ಅಮ್ಮನ ಸೂಚನೆಯಂತೆ ರಾಜ್​ಕೋಟ್​ ಟೆಸ್ಟ್​ನಲ್ಲಿ ಮರಳಿ ಕಣಕ್ಕಿಳಿದಿದ್ದ ಅಶ್ವಿನ್​!

ash mother web
Published on

ಧರ್ಮಶಾಲಾ: ಆರ್​. ಅಶ್ವಿನ್​ ರಾಜ್​ಕೋಟ್​ ಟೆಸ್ಟ್​ನ 2ನೇ ದಿನದಾಟದಲ್ಲಿ ಭಾರತ ಪರ 500 ವಿಕೆಟ್​ ಕಬಳಿಸಿದ 2ನೇ ಬೌಲರ್​ ಎನಿಸಿದ ಬೆನ್ನಲ್ಲೇ, ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅಮ್ಮನನ್ನು ನೋಡಲು ಚೆನ್ನೈಗೆ ಪ್ರಯಾಣಿಸಿದ್ದರು. ಬಳಿಕ ಮರಳಿ ಬಂದು 4ನೇ ದಿನದಾಟದಲ್ಲಿ ಮತ್ತೆ ಕಣಕ್ಕಿಳಿದು ಬೌಲಿಂಗ್​ ಮಾಡಲು ಅವರ ಅಮ್ಮ ಚಿತ್ರಾ ರವಿಚಂದ್ರನ್​ ಸೂಚನೆಯೇ ಕಾರಣವಂತೆ!

ಐಸಿಯುನಲ್ಲಿದ್ದ ಅಮ್ಮ, ಅಶ್ವಿನ್​ರನ್ನು ನೋಡಿ ಮೊದಲಗೆ ಕೇಳಿದ ಪ್ರಶ್ನೆ, "ನೀನೇಕೆ ಇಲ್ಲಿಗೆ ಬಂದೆ?'. ಟೆಸ್ಟ್​ ಪಂದ್ಯ ನಡೆಯುತ್ತಿದೆಯಲ್ಲ, ನೀನು ಮತ್ತೆ ಅಲ್ಲಿಗೆ ಹೋಗು ಎಂದವರು ಸೂಚಿಸಿದರು ಎಂದು ಅಶ್ವಿನ್​, 100ನೇ ಟೆಸ್ಟ್​ ಪಂದ್ಯದ ಸಂಭ್ರಮದ ನಡುವೆ ತಿಳಿಸಿದ್ದಾರೆ.

ನಾನೀಗ ನನ್ನ ತಂದೆಯ ಕನಸಿನಂತೆ ಕ್ರಿಕೆಟ್​ ಆಡುತ್ತಿದ್ದೇನೆ. ಅವರೂ ಕ್ರಿಕೆಟಿಗನಾಗಲು ಬಯಸಿದ್ದರು. ಮದುವೆಯಾದ ಬಳಿಕ ಅವರಿಗೆ ಕುಟುಂಬದ ಜವಾಬ್ದಾರಿ ಬಂದಿತು. ಆಗ ಹುಟ್ಟಿದ ಮಗನಿಂದ ತನ್ನ ಕ್ರಿಕೆಟ್​ ಕನಸು ನನಸಾಗಿಸಲು ಪ್ರಯತ್ನಿಸಿದರು. ನಾನು ಕ್ರಿಕೆಟ್​ನತ್ತ ಹೆಚ್ಚಿನ ಗಮನಹರಿಸಲು ನೆರವಾಗುವ ಸಲುವಾಗಿ ನನ್ನ ಶಿಕ್ಷಣದ ವಿಷಯದಲ್ಲೂ ಸಾಕಷ್ಟು ನೆರವು ನೀಡಿದ್ದಾರೆ. ನನ್ನ ಸಹಪಾಠಿಗಳಿಂದ ಅವರೇ ನೋಟ್ಸ್​ ತಂದುಕೊಡುತ್ತಿದ್ದರು ಎಂದು ಅಶ್ವಿನ್​ ಹೇಳಿದ್ದಾರೆ. ಅವರ ತಂದೆ ರವಿಚಂದ್ರನ್​ ಕ್ಲಬ್​ ಕ್ರಿಕೆಟಿಗರಾಗಿದ್ದರು. ಕ್ರಿಕೆಟ್​ ನೋಡುವುದನ್ನು ಅಪಾರವಾಗಿ ಇಷ್ಟಪಡುವ ಅವರು ಈಗಲೂ ತಮಿಳುನಾಡು ಕ್ರಿಕೆಟ್​ ಸಂಸ್ಥೆಯ ಮೊದಲ ಡಿವಿಷನ್​ ಲೀಗ್​ ಪಂದ್ಯಗಳಿಗೂ ಹಾಜರಾಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net