Rishabh Pant: 'ಅವನು ಆಸ್ಟ್ರೇಲಿಯನ್ ಆಗಿರಬೇಕೆಂದು ಬಯಸುತ್ತೇನೆ': ಭಾರತೀಯ ಕ್ರಿಕೆಟಿಗನ ಕುರಿತು ಮಾರ್ಷ್ ಅಚ್ಚರಿ ಹೇಳಿಕೆ!

Rishabh Pant
Rishabh Pant
Published on

ನವದೆಹಲಿ: ರಸ್ತೆ ಅಪಘಾತದಿಂದ ಚೇತರಿಸಿಕೊಂಡು ಸುದೀರ್ಘ ವಿರಾಮದ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ರಿಷಬ್​ ಪಂತ್(Rishabh Pant)​ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ್ದು, ಅವರಿಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಪ್ರತಿಕ್ರಿಯಿಸುವಾಗ, ಪಂತ್​ ಆಸ್ಟ್ರೇಲಿಯನ್​ ಆಗಿದ್ದರೆ ಉತ್ತಮ ಚೆನ್ನಾಗಿರುತ್ತಿತ್ತು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಂತ್ ಬಗ್ಗೆ ಮಾರ್ಷ್ ಪ್ರತಿಕ್ರಿಯಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪಂತ್​ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಈಗವರು ಬಲವಾಗಿ ಮರಳಿದ್ದಾರೆ. ಅವರು ತುಂಬಾ ಧನಾತ್ಮಕವಾಗಿದ್ದಾರೆ. ಅವರು ಗೆಲ್ಲಲು ಇಷ್ಟಪಡುತ್ತಾರೆ. ಅವರು ಚೆನ್ನಾಗಿ ಸ್ಪರ್ಧಿಸುತ್ತಾರೆ. ಅವರು ಯಾವಾಗಲೂ ನಗುತ್ತಿರುತ್ತಾರೆ" ಎಂದು ಮಾರ್ಷ್ ಹಾಡಿಹೊಗಳಿದ್ದಾರೆ.

ಈ ಸಂದರ್ಶನದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಆಸೀಸ್ ಆಟಗಾರ ಟ್ರಾವಿಸ್ ಹೆಡ್ ಕೂಡ ಪಂತ್ ಬಗ್ಗೆ ಒಳ್ಳೇಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಅವರು ತುಂಬಾ ಆಕ್ರಮಣಕಾರಿಯಾಗಿ ಆಡುತ್ತಾರೆ. ಅವರು ಆಟವನ್ನು ತುಂಬಾ ಆನಂದಿಸುತ್ತಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್​ಸ್ಟಾಗ್ರಾಮ್​ನಲ್ಲಿ ಪಂತ್ ಪ್ರತಿಕ್ರಿಯಿಸಿದ್ದಾರೆ. ನಗುತ್ತಿರುವ ಎಮೋಜಿಗಳೊಂದಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಕಮ್ಮಿನ್ಸ್ ಸಹ ಪ್ರತಿಕ್ರಿಯೆ:

ಇತ್ತೀಚೆಗೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ರಿಷಬ್ ಪಂತ್(Rishabh Pant) ಬಗ್ಗೆ ಪ್ರಮುಖ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸತತ ಎರಡು ಟೆಸ್ಟ್ ಸರಣಿಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಇತಿಹಾಸವನ್ನು ಸೃಷ್ಟಿಸುವಲ್ಲಿ ಪಂತ್ ಪ್ರಮುಖ ಪಾತ್ರ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net