

ಮ್ಯಾಂಚೆಸ್ಟರ್: ಕ್ರಿಕೆಟ್ನಲ್ಲಿ ವೇಗದ ಬೌಲರ್ಗಳಿಗೆ ಸ್ವಿಂಗ್ ಎಸೆತಗಳ ಮೂಲಕ ಬ್ಯಾಟ್ಸ್ಮನ್ಗಳ ಮೇಲೆ ಕಡಿವಾಣ ಹೇರಲು ಚೆಂಡಿನ ಮೇಲೆ ಎಂಜಲು ಹಚ್ಚಿನ ಹೊಳಪು ತರುವುದು ಅಗತ್ಯ. ಆದರೆ ಕರೊನಾ ವೈರಸ್ ಹಾವಳಿ ಶುರುವಾದ ಬಳಿಕ ಐಸಿಸಿ, ಕ್ರಿಕೆಟಿಗರು ಚೆಂಡಿನ ಮೇಲೆ ಎಂಜಲು ಹೆಚ್ಚುವುದನ್ನು ನಿಷೇಧಿಸಿದೆ. ಸೋಂಕು ಹರಡುವ ಭಯ ಇದಕ್ಕೆ ಕಾರಣವಾಗಿದೆ. ಇದರ ಹೊರತಾಗಿಯೂ ಪಾಕಿಸ್ತಾನದ ವೇಗದ ಬೌಲರ್ ಮೊಹದ್ ಆಮೀರ್ ಆತಿಥೇಯ ಇಂಗ್ಲೆಂಡ್ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದ ವೇಳೆ ಚೆಂಡಿಗೆ ಎಂಜಲು ಹಚ್ಚಿ ತಿಕ್ಕಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪಂದ್ಯದಲ್ಲಿ ಆಮೀರ್ ಬೌಲಿಂಗ್ ಮಾರ್ಕ್ಗೆ ಮರಳುವ ವೇಳೆ ಬಾಯಿಯಿಂದ ಎಂಜಲು ತೆಗೆದು ಚೆಂಡಿಗ ಹಚ್ಚಿರುವುದು ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಮೀರ್ರ ಮೊದಲ ಓವರ್ನ ಬಳಿಕ ಅಂಪೈರ್ಗಳು ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ ಬಳಿಕ ಅವರು ಇದನ್ನು ಮುಂದುವರಿಸಿಲ್ಲ ಎನ್ನಲಾಗಿದೆ.
ಐಸಿಸಿ ನಿಯಮದ ಪ್ರಕಾರ, ಮೊದಲ 2 ಬಾರಿ ಚೆಂಡಿಗೆ ಎಂಜಲು ಹಚ್ಚಿದಾಗ ಎಚ್ಚರಿಕೆ ನೀಡಲಾಗುವುದು. 3ನೇ ಬಾರಿ ಇದೇ ತಪ್ಪನ್ನು ಮಾಡಿದರೆ 5 ರನ್ ದಂಡ ವಿಧಿಸಲಾಗುತ್ತದೆ.
ಆಮೀರ್ ಚೆಂಡಿಗೆ ಎಂಜಲು ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ. ಅಲ್ಲದೆ ಆಮೀರ್ ಇದೇ ತಪ್ಪನ್ನು ಒಂದಕ್ಕಿಂತ ಹೆಚ್ಚು ಬಾರಿ ಮಾಡಿದ್ದರೂ, ಅಂಪೈರ್ ಇದನ್ನು ಗಮನಿಸದಿರುವುದು ಭಾರಿ ಚರ್ಚೆಗೂ ಗ್ರಾಸವಾಗಿದೆ.