ಬೆತ್ತಲೆಯಾಗಿರುವ ಫೋಟೋವನ್ನು ಪೋಸ್ಟ್​ ಮಾಡಿ, ಟ್ರೋಲ್​ ಆದ ಕ್ರಿಕೆಟರ್​ ಮೊಹಮ್ಮದ್​ ಶಮಿ ಪತ್ನಿ...

Cricketr
Published on

ಮುಂಬೈ: ಭಾರತ ಕ್ರಿಕೆಟ್​ ಟೀಂನ ವೇಗದ ಬೌಲರ್​ ಮೊಹಮ್ಮದ್​ ಶಮಿ ಮತ್ತವರ ಪತ್ನಿ ನಡುವೆ ಸಂಬಂಧ ಚೆನ್ನಾಗಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಅವರ ಸಂಸಾರದ ಜಗಳ 2018ರಲ್ಲೇ ಬೀದಿಗೆ ಬಂದಿದೆ.

ಮಾಜಿ ರೂಪದರ್ಶಿ, ಡ್ಯಾನ್ಸರ್​ ಆಗಿರುವ ಹಸೀನ್​​ ಜಹಾನ್​ ಹಾಗೂ ಮೊಹಮ್ಮದ್​ ಶಮಿ ಪ್ರೀತಿಸಿ 2014ರಲ್ಲಿ ಮದುವೆಯಾಗಿದ್ದರು. 2015ರಲ್ಲಿ ಈ ಜೋಡಿಗೆ ಒಂದು ಮುದ್ದಾದ ಹೆಣ್ಣುಮಗುವೂ ಹುಟ್ಟಿದೆ. 2018ರಲ್ಲಿ ಪತಿ ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿರುವ ಹಸೀನ್​ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಶಮಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ. ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ, ಕೊಲೆ ಯತ್ನ, ಮ್ಯಾಚ್​ಫಿಕ್ಸಿಂಗ್​ ಮಾಡಿದ್ದಾರೆ ಎಂದೂ ಹೇಳಿದ್ದರು. ಹಾಗೇ ಶಮಿ ಬೇರೆ ಕೆಲವು ಹುಡುಗಿಯರೊಂದಿಗೆ ನಡೆಸಿದ್ದಾರೆ ಎನ್ನಲಾದ ವಾಟ್ಸ್​ಆ್ಯಪ್​ ಚಾಟ್​ಗಳ ಸ್ಕ್ರೀನ್​ಶಾಟ್​ಗಳನ್ನೂ ಹಸೀನ್ ಜಹಾನ್ ಬಹಿರಂಗಪಡಿಸಿದ್ದರು.

ಈಗ ಮತ್ತೆ ಇವರಿಬ್ಬರ ವಿಚಾರ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಶಮಿ ಪತ್ನಿ ಹಸೀನ್​​. ತಮ್ಮ ಇನ್ಸ್ಟಾಗ್ರಾಂನಲ್ಲಿ ಪತಿಯೊಂದಿಗೆ ತಾವು ಬೆತ್ತಲೆಯಾಗಿರುವ ಫೋಟೋ ಪೋಸ್ಟ್​ ಮಾಡಿಕೊಂಡಿರುವ ಅವರು, 'ನೀನೇನೂ ಆಗಿರದ ಕಾಲದಲ್ಲಿ ನಾನು ಪರಿಶುದ್ಧವಾಗಿ, ಪವಿತ್ರಳಾಗಿದ್ದೆ. ಈಗ ನೀನು ಏನೋ ಒಂದು ಸ್ಥಾನದಲ್ಲಿದ್ದೀಯಾ. ಹಾಗಾಗಿ ನಾನು ಅಪವಿತ್ರಳೆನಿಸಿಕೊಂಡೆ. ಸುಳ್ಳಿನ ಒಂದು ಹನಿಗೆ ಸತ್ಯವನ್ನೆಂದೂ ಮರೆಮಾಡಲು ಸಾಧ್ಯವಿಲ್ಲ' ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಹಾಗೇ, ಚಿತ್ರದಲ್ಲಿ ಕ್ರಿಕೆಟರ್​ ಮೊಹಮ್ಮದ್​ ಶಮಿ ಅವರೊಂದಿಗೆ ಇರುವ ರೂಪದರ್ಶಿ ಹಸೀನ್ ಜಹಾನ್​ ಎಂದೂ ಬರೆದುಕೊಂಡಿದ್ದಾರೆ.

ಈ ಫೋಟೋ ಇಂಟರ್​ನೆಟ್​ನಲ್ಲಿ ಸಂಚಲನ ಸೃಷ್ಟಿಸಿದೆ. ಹಸೀನ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಸಕ್ರಿಯರಾಗಿರುತ್ತಾರೆ. ಪತಿಯ ವಿರುದ್ಧ ಪೋಸ್ಟ್​ ಹಾಕುವ ಜತೆಗೆ, ತಮ್ಮದೇ ನೃತ್ಯದ ವಿಡಿಯೋಗಳು, ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ.

ಹಸೀನ್​ ಪೋಸ್ಟ್​ ಮಾಡಿರುವ ಫೋಟೋ ನೋಡುತ್ತಿದ್ದಂತೆ ಮೊಹಮ್ಮದ್​ ಶಮಿಯ ಅಭಿಮಾನಿಗಳು ಆಕೆಯನ್ನು ಸಿಕ್ಕಾಪಟೆ ಟ್ರೋಲ್​ ಮಾಡಲು ಶುರು ಮಾಡಿದ್ದಾರೆ. ಹಸೀನ್​ ಅವರು ಕ್ರಿಕೆಟರ್​​ ಶಮಿ ಅವರಿಗೆ ಕಳಂಕ ತರಲು ಏನೇನು ಪ್ರಯತ್ನ ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net