

ಮುಂಬೈ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ "ಮಿ. ಬೀಸ್ಟ್' ಎಂದೇ ಜನಪ್ರಿಯವಾಗಿರುವ ಯುಟ್ಯೂಬರ್ ಜಿಮ್ಮಿ ಡೊನಾಲ್ಡ್ಸನ್ ಜತೆಗಿನ ಬೇಸ್ಬಾಲ್ ಚಾಲೆಂಜ್ನಲ್ಲಿ 95 ಲಕ್ಷ ರೂ. (1 ಲಕ್ಷ ಡಾಲರ್) ಬಹುಮಾನ ಗೆದ್ದುಕೊಂಡಿದ್ದಾರೆ.
ಫುಟ್ಬಾಲ್ ತಾರೆ ಎರ್ಲಿಂಗ್ ಹಾಲೆಂಡ್ ಮತ್ತು ಬಾಸ್ಕೆಟ್ಬಾಲ್ ದಿಗ್ಗಜ ಲೆಬ್ರೋನ್ ಜೇಮ್ಸ್ ಕೂಡ ಈ ಚಾಲೆಂಜ್ನಲ್ಲಿ ಪಾಲ್ಗೊಂಡಿದ್ದರು. ಈ ಚಾಲೆಂಜ್ ಅನ್ವಯ 3 ಚೆಂಡುಗಳನ್ನು ಮೈದಾನದ ಹೊರಗೆ ಬಾರಿಸಬೇಕಾಗಿತ್ತು.
ಹಿಂದೆಂದೂ ಬೇಸ್ಬಾಲ್ ಆಟವನ್ನೇ ಆಡಿರದ ಹಾರ್ದಿಕ್ ಈ ಆಟದಲ್ಲಿ ವಿಜೇತರಾಗಿ ಹೊರಹೊಮ್ಮಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಗೆದ್ದ ಬಹುಮಾನ ಮೊತ್ತವನ್ನು ಭಾರತದ ಎನ್ಜಿಎ ಒಂದಕ್ಕೆ ದತ್ತಿನಿಧಿಯಾಗಿ ನೀಡಲು ನಿರ್ಧರಿಸಿದ್ದಾರೆ.