41ನೇ ವರ್ಷಕ್ಕೆ ಕಾಲಿಟ್ಟ ಧೋನಿ: ಹುಟ್ಟುಹಬ್ಬದ ಸಂಭ್ರಮಾಚರಣೆಯ ವಿಡಿಯೋ ಹಂಚಿಕೊಂಡ ಪತ್ನಿ ಸಾಕ್ಷಿ

Dhoni
Published on

ಲಂಡನ್​​: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು 41ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ವಿಡಿಯೋವನ್ನು ಶೇರ್​ ಮಾಡುವ ಮೂಲಕ ಪತ್ನಿ ಸಾಕ್ಷಿ ಅವರು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

ಕ್ಯಾಪ್ಟನ್​ ಕೂಲ್​ ಎಂದೇ ಖ್ಯಾತಿಯಾಗಿರುವ ಧೋನಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಸರಳ ಸ್ವಭಾವದಿಂದಲೂ ಆಗ್ಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ವಿಶ್ವದ ಶ್ರೀಮಂತ ಕ್ರಿಕೆಟಿಗರ ಪೈಕಿ ಧೋನಿ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಇತ್ತೀಚೆಗೆ ನಾಟಿವೈದ್ಯರಿಂದ ಮಂಡಿನೋವಿಗೆ ಚಿಕಿತ್ಸೆ ಪಡೆಯುವ ಮೂಲಕ ತಮ್ಮ ಸರಳತೆಯನ್ನು ಪ್ರದರ್ಶಿಸಿದ್ದರು.

ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಧೋನಿಗೆ ಕ್ರಿಕೆಟಿಗರು, ಬಾಲಿವುಡ್​​ ಕಲಾವಿದರು ಹಾಗೂ ರಾಜಕೀಯ ಗಣ್ಯರು ಶುಭೋರಿಕೋರಿದ್ದಾರೆ.ಸದ್ಯ ಲಂಡನ್​ ಪ್ರವಾಸದಲ್ಲಿರುವ ಧೋನಿ ಕುಟುಂಬ ಅಲ್ಲೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ವಿಕೆಟ್​ ಕೀಪರ್​ ರಿಷಬ್​ ಪಂತ್​ ಕೂಡ ಪಾಲ್ಗೊಂಡಿದ್ದರು. ಧೋನಿ ಕೇಕ್​ ಕತ್ತರಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಬಾಲಿವುಡ್ ನಟ ರಣವೀರ್​ ಸಿಂಗ್ ಪ್ರತಿಕ್ರಿಯಿಸಿದ್ದು, ಧೋನಿ ಅವರಿಗೆ ಹುಟ್ಟುಹಬ್ಬದ ಶುಭಕೋರಿ.. ಲವ್​ ಯು ಮಾಹಿ, ನಿಮ್ಮ ಎನರ್ಜಿಗೆ ನನಗೆ ಸದಾ ಪ್ರೇರಣೆಯಾಗಿದೆ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net