ಮಿನಿ ಕರ್ನಾಟಕ ಕ್ರೀಡಾಕೂಟ: ಸೈಕ್ಲಿಂಗ್​​ನಲ್ಲಿ ಬಾಗಲಕೋಟೆ ಪಾರಮ್ಯ, ವೇಯ್ಟಲಿಫ್ಟಿಂಗ್‌ನಲ್ಲಿ ದ.ಕನ್ನಡ ಪ್ರಾಬಲ್ಯ

ಐದನೇ ಆವೃತ್ತಿಯ ಮಿನಿ ಕರ್ನಾಟಕ ಕ್ರೀಡಾಕೂಟದ ನಾಲ್ಕನೇ ದಿನದ ಆರ್ಚರಿ, ಈಜು, ಫೆನ್ಸಿಂಗ್ ಮತ್ತು ಟೇಬಲ್ ಟೆನಿಸ್ ಸ್ಪರ್ಧೆಗಳಲ್ಲಿ ಬೆಂಗಳೂರು ನಗರದ ಕ್ರೀಡಾಪಟುಗಳು ಮೇಲುಗೈ ಸಾಧಿಸಿದರು. ಸೈಕ್ಲಿಂಗ್‌ನಲ್ಲಿ ಬಾಗಲಕೋಟೆ ಮತ್ತು ವೇಯ್ಟಲಿಫ್ಟಿಂಗ್‌ನಲ್ಲಿ ದಕ್ಷಿಣ ಕನ್ನಡದ ಕ್ರೀಡಾಪಟುಗಳು ಪ್ರಾಬಲ್ಯ ಸಾಧಿಸಿದರು
ಫೆನ್ಸಿಂಗ್ ಸ್ಪರ್ಧೆಯ ಪದಕ ವಿಜೇತರು
ಫೆನ್ಸಿಂಗ್ ಸ್ಪರ್ಧೆಯ ಪದಕ ವಿಜೇತರುಏಜೆನ್ಸಿ
Published on: 

ಬೆಂಗಳೂರು: ಐದನೇ ಆವೃತ್ತಿಯ ಮಿನಿ ಕರ್ನಾಟಕ ಕ್ರೀಡಾಕೂಟದ ನಾಲ್ಕನೇ ದಿನದ ಆರ್ಚರಿ, ಈಜು, ಫೆನ್ಸಿಂಗ್ ಮತ್ತು ಟೇಬಲ್ ಟೆನಿಸ್ ಸ್ಪರ್ಧೆಗಳಲ್ಲಿ ಬೆಂಗಳೂರು ನಗರದ ಕ್ರೀಡಾಪಟುಗಳು ಮೇಲುಗೈ ಸಾಧಿಸಿದರು. ಸೈಕ್ಲಿಂಗ್‌ನಲ್ಲಿ ಬಾಗಲಕೋಟೆ ಮತ್ತು ವೇಯ್ಟಲಿಫ್ಟಿಂಗ್‌ನಲ್ಲಿ ದಕ್ಷಿಣ ಕನ್ನಡದ ಕ್ರೀಡಾಪಟುಗಳು ಪ್ರಾಬಲ್ಯ ಸಾಧಿಸಿದರು.

ಕಂಠೀರವ ಸ್ಟೇಡಿಯಂ ಸಹಿತ ನಗರದ ವಿವಿಧ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದ ಆರ್ಚರಿ ಸ್ಪರ್ಧೆಯ ಇಂಡಿಯನ್ ರೌಂಡ್ ಬಾಲಕರ ವಿಭಾಗದಲ್ಲಿ ಬೆಂಗಳೂರು ನಗರ ತಂಡದ ನಂದನ್ ಚಿನ್ನ ಗೆದ್ದರೆ, ಮೋನಿತ್ ಹಾಗೂ ಜಿವಿನ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು. ಬಾಲಕಿಯರ ವಿಭಾಗದಲ್ಲಿ ಹಸ್ಕಿನಿ ಚಿನ್ನ ಗೆದ್ದರೆ, ವೀಕ್ಷಾ ಬೆಳ್ಳಿ ಹಾಗೂ ಅನ್ನಾ ಕಂಚಿನ ಪದಕ ಗೆದ್ದರು. ದಕ್ಷ ಹಾಗೂ ತನ್ಯಾ ವೈಯಕ್ತಿಯ ವಿಭಾಗದ ರಿಕರ್ವ್ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಸ್ವರ್ಣ ಗೆದ್ದರು. ಕಂಪೌಂಡ್ ವಿಭಾಗದಲ್ಲಿ ಪ್ರಣವ್ ಹಾಗೂ ಜ್ಞಾನಶ್ರೀ ಬಂಗಾರ ಗೆದ್ದರು. ಮಂಗಳವಾರ ಆರಂಭಗೊಂಡ ನೆಟ್‌ಬಾಲ್ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಬೆಂಗಳೂರು ನಗರ, ಮಂಡ್ಯ, ಮೈಸೂರು ತಂಡಗಳು ಮುನ್ನಡೆ ಸಾಧಿಸಿದರೆ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ನಗರ ತಂಡಗಳು ಶುಭಾರಂಭ ಕಂಡಿವೆ.

ಟೇಕ್ವಾಂಡೋ ಸ್ಪರ್ಧೆಯ ಬಾಲಕಿಯರ ಫ್ರೀಸ್ಟೈಲ್ ವಿಭಾಗದಲ್ಲಿ ಧ್ವನಿ ಸ್ವರ್ಣ ಜಯಿಸಿದರೆ, ಶ್ರೀ ಸಂಯುತಾ ಬೆಳ್ಳಿ, ಕೋಲಾರದ ಅನ್ನಾ ಲಿ ಜಾನ್ ಹಾಗೂ ಬೆಂಗಳೂರು ದಕ್ಷಿಣದ ನಿಹಾರಿಕಾ ಕಂಚು ಗೆದ್ದರು. ಬಾಲಕರ ವಿಭಾಗದಲ್ಲಿ ಜೊಡಾನ್ ಪೌಲ್ ಚಿನ್ನ ಗೆದ್ದರೆ, ಸುಮನ್ ಗಾರ್ತಿ, ಅಕ್ಷಯ್ ಕ್ರಮವಾಗಿ ರಜತ,ಕಂಚು ಗೆದ್ದರು.

ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬಾಗಲಕೋಟೆ ಪಾರಮ್ಯ

14 ವಯೋಮಿತಿ ಕೂಟದ ಸೈಕ್ಲಿಂಗ್‌ನಲ್ಲಿ 8 ಹಾಗೂ 12 ಕಿಮೀ ವಿಭಾಗದಲ್ಲಿ ಬಾಲಕರ-ಬಾಲಕಿಯರ ಸ್ಪರ್ಧೆ ನಡೆಲಾಯಿತು. ಬಾಲಕಿಯರ ವೈಯಕ್ತಿಕ 8 ಹಾಗೂ 12 ಕಿಲೋಮೀಟರ್ ಸ್ಪರ್ಧೆಯಲ್ಲಿ ಬಾಗಲಕೋಟೆ ಜಿಲ್ಲೆಯ ವಿದ್ಯಾ ಎಂ ಲಮಾಣಿ ಸ್ವರ್ಣ, ಸಹನಾ ಮುತ್ತಲ ಬೆಳ್ಳಿ ಗೆದ್ದರೆ, ವೈಷ್ಣವಿ, ಯಲ್ಲವ್ವ ಕ್ರಮವಾಗಿ ಕಂಚು ಗೆದ್ದರು. ಬಾಲಕರ ವೈಯಕ್ತಿಕ ವಿಭಾಗದ 8 ಹಾಗೂ 16 ಕಿಲೋಮೀಟರ್ ಎರಡೂ ಸ್ಪರ್ಧೆಯಲ್ಲಿ ವಿಜಯಪುರದ ಅಕಾಶ್ ಬಿ ತೆರದಾಳ್ ಅವಳಿ ಚಿನ್ನದ ಪದಕ ಸಾಧನೆ ಮಾಡಿದರು. ಅಕ್ಷಯ್ ಶರಣಬಸಪ್ಪ ಎರಡೂರಲ್ಲಿಯೂ ಕಂಚು ಗೆದ್ದರೆ, ಸಂದೇಶ್ (8), ಅಭಯ್ (12) ರಜತಕ್ಕೆ ಕೊರಳೊಡ್ಡಿದರು.

ಮಂಡ್ಯ, ಧಾರವಾಡಕ್ಕೆ ಕಂಚು

ಟೆನಿಸ್ ಸ್ಪರ್ಧೆಯ ತಂಡ ವಿಭಾಗದಲ್ಲಿ ಮಂಡ್ಯ ಹಾಗ ಧಾರವಾಡ ಜಿಲ್ಲಾ ತಂಡಗಳು ಕ್ರಮವಾಗಿ ಬಾಲಕರ-ಬಾಲಕಿಯರ ವಿಭಾಗದಲ್ಲಿ ಕಂಚು ಜಯಿಸಿದವು. ಮೂರನೇ ಸ್ಥಾನಕ್ಕೆ ನಡೆದ ಪ್ಲೇ-ಆ್ ಪಂದ್ಯದಲ್ಲಿ ಮಂಡ್ಯ ತಂಡ 2-1 ರಿಂದ ಶಿವಮೊಗ್ಗ ತಂಡವನ್ನು ಮಣಿಸಿದರೆ, ಧಾರವಾಡ ತಂಡ 2-1 ರಿಂದ ಮೈಸೂರು ವಿರುದ್ಧ ಗೆದ್ದು ಪದಕ ಒಲಿಸಿಕೊಂಡಿತು. ವೈಯಕ್ತಿಕ ಸಿಂಗಲ್ಸ್ ವಿಭಾಗದಲ್ಲಿ ಬೆಂಗಳೂರು ನಗರ ತಂಡದ ಟೆನಿಸ್ ಪಟುಗಳು ಮೇಲುಗೈ ಸಾಧಿಸಿದ್ದು, ಸೆಮೀಸ್ ಪ್ರವೇಶಿಸಿದ್ದಾರೆ.

ವಾಲಿಬಾಲ್‌ನಲ್ಲಿ ಉ.ಕನ್ನಡ, ಉಡುಪಿ ಚಾಂಪಿಯನ್ಸ್

ಬಾಲಕರ ವಾಲಿಬಾಲ್‌ನಲ್ಲಿ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಚಾಂಪಿಯನ್ ಎನಿಸಿದರೆ, ಹಾಸನ ರನ್ನರ್ ಅಪ್, ಕೋಲಾರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ೈನಲ್ ಪಂದ್ಯದಲ್ಲಿ ಉ.ಕನ್ನಡ 3-2ರಿಂದ ಹಾಸನ ತಂಡವನ್ನು ಮಣಿಸಿ ಚಿನ್ನ ಗೆದ್ದಿತು. ಬಾಲಕಿಯರ ವಿಭಾಗ ೈನಲ್‌ನಲ್ಲಿ ಉಡುಪಿ ತಂಡ 3-0 ನೇರ ಗೇಮ್‌ಗಳಿಂದ ಕೊಪ್ಪಳ ತಂಡವನ್ನು ಮಣಿಸಿ, ಸ್ವರ್ಣ ಜಯಿಸಿತು. ದ.ಕನ್ನಡ ತಂಡ ಪ್ಲೇ-ಆ್ನಲ್ಲಿ 3-0 ಬೆಂಗಳೂರು ನಗರ ತಂಡ ವಿರುದ್ಧ ಗೆದ್ದ ಕಂಚು ಒಲಿಸಿಕೊಂಡಿತು.

ಆಧ್ಯಾ, ಮೋಹಿತ್​ಗೆ ಡಬಲ್ ಸ್ವರ್ಣ

ಟೇಬಲ್ ಟೆನಿಸ್‌ನಲ್ಲೂ ಬೆಂಗಳೂರು ನಗರ ಕ್ರೀಡಾಪಟುಗಳು ಹೆಚ್ಚಿನ ಪದಕ ಬಾಚಿಕೊಂಡರು. ಬಾಲಕಿಯರ ಸಿಂಗಲ್ಸ್‌ನಲ್ಲಿ ಆಧ್ಯಾ ಎಂ., ಚಿನ್ನ, ಖುಷಿ ಡಿ. ರಜತ ಗೆದ್ದರು. ಡಬ್ಲಸ್‌ನಲ್ಲಿ ಆಧ್ಯಾ-ಸಾನ್ವಿ ಮತ್ತು ಪರಿಣಿತಾ-ಖುಷಿ ಜೋಡಿ ಕ್ರಮವಾಗಿ ಸ್ವರ್ಣ, ರಜತ ಜಯಿಸಿತು. ಬಾಲಕರ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಮೋಹಿತ್, ರಜತಕ್ಕೆ ತೃಪ್ತಿಪಟ್ಟಿದ್ದ ಪ್ರಥಮ್ ಜತೆಗೂಡಿ ಡಬಲ್ಸ್‌ನಲ್ಲೂ ಸ್ವರ್ಣ ಸಾಧನೆ ಮಾಡಿದರು. ದಕ್ಷಿಣ ಕನ್ನಡದ ಸಾಹಿಲ್-ರಚಿತ್ ಡಬಲ್ಸ್‌ನಲ್ಲಿ ಬೆಳ್ಳಿ ಗೆದ್ದರು.