ಪಾಕ್ ಕ್ರಿಕೆಟ್​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್! ಸಾರ್ವಜನಿಕ ಸ್ಥಳಗಳಲ್ಲಿ ತುಟಿ ಬಿಚ್ಚುವಂತಿಲ್ಲ ಮೊಹಮ್ಮದ್ ರಿಜ್ವಾನ್ | Mohammad Rizwan

ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದ ಸೋಲಿನ ಬೆನ್ನಲ್ಲೇ ಈ ಇಬ್ಬರನ್ನು ಒಳಗೊಂಡಂತೆ ಒಟ್ಟು ಏಳು ಆಟಗಾರರನ್ನು ಪಿಸಿಬಿ ತವರಿಗೆ ವಾಪಸ್ ಕಳುಹಿಸಿತು. ಈಗ ನೋಡಿದ್ರೆ, ಪ್ರಕರಣದಲ್ಲಿ ಮೂವರಿಗೆ ಸಮನ್ಸ್ ಕೊಟ್ಟು, ರಿಜ್ವಾನ್​ ಮತ್ತು ಹಕ್​ ಬಳಿಯಿರುವ ಮೊಬೈಲ್ ಫೋನ್​ಗಳ ಲಾಕ್ ತೆರೆದು ಒಂದಷ್ಟು ವಿಷಯಗಳನ್ನು ಜಾಲಾಡಲಾಗಿದೆ.
Mohammad Rizwan
ಪಾಕ್ ಕ್ರಿಕೆಟ್​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್
Published on

ಇಸ್ಲಾಮಾಬಾದ್: ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಸೋಲುಂಡ ಪಾಕಿಸ್ತಾನ (Pakistan) ತಂಡದ ಕೆಲವು ಆಟಗಾರರು ಡ್ರೆಸ್ಸಿಂಗ್ ರೂಮ್​ನಲ್ಲಿ ಮಾಡಿಕೊಂಡ ಪ್ಲ್ಯಾನ್​ ಹಾಗೂ ಮಾಹಿತಿ ಸೋರಿಕೆ ವಿವಾದವು ಸದ್ಯ ಪಾಕ್​ ಕ್ರಿಕೆಟ್​ ಮಂಡಳಿಯೂ ಇಡೀ ಕ್ರಿಕೆಟ್​ ಲೋಕದ ಮುಂದೆ ತಲೆತಗ್ಗಿಸುವಂತಾಗಿದೆ. ಮತ್ತೊಂದೆಡೆ, ಸೈಬರ್​ ಕ್ರೈಂಗೆ ತಲುಪಿರುವ ಈ ಪ್ರಕರಣದಲ್ಲಿ ಸ್ಟಾರ್​ ಆಟಗಾರರ ಹೆಸರೇ ಸಿಲುಕಿಕೊಂಡಿದೆ. ಈ ಪೈಕಿ ಮೊಹಮ್ಮದ್​ ರಿಜ್ವಾನ್​ಗೆ ಭಾರಿ ಮುಖಭಂಗ ಉಂಟಾಗಿದೆ.   

ಕಳೆದ ಒಂದೆರೆಡು ವಾರದಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್​ ಕ್ರೈಂ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು,  ಆರಂಭದಲ್ಲಿ ತಂಡದ ಆಟಗಾರರಾದ ಇಮಾಮ್-ಉಲ್-ಹಕ್, ಮೊಹಮ್ಮದ್ ರಿಜ್ವಾನ್ ಮತ್ತು ಮತ್ತೊಬ್ಬ ಅನಾಮಧೇಯ ಕ್ರಿಕೆಟಿಗನಿಗೆ ಪಾಕಿಸ್ತಾನದ ರಾಷ್ಟ್ರೀಯ ಸೈಬರ್ ಕ್ರೈಂ ತನಿಖಾ ಸಂಸ್ಥೆ (NCCIA) ಸಮನ್ಸ್ ಜಾರಿ ಮಾಡಿತು. ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದ ಸೋಲಿನ ಬೆನ್ನಲ್ಲೇ ಈ ಇಬ್ಬರನ್ನು ಒಳಗೊಂಡಂತೆ ಒಟ್ಟು ಏಳು ಆಟಗಾರರನ್ನು ಪಿಸಿಬಿ ತವರಿಗೆ ವಾಪಸ್ ಕಳುಹಿಸಿತು. ಈಗ ನೋಡಿದ್ರೆ, ಪ್ರಕರಣದಲ್ಲಿ ಮೂವರಿಗೆ ಸಮನ್ಸ್ ಕೊಟ್ಟು, ರಿಜ್ವಾನ್​ ಮತ್ತು ಹಕ್​ ಬಳಿಯಿರುವ ಮೊಬೈಲ್ ಫೋನ್​ಗಳ ಲಾಕ್ ತೆರೆದು ಒಂದಷ್ಟು ವಿಷಯಗಳನ್ನು ಜಾಲಡಲಾಗಿದೆ.

ಸಂಭವನೀಯ ಭ್ರಷ್ಟಾಚಾರ ಮತ್ತು ಆನ್‌ಲೈನ್ ಜೂಜಾಟಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಸೈಬರ್ ಕ್ರೈಂ ತನಿಖಾ ಸಂಸ್ಥೆಯು (NCCIA) ನಡೆಸಿದ ಕ್ರಮದ ಭಾಗವಾಗಿ, ಸುಮಾರು ಎರಡು ಗಂಟೆಗಳ ಕಾಲ ಆಟಗಾರರನ್ನು ವಿಚಾರಣೆಗೆ ಒಳಪಡಿಸಿ, ಅವರ ಮೊಬೈಲ್ ಫೋನ್‌ಗಳನ್ನು ಪಿಸಿಬಿ (PCB) ಭದ್ರತಾ ತಂಡದಿಂದ ವಶಪಡಿಸಿಕೊಳ್ಳಲಾಗಿದೆ. ಜತೆಗೆ ಪ್ರಕರಣದ ಕುರಿತಾಗಿ ಸಾರ್ವಜನಿಕ ಸ್ಥಳಗಳಲ್ಲಿ ಯಾವ ಮಾಹಿತಿಯನ್ನೂ ಹಂಚಿಕೊಳ್ಳುವಂತಿಲ್ಲ ಮತ್ತು ಮಾಧ್ಯಮಗಳಿಗೆ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ ನೀಡುವಂತಿಲ್ಲ ಎಂದು ಕಟ್ಟೆಚ್ಚರಿಕೆ ನೀಡಲಾಗಿದೆ. 

ಇದನ್ನೂ ಓದಿ: ಸಾವಿನ ಬೆನ್ನಲ್ಲೇ ಮಾನವನ ದೇಹದಲ್ಲಿ ಏನೆಲ್ಲ ನಡೆಯುತ್ತೆ? ಮೊದಲ ನಿಮಿಷದಿಂದಲೇ ಅಚ್ಚರಿಯ ಬದಲಾವಣೆಗಳು ಶುರು..! Death Timeline

ಪಾಕಿಸ್ತಾನ ಮೂಲದ ಜಿಯೋ ನ್ಯೂಸ್​ (Geo News) ವರದಿ ಪ್ರಕಾರ, ಮೊಹಮ್ಮದ್ ರಿಜ್ವಾನ್​ಗೆ ಸಾರ್ವಜನಿಕ ಸ್ಥಳಗಳಲ್ಲಿ ತುಟಿ ಬಿಚ್ಚದಂತೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ, ಎರಡು ಬಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಮತ್ತು ಜನರಿಗೆ ಸ್ಪಷ್ಟನೆ ಕೊಡಬೇಕಿದೆ ಎಂದು ಸಲ್ಲಿಸಿದ ಮನವಿಯನ್ನು ಪಿಸಿಬಿ ತಿರಸ್ಕರಿಸಿದೆ.  ತನ್ನ ಮೇಲೆ ಬಂದಿರುವ ಅಪಾದನೆಯು ಶುದ್ಧ ಸುಳ್ಳು ಎಂದು ವಿವರಿಸಲು ಪಿಸಿಬಿ ತನಿಖೆಯು ಅನುಮತಿ ನೀಡಿದಿರುವುದು ಸದ್ಯ ಅಚ್ಚರಿಯ ಬೆಳವಣಿಗೆಯಾಗಿದೆ.

ಪತ್ರದ ಮೂಲಕ ಪ್ರಶ್ನೆ!

ಇಂತಹ ಪ್ರಕರಣದ ಬಗ್ಗೆ ಎನ್‌ಸಿಸಿಐಎ ಏಕೆ ವಿಚಾರಣೆ ಕೈಗೊಂಡಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನ ವಿರುದ್ಧದ ಆರೋಪಗಳ ಸಂಪೂರ್ಣ ವಿವರಗಳನ್ನು ನನಗೂ ಒದಗಿಸಬೇಕು. ಇದು ಪಾರದರ್ಶಕವಾಗಿ ನಡೆದರೆ ನಾನೂ ಸಹ ವಿಚಾರಣೆಗೆ ಸಹಕರಿಸಬಹುದು" ಎಂದು ರಿಜ್ವಾನ್ ಪತ್ರದಲ್ಲಿ ಬರೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net