ಎಂಎಸ್ ಧೋನಿ ಹೊಸ ಹೇರ್‌ಸ್ಟೈಲ್‌ಗೆ ಅಭಿಮಾನಿಗಳು ಫಿದಾ

ms dhoni for web
Published on

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿ ವಿಶಿಷ್ಠ ಹೇರ್‌ಸ್ಟೈಲ್‌ನಿಂದ ಗಮನಸೆಳೆದಿದ್ದರು. ಹೇರ್‌ಸ್ಟೈಲ್ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಧೋನಿ, ಇಂದಿಗೂ ಅದೇ ಕ್ರೇಜ್ ಉಳಿಸಿಕೊಂಡಿದ್ದಾರೆ. ಇದೀಗ ಧೋನಿ ಕೇಶ ಶೈಲಿ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಹೇರ್‌ಸ್ಟೈಲ್ ಜತೆಗೆ ಗಡ್ಡದ ವಿನ್ಯಾಸದಿಂದಲೂ ಧೋನಿ ಗಮನಸೆಳೆದಿದ್ದಾರೆ. ಸೆಲೆಬ್ರಿಟಿಗಳ ಸ್ಟೈಲಿಸ್ಟ್ ಆಲೀಮ್ ಹಕೀಮ್, ಧೋನಿ ಅವರ ನೂತನ ಶೈಲಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಧೋನಿ ಅವರ ಹೊಸ ಡ್ಯಾಷಿಂಗ್ ಲುಕ್‌ಗೆ ಮಾರು ಹೋದವರೇ ಇಲ್ಲ. ಕ್ರಿಕೆಟ್ ದಿಗ್ಗಜನ ಹೊಸ ಹೇರ್‌ಸ್ಟೈಲ್ ಅನ್ನು ಹಕೀಮ್ ಪ್ರಕಟಿಸಿದ್ದೆ ತಡ ಸಾವಿರಾರು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಮಹಿ ಬಾಯ್ ಈ ವಿನ್ಯಾಸದಲ್ಲಿ ಐದು ವರ್ಷ ಚಿಕ್ಕವರಾಗಿ ಕಾಣುತ್ತಾರೆ. ಧೋನಿ ನಿಮ್ಮ ಹೊಸ ಸ್ಟೈಲ್ ಸಖತ್ ಲುಕ್ ಆಗಿದೆ. ಮತ್ತೋರ್ವ ಅಭಿಮಾನಿ ಮೆಸ್ಸಿ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ. ಹಿಂದೆಯೂ ಉದ್ದ ಕೂದಲು ಬಿಡುವ ಮೂಲಕ ಧೋನಿ ಹೆಸರಾಗಿದ್ದರು.

ಸದ್ಯ ಬಿಡುವಿನಲ್ಲಿರುವ ಧೋನಿ, ಮುಂಬರುವ 14ನೇ ಐಪಿಎಲ್‌ನ 2ನೇ ಭಾಗಕ್ಕೆ ಸಜ್ಜಾಗುತ್ತಿದ್ದಾರೆ. ಸೆಪ್ಟೆಂಬರ್ 19 ರಿಂದ ಐಪಿಎಲ್ ಯುಎಇಯಲ್ಲಿ ಆರಂಭಗೊಳ್ಳಲಿದ್ದು, ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ ಪಂದ್ಯಗಳು ನಡೆಯಲಿವೆ. ಐಪಿಎಲ್ ಭಾಗ-2ರಲ್ಲಿ 31 ಪಂದ್ಯಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net