

ಬೆಂಗಳೂರು: ಐದನೇ ಆವೃತ್ತಿಯ ಮಿನಿ ಕರ್ನಾಟಕ ಕ್ರೀಡಾಕೂಟದ ಹ್ಯಾಂಡ್ಬಾಲ್ ಸ್ಪರ್ಧೆಯಲ್ಲಿ ಹಾವೇರಿ ಹಾಗೂ ಮಂಡ್ಯ ಜಿಲ್ಲಾ ತಂಡಗಳು ಕ್ರಮವಾಗಿ ಬಾಲಕರ-ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ಪಟ್ಟ ಅಲಂಕರಿಸಿದವು. ಕಂಠೀರವ ಕ್ರೀಡಾಂಗಣ ಸಹಿತ ನಗರದ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಕ್ರೀಡಾಕೂಟದ ಮೂರನೇ ದಿನ ಕುಸ್ತಿ ಸ್ಪರ್ಧೆಯಲ್ಲಿ ಬೆಳಗಾವಿಯ ಉದಯೋನ್ಮುಖ ಪೈಲ್ವಾನ್ಗಳು ಮೇಲುಗೈ ಸಾಧಿಸಿದರೆ, ವುಶು ಸ್ಪರ್ಧೆಯಲ್ಲಿ ಬಾಗಲಕೋಟೆಯ ಸ್ಪರ್ಧಿಗಳು ಪಾರಮ್ಯ ಮೆರೆದರು. ಟೇಬಲ್ ಟೆನಿಸ್ನಲ್ಲಿ ಬೆಂಗಳೂರು ನಗರ ತಂಡ ಅವಳಿ ಚಿನ್ನ ಜಯಿಸಿತು. 14 ವಯೋಮಿತಿ ಕ್ರೀಡಾಕೂಟದ ುಟ್ಬಾಲ್ನಲ್ಲಿ ಉತ್ತರ ಕನ್ನಡ, ಬೆಳಗಾವಿ, ಗದಗ ಹಾಗೂ ಮೈಸೂರು ಜಿಲ್ಲಾ ತಂಡಗಳು ಮುನ್ನಡೆ ಸಾಧಿಸಿವೆ.
ವಿದ್ಯಾನಗರದ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರ ನಡೆದ ಹ್ಯಾಂಡ್ಬಾಲ್ ೈನಲ್ ಪಂದ್ಯದಲ್ಲಿ ಹಾವೇರಿ ಜಿಲ್ಲಾ ಬಾಲಕರ ತಂಡ 24-21 ಗೋಲುಗಳಿಂದ ಚಿಕ್ಕಬಳ್ಳಾಪುರ ತಂಡವನ್ನು ಸೋಲಿಸಿದರೆ, ಚಿಕ್ಕಮಗಳೂರು, ಶಿವಮೊಗ್ಗ ತಂಡಗಳು ಕಂಚಿನ ಪದಕ ಒಲಿಸಿಕೊಂಡರು. ಬಾಲಕಿಯರ ವಿಭಾಗದಲ್ಲಿ ಮಂಡ್ಯ ಜಿಲ್ಲಾ ತಂಡ 21-11 ಗೋಲುಗಳಿಂದ ಬೆಂಗಳೂರು ನಗರ ತಂಡವನ್ನು ಮಣಿಸಿ ಚಿನ್ನ ಜಯಿಸಿತು. ಚಿತ್ರದುರ್ಗ, ದಾವಣಗೆರೆ ತಂಡಗಳು ಕಂಚಿನ ಪದಕ ಗೆದ್ದವು.
ಕುಸ್ತಿಯಲ್ಲಿ ಬೆಳಗಾವಿ, ಮೈಸೂರು ಪ್ರಾಬಲ್ಯ
ಬಾಲಕರ ಕುಸ್ತಿ ಗ್ರೀಕೋ ರೋಮನ್ ಸ್ಪರ್ಧೆಯ 38 ಕೆ.ಜಿ ವಿಭಾಗದಲ್ಲಿ ಮೈಸೂರಿನ ಮೊಹಮದ್ ಎನ್ಯಾಜ್ ಉದ್ದೀನ್ ಸ್ವರ್ಣ ಪದಕ ಗೆದ್ದರೆ, ಕಾರವಾರದ ಸ್ವಯಂ ಎಸ್.ಕೆ, ಬೆಳ್ಳಿ, ಶಿವಮೊಗ್ಗ ಚರಣ್, ದಾವಣಗೆರೆಯ ತೇಜಸ್ ಕಂಚಿಗೆ ಕೊರಳೊಡ್ಡಿದರು. 44 ಕೆಜಿಯಲ್ಲಿ ಮೈಸೂರಿನ ದಿನೇಶ್, ೌಜೈಲ್ ಕ್ರಮವಾಗಿ ಚಿನ್ನ, ಬೆಳ್ಳಿ ಗೆದ್ದರೆ, ಬೆಳಗಾವಿಯ ಮಣಿಕಂಠ, ದಾವಣಗೆರೆಯ ನೈತಿಕ್ ಕಂಚು ಒಲಿಸಿಕೊಂಡರು. ಇತರ ವಿಭಾಗಗಳ ಲಿತಾಂಶ (ವಿಜೇತರು ಮಾತ್ರ): 48 ಕೆಜಿ: ನಿತ್ಯಾನಂದ ಸಿದ್ಧಿ (ಉ,ಕನ್ನಡ); 52 ಕೆಜಿ: ಜಯಂತ್ (ಶಿವಮೊಗ್ಗ); 57 ಕೆಜಿ: ಅಮನಲ್ಲಾ ದೊಡ್ಡಮನಿ (ಧಾರವಾಡ); 62 ಕೆಜಿ: ಸಮರ್ಥ ಜ್ಯೋತಿಬಾ (ಬೆಳಗಾವಿ); 68 ಕೆಜಿ: ಸಿದ್ದಾರ್ಥ್ನಾಯಕ್ (ಮೈಸೂರು); ಫ್ರಿಸ್ಟೈಲ್ : 38 ಕೆಜಿ: ವಿನಾಯಕ್ (ಧಾರವಾಡ); 41 ಕೆಜಿ: ಮಹಂತೇಶ್ (ಬಾಗಲಕೋಟೆ); 44 ಕೆಜಿ: ಶಿವಾಜಿ ನಾನಸಾಹೇಬ್; 48 ಕೆಜಿ: ಪ್ರಜ್ವಲ್ (ಮೈಸೂರು); 52 ಕೆಜಿ: ಮನು (ಮೈಸೂರು); 57 ಕೆಜಿ: ಮೋಹನ್ ರಾಜ್;62 ಕೆಜಿ: ರಫೀಕ್ (ಮೈಸೂರು); 68 ಕೆಜಿ: ಸತೀಶ್ (ಬೆಳಗಾವಿ); 85 ಕೆಜಿ: 1. ರಾಜವರ್ಧನ್ (ಬಾಗಲಕೋಟೆ).
ಇತರ ವಿಜೇತರು ಮಾತ್ರ
ಆರ್ಚರಿ: ಬಾಲಕಿಯರ 30 ಮೀ. ಕಾಂಪೌಂಡ್: ಗಿರಿಜಾ ಕೆವಿ; ಇಂಡಿಯನ್ ರೌಂಡ್, 20 ಮೀ.: ಐಶ್ವರ್ಯಾ; ರಿಕರ್ವ್, 300 ಮೀ.: ಅನ್ಯಾ ವರ್ಮ; ಕ್ರಮವಾಗಿ ಬಾಲಕರ ವಿಭಾಗದಲ್ಲಿ ಪ್ರಣವ್, ನಂದನ್ ಕುಮಾರ್, ದಕ್ಷ್ ಎಸ್.ಪಿ. ಪ್ರಥಮ; ಕನೋಯ್-ಕಯಾಕ್: ಡ್ರಾೃಗನ್ ಬೋಟ್ ಮಿಶ್ರ ತಂಡ: ಬೆಂಗಳೂರು ನಗರ; ಬಾಲಕಿಯರ 200 ಮೀ. ಕಯಾಕ್: ಮಲ್ಲಲ ನಿತ್ಯಾಶ್ರೀ; 500 ಮೀ.: ಮಲ್ಲಲ ನಿತ್ಯಾಶ್ರೀ; ಬಾಲಕರ ವಿಭಾಗ: ಧನುಷ್ ರೆಡ್ಡಿ, ಧರ್ವಂತ್ ಕುಶಾದ್; ಕಯಾಕ್ ಮಿಕ್ಸ್-200 ಮೀ.: ಧನುಷ್ ರೆಡ್ಡಿ-ಮಲ್ಲಲ ನಿತ್ಯ ಶ್ರೀ; ಕೆ-2, ಕಯಾಕ್: ಧನುಷ್ ರೆಡ್ಡಿ-ಮಲ್ಲಲ ನಿತ್ಯ ಶ್ರೀ; ೆನ್ಸಿಂಗ್: ಬಾಲಕರ ಈಪ್ಪಿ: ಎಲೊರಿ ಎಲಿಶ; ಬಾಲಕಿಯರ ಸಬ್ರೆ: ಚಾರ್ವಿ ಎಸ್.ಬಿ.; ಾಯಿಲ್: ಮನ್ವಿತಾ (ಚಾಮರಾಜನಗರ); ವುಶು: ಬಾಲಕಿಯರ ಸಂಶೌ-42 ಕೆ.ಜಿ: ಶ್ರೀಜಾ ವಿ.ಕಲ್ಲೊಳ್ಳಿ (ಬಾಗಲಕೋಟೆ); 45 ಕೆಜಿ: ಉಮೈಜಾ ಅಶ್ನಾ (ದ.ಕನ್ನಡ); 48 ಕೆಜಿ: ಅಲೀನಾ ಅಸದ್ (ಮೈಸೂರು); 52 ಕೆಜಿ: ಸುವರ್ಣ ಆರಾಧ್ಯ ವಿದ್ಯಾಧರ್ ಬಡಿಗೇರ್ (ಬಾಗಲಕೋಟೆ); -36 ಕೆಜಿ: ಪ್ರಣತಿ ಜಿ (ಮೈಸೂರು);-39 ಕೆಜಿ: ನಿಹಾರಿಕಾ ಆರ್ (ಬೆಂ.ನಗರ); ಕ್ರಮವಾಗಿ ಬಾಲಕರ ವಿಭಾಗ: ಶಮೀವುಲ್ಲಾ (ದ.ಕನ್ನಡ), ಉಲ್ಲಾಸ ಎಲ್ (ಬೆಂ.ನಗರ), ಮಂಜುನಾಥ್ ಡಿ (ಬೆಂ.ನಗರ), ಸದ್ಗುಣ ಎಸ್.ರೆಡ್ಡಿ (ಬಾಗಲಕೋಟೆ);-36 ಕೆಜಿ: ಸಾನಿಧ್ಯ ಹಿರೇಮಠ (ಬಾಗಲಕೋಟೆ); -39 ಕೆಜಿ: ವಿಶಾಕ್ ಚಿನಪ್ಪ (ಮೈಸೂರು).
ವೇಯ್ಟ ಲಿಫ್ಟಿಂಗ್ನಲ್ಲಿ ದ.ಕನ್ನಡಕ್ಕೆ ಯಶಸ್ಸು
ವೇಯ್ಟ ಲಿಫ್ಟಿಂಗ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಭಾರ ಎತ್ತುವ ಮೂಲಕ ಯಶ ಸಾಧಿಸಿದರು. ಬಾಲಕರ 42 ಕೆಜಿಯಲ್ಲಿ ಬಾಗಲಕೋಟೆಯ ರಾಘವ ಚಿನ್ನ ಗೆದ್ದರೆ, ಬೆಂಗಳೂರು ನಗರದ ಲಕ್ಷೀತ್ ಬೆಳ್ಳಿ, ದ.ಕನ್ನಡದ ಯಶಸ್ ದೇವಾಡಿಗ ಕಂಚು ಗೆದ್ದರು. 48 ಕೆಜಿಯಲ್ಲಿ ಶಿವಮೊಗ್ಗದ ವಿಕ್ರಮ್ ಶಿಂಧೆ ಚಿನ್ನ ಜಯಿಸಿದರೆ, ದಕ್ಷಿಣ ಕನ್ನಡದ ದಿಶಾನ್,ದಾವಣಗೆರೆಯ ಗಗನ್ ದೀಪ್ ಕ್ರಮವಾಗಿ ರಜತ, ಕಂಚಿನ ಪದಕಕ್ಕೆ ಸಮಾಧಾನ ಕಂಡರು. 75ಕೆಜಿ ವಿಭಾಗದಲ್ಲಿ ಉಡುಪಿಯ ಮೈರಾನ್ ಶಾನ್ ಡಿಸೋಜಾ (ಚಿನ್ನ),ದ.ಕನ್ನಡದ ವಿಶ್ವೇಶ್ ಎ. ಶೆಟ್ಟಿ (ಬೆಳ್ಳಿ), ದಕ್ಷ ಎನ್.ಕೆ.(ಕಂಚು) ಪೋಡಿಯಂ ಏರಿದರು. ಇತರ ವಿಭಾಗದ ಚಿನ್ನ ವಿಜೇತರು: ವಂಶಿ. ವಿ.ನಾಯಕ್ (ಉಡುಪಿ), ಜಿತಿನ್ ಎಸ್.ಪೂಂಜಾ (ದಕ್ಷಿಣ ಕನ್ನಡ),ಮೊಹಮ್ಮದ್ ಆದಿಲ್ ಹಸನ್, ಮುಹಮ್ಮದ್ ಶಮ್ಮಾಜ್ (ದಕ್ಷಿಣ ಕನ್ನಡ); ಬಾಲಕಿಯರ 60 ಕೆಜಿಯಲ್ಲಿ ಉಡುಪಿಯ ಮಾನ್ಯಾ ಚಿನ್ನ ಗೆದ್ದರೆ, ಶಿವಮೊಗ್ಗದ ಆಸ್ತಾ ಆರಾಧ್ಯ, ದಕ್ಷಿಣ ಕನ್ನಡದ ವೈಷ್ಣವಿ ಕ್ರಮವಾಗಿ ರಜತ, ಕಂಚು ಗೆದ್ದರು.
ಗಾಲ್ಫ್ ಸ್ಪರ್ಧೆಯ ಆರು ವಿಭಾಗಗಳಲ್ಲಿ ಬೆಂಗಳೂರು ನಗರ ಜಿಲ್ಲೆಯ ಗಾಲ್ಫರ್ಗಳು ಹೆಚ್ಚಿನ ಚಿನ್ನದ ಪದಕ ಬಾಚಿಕೊಂಡರು. ಸ್ಟ್ರೋಕ್ ಪ್ಲೇಯ ವಿವಿಧ ವಯೋಮಿತಿಯ ಸ್ಪರ್ಧೆಗಳು ನಡೆದವು. ವಿಜೇತರು: ರಿಧಿಮಾ ಕಪೂರ್ (ಬೆಂ. ಗ್ರಾಮಾಂತರ),ಆತ್ರೇಯ ಪ್ರಮೋದ್ (ಬೆಂ.ನಗರ), ಸಾನ್ಸಿಯಾ (ಬೆಂ.ದಕ್ಷಿಣ), ಕರ್ಮಣ್ಯ ಮಹಾಜನ್(ಬೆಂ.ನಗರ), ಪ್ರಮತಿ ವೀರ (ಬೆಂ.ನಗರ), ಆರುಷ್ (ಬೆಂ.ನಗರ). ಕ್ರೀಡಾಕೂಟದ ಮೂರನೇ ದಿನ 75 ಸ್ಪರ್ಧೆಯಲ್ಲಿ 75 ಚಿನ್ನ, 74 ರಜತ, 110 ಕಂಚಿನ ಪದಕ ವಿಜೇತರು ಹೊರಹೊಮ್ಮಿದರು.