್ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು 43ನೇ ವಯಸ್ಸಿನಲ್ಲೂ ಯುವ ಕ್ರಿಕೆಟಿಗರೊಡನೆ ಮೈದಾನಕ್ಕಿಳಿಯುತ್ತಿರುವ ಮಹೇಂದ್ರ ಸಿಂಗ್ ಧೋನಿ,  ಯುವ ಆಟಗಾರರಿಗೆ ಟಕ್ಕರ್ ಕೊಡುವಂತ ಪ್ರದರ್ಶನ ತೋರಲು ಸಜ್ಜಾಗಿದ್ದಾರೆ. ಸಂಪೂರ್ಣವಾಗಿ ಫಿಟ್ ಅಂಡ್ ಫೈನ್ ಆಗಿರುವ ಧೋನಿ, 7 ಅಥವಾ 8ನೇ ಕ್ರಮಾಂಕದಲ್ಲಿ ಬರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ಹರಾಜಿನಲ್ಲಿ CSK ಖರೀದಿಸಿದ ಪ್ಲೇಯರ್ಸ್ ಪಟ್ಟಿ​

1. ಡೆವೊನ್ ಕಾನ್ವೇ – 6.25 ಕೋಟಿ ರೂ.

2. ರಾಹುಲ್ ತ್ರಿಪಾಠಿ – 3.4 ಕೋಟಿ ರೂ.

3. ರಚಿನ್ ರವೀಂದ್ರ – 4 ಕೋಟಿ ರೂ.

4. ರವಿಚಂದ್ರನ್ ಅಶ್ವಿನ್ – 9.75 ಕೋಟಿ ರೂ.

5. ಖಲೀಲ್ ಅಹಮದ್ – 4.80 ಕೋಟಿ ರೂ.

6. ನೂರ್ ಅಹಮದ್ – 10 ಕೋಟಿ ರೂ.

7. ಸ್ಯಾಮ್ ಕರನ್​ – 2.40 ಕೋಟಿ ರೂ.

8. ವಿಜಯ್ ಶಂಕರ್ – 1.2 ಕೋಟಿ ರೂ.

9. ಶೇಕ್ ರಶೀದ್ – 30 ಲಕ್ಷ ರೂ.

10. ಅಂಶುಲ್ ಕಾಂಬೋಜ್ – 3.4 ಕೋಟಿ ರೂ.

11. ಮುಖೇಶ್ ಚೌಧರಿ – 30 ಲಕ್ಷ ರೂ.

12. ದೀಪಕ್ ಹೂಡಾ – 1.7 ಕೋಟಿ ರೂ.

13. ಗುರ್ಜಪ್ನೀತ್ ಸಿಂಗ್ – 2.2 ಕೋಟಿ ರೂ.

14. ನಾಥನ್ ಎಲ್ಲಿಸ್ – 2 ಕೋಟಿ ರೂ.

15. ಜೇಮಿ ಓವರ್ಟನ್ – 1.5 ಕೋಟಿ ರೂ.

16. ಕಮಲೇಶ್ ನಾಗರಕೋಟಿ – 30 ಲಕ್ಷ ರೂ.

17. ರಾಮಕೃಷ್ಣ ಘೋಷ್ – 30 ಲಕ್ಷ ರೂ.

18. ಶ್ರೇಯಸ್ ಗೋಪಾಲ್ – 30 ಲಕ್ಷ ರೂ.

19. ವಂಶ್ ಬೇಡಿ – 55 ಲಕ್ಷ ರೂ.

20. ಅಂದ್ರೆ ಸಿದ್ದಾರ್ಥ್ – 30 ಲಕ್ಷ ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net