ಅಫ್ಘಾನಿಸ್ತಾನ ಎದುರು ಸುಲಭ ಗೆಲುವು ದಾಖಲಿಸಿದ ಬಾಂಗ್ಲಾ: ಮೆಹಿದಿ ಹಸನ್ ಮಿರಾಜ್ ಆಲ್ರೌಂಡ್ ಆಟ

New-Project-11
Published on

ಧರ್ಮಶಾಲಾ: ಆಲ್ರೌಂಡರ್ ಮೆಹಿದಿ ಹಸನ್ ಮಿರಾಜ್ (57 ರನ್, 73 ಎಸೆತ, 5 ಬೌಂಡರಿ ಹಾಗೂ 25ಕ್ಕೆ 3 ವಿಕೆಟ್) ಆಲ್ರೌಂಡ್ ಆಟದ ಬಲದಿಂದ ಬಾಂಗ್ಲಾದೇಶ ತಂಡ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅ್ಘಾನಿಸ್ತಾನ ಎದುರು 6 ವಿಕೆಟ್‌ಗಳಿಂದ ಗೆಲುವಿನ ಆರಂಭ ಕಂಡಿದೆ.

ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಇಳಿದ ಆ್ಘನ್, ಮೆಹಿದಿ ಹಸನ್ ಹಾಗೂ ನಾಯಕ ಶಕೀಬ್ ಅಲ್ ಹಸನ್ (30ಕ್ಕೆ 3) ಸ್ಪಿನ್ ದಾಳಿಗೆ ನಲುಗಿ 37.2 ಓವರ್‌ಗಳಲ್ಲಿ 156 ರನ್‌ಗಳಿಗೆ ಸರ್ವಪತನ ಕಂಡಿತು. ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾ, ಮೆಹಿದಿ ಹಸನ್ ಮತ್ತು ನಜ್ಮೂಲ್ ಹೊಸೈನ್ ಶಾಂಟೋ (59* ರನ್, 83 ಎಸೆತ, 3 ಬೌಂಡರಿ, 1 ಸಿಕ್ಸರ್) 3ನೇ ವಿಕೆಟ್‌ಗೆ ಸೇರಿಸಿದ 97 ರನ್ ಜತೆಯಾಟದಿಂದ 34.4 ಓವರ್‌ಗಳಲ್ಲಿ 4 ವಿಕೆಟ್‌ಗೆ 158 ರನ್ ಪೇರಿಸಿ ಸುಲಭ ಗೆಲುವು ದಾಖಲಿಸಿತು.

ಅ್ಘಾನಿಸ್ತಾನ: 37.2 ಓವರ್‌ಗಳಲ್ಲಿ 156 (ಗುರ್ಬಜ್ 47, ಇಬ್ರಾಹಿಂ 22, ರಹಮತ್ ಷಾ 18, ಅಜ್ಮತ್ ಉಲ್ಲಾ 22, ಶಕೀಬ್ 30ಕ್ಕೆ3, ಮೆಹಿದಿ 25ಕ್ಕೆ 3, ಶೋರುುಲ್ 34ಕ್ಕೆ2). ಬಾಂಗ್ಲಾ: 34.4 ಓವರ್‌ಗಳಲ್ಲಿ 158 (ಲಿಟನ್ ದಾಸ್ 13, ಮೆಹಿದಿ 57, ನಜ್ಮೂಲ್ 59*, ಶಕೀಬ್ 14, ಅಜ್ಮತ್ ಉಲ್ಲಾ 9ಕ್ಕೆ 1). ಪಂದ್ಯಶ್ರೇಷ್ಠ: ಮೆಹಿದಿ ಹಸನ್ ಮಿರಾಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net