VIDEO: ಪಾರ್ಟಿಯೊಂದರಲ್ಲಿ ಹೆಜ್ಜೆ ಹಾಕಿದ ಧೋನಿ; ಸಾಥ್​​ ನೀಡಿದ ಹಾರ್ದಿಕ್ ಪಾಂಡ್ಯಾ

MS Dhoni
Published on

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯಾ ಪಾರ್ಟಿಯೊಂದರಲ್ಲಿ ಒಟ್ಟಿಗೆ ಕುಣಿದು ಎಂಜಾಯ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ನಂತರ ಧೋನಿ, ಐಪಿಎಲ್ ಹೊರತುಪಡಿಸಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕ್ರಿಕೆಟ್​ನಿಂದ ದೂರವಿದ್ದು, ತಮ್ಮ ಉದ್ಯಮ, ಹವ್ಯಾಸ ಹಾಗೂ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಸದ್ಯ ದುಬೈ ಪ್ರವಾಸ ಕೈಗೊಂಡಿರುವ ಧೋನಿ ಖಾಸಗಿ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇದೇ ಪಾರ್ಟಿಯಲ್ಲಿ ಹಾರ್ದಿಕ್ ಪಾಂಡ್ಯಾ ಕೂಡಾ ಭಾಗವಹಿಸಿದ್ದರು.

ಟಿ-20 ವಿಶ್ವಕಪ್​ನ ನಂತರ ನಡೆದ ನ್ಯೂಜಿಲೆಂಡ್​ ವಿರುದ್ಧದ ಟಿ-20 ಸರಣಿಯನ್ನು ನಾಯಕನಾಗಿ ಹಾರ್ದಿಕ್ ಪಾಂಡ್ಯಾ ಮುನ್ನಡೆಸಿದ್ದರು. ಈ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತ್ತು. ಟಿ-20 ಸರಣಿ ಮುಗಿಯುತ್ತಿದ್ದಂತೆ ಪಾಂಡ್ಯಾ ಇದೀಗ ದುಬೈಗೆ ಪ್ರವಾಸ ಹೋಗಿದ್ದಾರೆ.

ಇದೀಗ ಈ ವೈರಲ್ ಆಗಿರುವ ವಿಡಿಯೋದಲ್ಲಿ ಬರ್ಥ್​​​ಡೇ ಪಾರ್ಟಿಯೊಂದರಲ್ಲಿ ಧೋನಿ ಹಾಗೂ ಹಾರ್ದಿಕ್ ಪಾಂಡ್ಯಾ, ರ‍್ಯಾಪರ್ ಗಾಲಾ ಅವರ ಹಾಡಿಗೆ ಒಟ್ಟಾಗಿ ಹೆಜ್ಜೆ ಹಾಕಿದ್ದಾರೆ. ಧೋನಿ ಜತೆಗೆ ಪತ್ನಿ ಸಾಕ್ಷಿ ಕೂಡ ಹೆಜ್ಜೆ ಹಾಕಿದ್ದಾರೆ. ಕ್ರಿಕೆಟಿಗರಾದ ಕೃನಾಲ್ ಪಾಂಡ್ಯಾ ಹಾಗೂ ಇಶಾನ್ ಕಿಶನ್ ಕೂಡಾ ಈ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ.spor

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net