

ಬೆಂಗಳೂರು: ಐಪಿಎಲ್ ತಾರೆ ಅಭಿನವ್ ಮನೋಹರ್ (76* ರನ್, 34 ಎಸೆತ, 2 ಬೌಂಡರಿ, 9 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಶಿವಮೊಗ್ಗ ಲಯನ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಎದುರು ಬೌಂಡರಿ-ಸಿಕ್ಸರ್‌ಗಳ ಮಳೆ ಹರಿಸಿ 6 ವಿಕೆಟ್‌ಗೆ ಭರ್ಜರಿ ಗೆಲುವು ದಾಖಲಿಸಿದೆ.
ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಗುಲ್ಬರ್ಗಾ, ನಾಯಕ ದೇವದತ್ ಪಡಿಕ್ಕಲ್ (50 ರನ್, 35 ರನ್, 8 ಬೌಂಡರಿ, 1 ಸಿಕ್ಸರ್) ಹಾಗೂ ಆರ್.ಸ್ಮರಣ್ (63 ರನ್, 30 ಎಸೆತ, 1 ಬೌಂಡರಿ, 7 ಸಿಕ್ಸರ್) ಅವಳಿ ಅರ್ಧಶತಕಗಳ ನೆರವಿನಿಂದ 5 ವಿಕೆಟ್‌ಗೆ 206 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಅಭಿನವ್ ಮನೋಹರ್ ಹಾಗೋ ರೋಹನ್ ನವೀನ್ (36 ರನ್, 14 ಎಸೆತ, 3 ಬೌಂಡರಿ, 3 ಸಿಕ್ಸರ್)ಬಿರುಸಿನಾಟದ ಬಲದಿಂದ ಶಿವಮೊಗ್ಗ ಲಯನ್ಸ್, 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 207 ರನ್‌ಗಳಿಸಿ ಜಯದ ಕೇಕೆ ಹಾಕಿತು. ಅಂತಿಮ 4 ಓವರ್‌ನಲ್ಲಿ 57 ರನ್ ಕಸಿದ ಲಯನ್ಸ್ ಹಾಲಿ ಋತುವಿನಲ್ಲಿ ಯಶಸ್ವಿಯಾಗಿ ಗರಿಷ್ಠ ರನ್ ಚೇಸಿಂಗ್ ನಡೆಸಿದ ತಂಡ ಎನಿಸಿತು.
ಗುಲ್ಬರ್ಗಾ ಮಿಸ್ಟಿಕ್ಸ್: 5 ವಿಕೆಟ್‌ಗೆ 206 (ಲವನೀತ್ 0, ಪಡಿಕ್ಕಲ್ 50, ಸೌರಭ್ 15, ಆರ್.ಸ್ಮರಣ್ 63, ವೈಶಾಕ್ 38, ಪ್ರವೀಣ್ 24*, ಪೃಥ್ವಿರಾಜ್ 1*, ಡಿ.ಅಶೋಕ್ 24ಕ್ಕೆ 2).
ಶಿವಮೊಗ್ಗ ಲಯನ್ಸ್: 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 207 (ಧೀರಜ್ 18, ನಿಹಾಲ್ 32, ಭರತ್ 14, ಅಭಿನವ್ 76*, ಹಾರ್ದಿಕ್ 17, ರೋಹನ್ ನವೀನ್ 36*, ವೈಶಾಕ್ 32ಕ್ಕೆ1).